ಅಂಬರೀಶ್ ಪುಣ್ಯಸ್ಮರಣೆ; ಅಂಬಿ ಮಾಮನನ್ನು ನೆನೆದ ಕಿಚ್ಚ ಸುದೀಪ್

ನಟ, ರೆಬಲ್ ಸ್ಟಾರ್ ಅಂಬರೀಶ್ ಅವರ ಎರಡನೇ ವರ್ಷದ ಪುಣ್ಯ ತಿಥಿಯನ್ನು ಇಂದು (ನವೆಂಬರ್ 24) ನೆರವೇರಿಸಲಾಗಿದೆ. ಇಂದು ಚಿತ್ರರಂಗದ ಅನೇಕ ಗಣ್ಯರು ಅಂಬರೀಶ್ ನೆನೆದು ಭಾವುಕ ಟ್ವೀಟ್ ಮಾಡಿದ್ದಾರೆ. ಪ್ರೀತಿಯ ಅಂಬಿಮಾಮನ ಬಗ್ಗೆ ನಟ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

Recommended Video

ಅಂಬಿ ಅಪ್ಪಾಜಿ ಬಯ್ಯೋದನ್ನ ತುಂಬಾ ಮಿಸ್ ಮಾಡ್ಕೋತಾ ಇದ್ದೀನಿ ಎಂದ ದರ್ಶನ್ | Filmibeat Kannada

'ನಿಮ್ಮ ಬಗ್ಗೆ ಏನೇ ಹೇಳಿದ್ರು ಕಡಿಮೆ ಆಗುತ್ತೆ ಮಾಮ. ನಿಮ್ಮ ಸುತ್ತ ಇದ್ದ ಪ್ರತಿಯೊಬ್ಬರು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ನಿಮ್ಮ ಸುತ್ತ ಇರುವುದನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ' ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಅಂಬರೀಶ್ ಮತ್ತು ಸುದೀಪ್ ಅಭಿನಯದ ಕೊನೆಯ ಸಿನಿಮಾ 'ಅಂಬಿ ನಿಂಗೆ ವಯಸ್ಸಾಯ್ತೋ' ಸಿಸಿನಿಮಾದ ಫೋಟೋವನ್ನು ಹಂಚಿಕೊಂಡಿದ್ದಾರೆ.

ಫೋಟೋದಲ್ಲಿ 'ಪ್ರತಿಯೊಬ್ಬ ಕನ್ನಡಿಗನ ಮನಸ್ಸಿನಲ್ಲೂ ಚಿರಸ್ಥಾಯಿಯಾಗಿದ್ದೀರ. ನಿಮ್ಮ ನೆನಪು ಸದಾ ನಮ್ಮೊಂದಿಗೆ ಅಜರಾಮರ' ಎಂದು ಬರೆದಿದೆ.

 Sudeep remembers Ambareesh on his second death anniversary

ಅಂಬರೀಶ್ ಗೆ ಬಹಳ ಹತ್ತಿರವಾಗಿದ್ದ ಚಿತ್ರರಂಗದ ಕಲಾವಿದರಲ್ಲಿ ಸುದೀಪ್ ಕೂಡ ಒಬ್ಬರು. ಬಾಲ್ಯದಿಂದ ಅಂಬರೀಶ್ ಜೊತೆಗೆ ಸುದೀಪ್ ಗೆ ಉತ್ತಮ ಒಡನಾಡ ಇತ್ತು. ತಮ್ಮ ಕುಟುಂಬದ ಹಿರಿಯಣ್ಣನಂತೆ ಅಂಬರೀಶ್ ಇದ್ದರು.

ಅಂದಹಾಗೆ ಇಂದು ಅವರ ಪುಣ್ಯಸ್ಮರಣೆ ಅಂಗವಾಗಿ ಕುಟುಂಬಸ್ಥರು, ಸ್ನೇಹಿತರು ಹಾಗೂ ಅಭಿಮಾನಿಗಳು ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್ ಸಮಾಧಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಟಿ ಮತ್ತು ಸಂಸದೆ ಸುಮಲತಾ ಅಂಬರೀಶ್, ಪುತ್ರ ಅಭಿಷೇಕ್, ನಟ ದರ್ಶನ್ ಮತ್ತು ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಅನೇಕ ಗಣ್ಯರು ಸಮಾಧಿಗೆ ಪೂಜೆ ಮಾಡಿ, ಅಂಬರೀಶ್ ಗೆ ಗೌರವ ಸಲ್ಲಿಸಿದರು.

More from Filmibeat

English summary
Actor Sudeep remembers Ambareesh on his second death anniversary.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X