twitter
    For Quick Alerts
    ALLOW NOTIFICATIONS  
    For Daily Alerts

    ಗಿರೀಶ್ ಕಾರ್ನಾಡರ ಸ್ಮರಿಸಿದ ಕಿಚ್ಚ ಸುದೀಪ್, ಸಂಯುಕ್ತ ಹೊರನಾಡು

    |

    ಖ್ಯಾತ ನಾಟಕಕಾರ, ಜ್ಞಾನಪೀಠ ಪುರಸ್ಕೃತ ಸಾಹಿತಿ, ನಟ ಗಿರೀಶ್ ಕಾರ್ನಾಡರು ಹುಟ್ಟಿದ ದಿನ ಇಂದು (ಮೇ 19). ಕನ್ನಡ ಚಿತ್ರರಂಗ, ನಾಟಕರಂಗ, ಸಾಹಿತ್ಯ ಕ್ಷೇತ್ರಕ್ಕೆ ಹಲವು ಕೊಡುಗೆ ನೀಡಿದ ಗಿರೀಶ್ ಕಾರ್ನಾಡರನ್ನು ನಟ ಸುದೀಪ್ ಇಂದು ನೆನಪಿಸಿಕೊಂಡಿದ್ದಾರೆ.

    'ಗಿರೀಶ್ ಕಾರ್ನಾಡರ ಬಗ್ಗೆ ಎಷ್ಟೇ ಹೇಳಿದರು ಅದು ಕಡಿಮೆಯೆ. ಕನ್ನಡ ಸಿನಿಮಾರಂಗಕ್ಕೆ, ನಾಟಕ ರಂಗಕ್ಕೆ, ಸಾಹಿತ್ಯಕ್ಕೆ, ಸಮಾಜಕ್ಕೆ ಕಾರ್ನಾಡರು ನೀಡಿರುವ ಕೊಡುಗೆ ಅಗಣಿತ. ಗಿರೀಶ್ ಕಾರ್ನಾಡ್ ಎಂಬ ದಂತಕತೆಯನ್ನು ಅವರ ಹುಟ್ಟುಹಬ್ಬದಂದು ಸ್ಮರಿಸುತ್ತಿದ್ದೇನೆ' ಎಂದು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ ಸುದೀಪ್.

    ಸುದೀಪ್ ನಿರ್ದೇಶಿಸಿದ್ದ 'ಕೆಂಪೇಗೌಡ' ಸಿನಿಮಾದಲ್ಲಿ ನಾಯಕಿ ರಾಗಿಣಿ ದ್ವಿವೇದಿ ತಂದೆಯ ಪಾತ್ರದಲ್ಲಿ ಗಿರೀಶ್ ಕಾರ್ನಾಡ್ ನಟಿಸಿದ್ದರು.

    Sudeep Remembered Actor, Director Girish Karnad On His Birth Anniversary

    ನಾಟಕದ ಹಿನ್ನೆಲೆಯಿಂದ ಸಿನಿಮಾಕ್ಕೆ ಬಂದಿರುವ ನಟಿ ಸಂಯುಕ್ತಾ ಹೊರನಾಡು ಸಹ ಗಿರೀಶ್ ಕಾರ್ನಾಡರ ಹುಟ್ಟುಹಬ್ಬದಂದು ಅವರನ್ನು ಸ್ಮರಿಸಿಕೊಂಡಿದ್ದಾರೆ. ಗಿರೀಶ್ ಕಾರ್ನಾಡ್ ಅವರೊಟ್ಟಿಗೆ ತೆಗೆಸಿಕೊಂಡಿರುವ ಚಿತ್ರವನ್ನು ಟ್ವಿಟ್ಟರ್‌ನಲ್ಲಿ ಪ್ರಕಟಿಸಿರುವ ಸಂಯುಕ್ತ ಹೊರನಾಡು, 'ರಂಗಶಂಕರದಲ್ಲಿ ನನ್ನ ಮೊದಲ ನಾಟಕ ಪ್ರದರ್ಶನದ ಬಳಿಕ ಈ ಚಿತ್ರ ತೆಗೆಸಿಕೊಂಡಿದ್ದೆ' ಎಂದು ನೆನಪು ಹಂಚಿಕೊಂಡಿದ್ದಾರೆ.

    ಮುಂದುವರೆದು, 'ನನ್ನ ಮೊದಲ ಸಿನಿಮಾ ಗಿರೀಶ್ ಕಾರ್ನಾಡರೊಟ್ಟಿಗೆ ನಟಿಸಿದೆ. ನನ್ನ ಮೊದಲ ನಾಟಕದ ಕೋರ್ಸ್‌ ಸಹ ಅವರ ಮಾರ್ಗದರ್ಶನದಲ್ಲಿಯೇ ಆಯಿತು. ಸಾಕಷ್ಟು ಬೆಚ್ಚಗಿನ ನೆನಪುಗಳು ಅವರೊಟ್ಟಿಗಿದೆ. ಅತ್ಯದ್ಭುತ ಬರಹಗಾರ, ನಿರ್ದೇಶಕ, ಪ್ರೇರೇಪಕ ಗಿರೀಶ್ ಕಾರ್ನಾಡರನ್ನು ಅವರ 83ನೇ ಹುಟ್ಟುಹಬ್ಬದಂದು ಸ್ಮರಿಸುತ್ತೇನೆ' ಎಂದಿದ್ದಾರೆ.

    Sudeep Remembered Actor, Director Girish Karnad On His Birth Anniversary


    ಗಿರೀಶ್ ಕಾರ್ನಾಡರು ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ, ಮರಾಠಿ ಭಾಷೆಗಳ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದ ಸಾರ್ವಕಾಲಿಕ ಶ್ರೇಷ್ಟ ಸಿನಿಮಾಗಳಲ್ಲಿ ಒಂದಾದ 'ಸಂಸ್ಕಾರ' ಸಿನಿಮಾದಲ್ಲಿನ ಪ್ರಾಣೇಶಾಚಾರ್ಯರ ಪಾತ್ರದ ಮೂಲಕ ನಟನೆ ಆರಂಭಿಸಿದ ಕಾರ್ನಾಡರು. ಕನ್ನಡ ಸಿನಿಮಾ ರಂಗ ಎಂದೂ ಮರೆಯಲಾಗದ ಕೆಲವು ಅತ್ಯುತ್ತಮ ಸಿನಿಮಾಗಳನ್ನು ನಿರ್ದೇಶನ ಸಹ ಮಾಡಿದ್ದಾರೆ.

    'ವಂಶ-ವೃಕ್ಷ', ಶಂಕರ್ ನಾಗ್‌ ಅನ್ನು ಸಿನಿಮಾರಂಗಕ್ಕೆ ಪರಿಚಯಿಸಿದ 'ಒಂದಾನೊಂದು ಕಾಲದಲ್ಲಿ', ಕುವೆಂಪು ಅವರ ಕಾದಂಬರಿ ಆಧರಿಸಿ 'ಕಾನೂರು ಹೆಗ್ಗಡತಿ', ಅಮರೀಶ್ ಪುರಿ ಕನ್ನಡದಲ್ಲಿ ನಟಿಸಿದ 'ಕಾಡು', ರೇಖಾ ನಟಿಸಿದ ಹಿಂದಿಯ 'ಉತ್ಸವ್' ಇನ್ನೂ ಹಲವರು ಅತ್ಯುತ್ತಮ ಕ್ಲಾಸಿಕ್ ಸಿನಿಮಾಗಳನ್ನು ಕಾರ್ನಾಡರು ನಿರ್ದೇಶಿಸಿದ್ದಾರೆ. ಜೊತೆಗೆ ದ.ರ.ಬೇಂದ್ರೆ ಅವರ ಕುರಿತ ಸುಂದರವಾದ ಡಾಕ್ಯುಮೆಂಟರಿಯನ್ನು ಕಾರ್ನಾಡರು ನಿರ್ದೇಶನ ಮಾಡಿದ್ದಾರೆ. ಕನ್ನಡದಲ್ಲಿ ನಿರ್ಮಾಣವಾಗಿರುವ ಕೆಲವೇ ಅತ್ಯುತ್ತಮ ಡಾಕ್ಯುಮೆಂಟರಿಗಳಲ್ಲಿ ದ.ರ.ಬೇಂದ್ರೆ ಕುರಿತು ಗಿರೀಶರು ನಿರ್ದೇಶಿಸಿರುವ ಡಾಕ್ಯುಮೆಂಟರಿ ಸಹ ಒಂದು.

    ಸಾಹಿತ್ಯದಲ್ಲಿಯೂ ಅಪಾರ ಸೇವೆ ಸಲ್ಲಿಸಿರುವ ಕಾರ್ನಾಡರು, 'ಯಯಾತಿ', 'ತುಘಲಕ್', 'ಅಗ್ನಿ ಮತ್ತು ಮಳೆ', 'ಹಯವದನ', 'ಹಿಟ್ಟಿನ ಹುಂಜ', 'ಅಂಜುಮಲ್ಲಿಗೆ', 'ತಲೆದಂಡ', 'ನಾಗಮಂಡಲ', 'ಟಿಪ್ಪು ಸುಲ್ತಾನ್ ಕಂಡ ಕನಸು', 'ಒಡಕಲು ಬಿಂಬ' ಇನ್ನೂ ಹಲವಾರು ಕೃತಿಗಳನ್ನು ರಚಿಸಿದ್ದಾರೆ ಕಾರ್ನಾಡರು. ಕಾರ್ನಾಡರಿಗೆ ಅವರ ಸಮಗ್ರ ಸಾಹಿತ್ಯ ಪರಿಗಣಿಸಿ ಜ್ಞಾನಪೀಠ ಪ್ರಶಸ್ತಿ ನೀಡಲಾಗಿದೆ.

    English summary
    Kichcha Sudeep remembered actor, director, poet Girish Karnad on his 83rd birth anniversary. Actress Samyukta Hornad also remembered Girish Karnad.
    Wednesday, May 19, 2021, 17:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X