ಡಿ-ಬಾಸ್ ಅಭಿಮಾನಿ ಕೇಳಿದ ಪ್ರಶ್ನೆಗೆ ಕೂಲ್ ಆಗಿ ಪ್ರತಿಕ್ರಿಯಿಸಿದ ಸುದೀಪ್.!

By Bharath Kumar

Recommended Video

ಡಿ ಬಾಸ್ ಅಭಿಮಾನಿಗೆ ಕಿಚ್ಚ ಅಂದಿರೋದಾದ್ರೂ ಏನು ? | Filmibeat Kannada

ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಟ್ಟಿಗೆ ಸಿನಿಮಾ ಮಾಡ್ಬೇಕು, ಒಟ್ಟಿಗೆ ವೇದಿಕೆ ಹಂಚ್ಕೊಬೇಕು, ಒಟ್ಟಿಗೆ ಕಾಣಿಸಿಕೊಳ್ಳಬೇಕು ಎಂಬುದು ಇಬ್ಬರು ಅಭಿಮಾನಿಗಳ ಆಸೆ ಮತ್ತು ಕೋರಿಕೆ.

ಇದು ಯಾವಾಗ ನೆರವೇರುತ್ತೆ ಎಂದು ಡಿ ಬಾಸ್ ಮತ್ತು ಕಿಚ್ಚ ಅಭಿಮಾನಿಗಳು ಕಾಯ್ತಿದ್ದಾರೆ. ಈ ಇಬ್ಬರು ನಟರು ಸಿಕ್ಕಾಗೆಲ್ಲ ಯಾವಾಗ ಸಿನಿಮಾ ಮಾಡ್ತೀರಾ, ಯಾವಾಗ ಇಬ್ಬರು ಸಿನಿಮಾ ಮಾಡ್ತೀರಾ ಎಂದು ಕೇಳುತ್ತಲೇ ಇರ್ತಾರೆ.

ಇನ್ನು ದರ್ಶನ್ ಮತ್ತು ಸುದೀಪ್ ಕೂಡ ಇಂತಹ ಪ್ರಶ್ನೆಗಳಿಗೆ ಪರೋಕ್ಷವಾಗಿ ಉತ್ತರ ಕೊಡುತ್ತಾ ಬರುತ್ತಿದ್ದಾರೆ. ಇದೀಗ, ಡಿ ಬಾಸ್ ಅಭಿಮಾನಿಯೊಬ್ಬರು ಸುದೀಪ್ ಅವರಿಗೆ ಟ್ವಿಟ್ಟರ್ ಮೂಲಕ ಇಂತಹದ್ದೇ ಪ್ರಶ್ನೆಯೊಂದನ್ನ ಕೇಳಿದ್ದಾರೆ. ಅದಕ್ಕೆ ಸುದೀಪ್ ಕೂಡ ಕೂಲ್ ಆಗಿ ರೆಸ್ಪಾನ್ಸ್ ನೀಡಿದ್ದಾರೆ. ಏನದು.? ಮುಂದೆ ಓದಿ.....

ಅಭಿಮಾನಿ ಕೇಳಿದ ಪ್ರಶ್ನೆ

''ನಮ್ಮ ದರ್ಶನ್ ಬಾಸ್ ಜೊತೆ ನೀವು ಯಾವಾಗ ಸಿನಿಮಾ ಮಾಡ್ತೀರಾ ಸುದೀಪ್ ಸರ್. ನಿಮ್ಮರನ್ನ ಒಂದೇ ಸಿನಿಮಾದಲ್ಲಿ ನೋಡಲು ಕಾಯ್ತಿದ್ದೀವಿ. ಈ ಸಿನಿಮಾ ಬಂದ್ರೆ ಖಂಡಿತಾ ಬಾಕ್ಸ್ ಆಫೀಸ್ ಚಿಂದಿ ಆಗುತ್ತೆ'' ಎಂದು ದರ್ಶನ್ ಅಭಿಮಾನಿಯೊಬ್ಬ ಸುದೀಪ್ ಅವರನ್ನ ಪ್ರಶ್ನಿಸಿದ್ದಾರೆ.

ಸುದೀಪ್ ಕೊಟ್ಟ ಕೂಲ್ ಉತ್ತರ

''ದರ್ಶನ್ ಜೊತೆ ಸಿನಿಮಾವನ್ನ ಯಾವಾಗ ಬೇಕಾದರೂ ಮಾಡಬಹುದು'' ಎಂದು ಹೇಳುವ ಮೂಲಕ ಅಭಿಮಾನಿಗಳ ಆಸೆಯನ್ನ ಜೀವಂತವಾಗಿರಿಸಿದ್ದಾರೆ. ಬಹುಶಃ ಇವರಿಬ್ಬರು ಒಟ್ಟಿಗೆ ಸಿನಿಮಾ ಮಾಡೋದು ಅನುಮಾನ, ಇನ್ನು ಮುಂದೆ ಇದು ನಡೆಯದ ಕೆಲಸ ಎಂದು ಅನೇಕರು ಅಂದುಕೊಂಡಿದ್ದಾರೆ. ಆದ್ರೆ, ಸುದೀಪ್ ಅವರ ಮಾತು ಕೇಳಿದ ಮೇಲೆ ಈ ಆಸೆ ಮತ್ತಷ್ಟು ಹೆಚ್ಚಾಗಿದೆ.

ಒಟ್ಟಿಗೆ ಸಿನಿಮಾ ಮಾಡಲು ಸ್ಕ್ರಿಪ್ಟ್ ಬೇಕು

ಒಟ್ಟಿಗೆ ಸಿನಿಮಾ ಮಾಡಲು ಸ್ಕ್ರಿಪ್ಟ್ ಬೇಕು

ಹೌದು, ''ಸುದೀಪ್ ಅವರು ಹೇಳುವ ಪ್ರಕಾರ ದರ್ಶನ್ ಜೊತೆ ಯಾವಾಗ ಬೇಕಾದರು ಮಾಡುತ್ತೇನೆ. ಆದ್ರೆ, ಅದಕ್ಕೆ ಒಳ್ಳೆಯ ಸ್ಕ್ರಿಪ್ಟ್ ಬೇಕು ಅಲ್ವಾ.?''. ಇಬ್ಬರು ದೊಡ್ಡ ಹೀರೋಗಳು ಒಟ್ಟಿಗೆ ಸಿನಿಮಾ ಮಾಡ್ತಾರೆ ಅಂದ್ರೆ, ಎರಡು ಪಾತ್ರಗಳಿಗೂ ಸಮಾನ ಮಹತ್ವವಿರಬೇಕು. ಅಂತಹ ಕಥೆ ಬೇಕು. ಅದಕ್ಕೆ ದೊಡ್ಡ ಬಂಡವಾಳ ಬೇಕು ಮತ್ತು ನಿರ್ಮಾಪಕರು ಮುಂದೆ ಬರಬೇಕು.

ಜಗ್ಗೇಶ್ ಕೂಡ ಹಿಂದೊಮ್ಮೆ ಹೇಳಿದ್ದರು

ಜಗ್ಗೇಶ್ ಕೂಡ ಹಿಂದೊಮ್ಮೆ ಹೇಳಿದ್ದರು

ದರ್ಶನ್ ಮತ್ತು ಸುದೀಪ್ ಯಾವಾಗ ಒಂದಾಗ್ತಾರೆ ಎಂದು ಅಭಿಮಾನಿಯೊಬ್ಬ ಕೇಳಿದ್ದಕ್ಕೆ ನಟ ಜಗ್ಗೇಶ್ ಅವರು ಉತ್ತರಿಸಿದ್ದರು. ''ನಿಮ್ಮ ಪ್ರೀತಿ ಹಾರೈಕೆಯಿಂದ ಅವರಿಬ್ಬರು ಒಟ್ಟಿಗೆ ಇರುತ್ತಾರೆ..ಅನುಮಾನ ಬೇಡ.. ಎಷ್ಟೋ ಬಾರಿ ಅಣ್ಣ-ತಮ್ಮ, ಗಂಡ-ಹೆಂಡತಿ, ಬಂಧು-ಬಳಗ, ದೇಶ-ದೇಶಗಳ ಸ್ನೇಹದ ಮುನಿಸು ಮಳೆ ಬಂದ ಮೇಲೆ ಕರಗೋ ಮೋಡದಂತೆ ಕರಗುತ್ತದೆ..ಮುನಿಸು ಕ್ಷಣಿಕ..ಸ್ನೇಹ ನಿರಂತರ.. ಅವರ ಸ್ನೇಹ ಚಿಗುರಲಿ ಎಂದು ಆಶಾಭಾವದೊಂದಿಗೆ ನಿಮ್ಮಂತೆ ನಾನು ಒಬ್ಬ ಕಾಯುತ್ತಿರುವೆ..'' ಎಂದಿದ್ದಾರೆ.

ದರ್ಶನ್-ಸುದೀಪ್ ಒಂದಾಗೋ ಕಾಲ ಬಂದಿದೆ.!

ದರ್ಶನ್-ಸುದೀಪ್ ಒಂದಾಗೋ ಕಾಲ ಬಂದಿದೆ.!

ಇದೆನ್ನಲ್ಲ ಗಮನಿಸಿದಾಗ ದರ್ಶನ್ ಮತ್ತು ಸುದೀಪ್ ಅವರು ಒಂದಾಗುತ್ತಿದ್ದಾರೆ ಎಂಬುದು ಸತ್ಯವಾದಂತೆ ಕಾಣುತ್ತಿದೆ. ಯಾಕಂದ್ರೆ, ಕೇಳೋರು ನೂರು ಜನ, ಕೇಳೋರು ಕೇಳ್ಕೊಳ್ಳಿ ಎಂದು ಬಿಡದೇ, ಅದೇ ಪ್ರಶ್ನೆಗೆ ಸುದೀಪ್ ಆಯ್ಕೆ ಮಾಡಿಕೊಂಡು ಉತ್ತರ ಕೊಟ್ಟಿದ್ದಾರೆ ಅಂದ್ರೆ ಇದು ಪಾಸಿಟೀವ್ ಆಗಿ ನೋಡಬೇಕಿದೆ.

More from Filmibeat

English summary
Kannada actor, kiccha sudeep has give reply to darshan fan. darshan fan was asked to sudeep ''when you and darshan sharing screen.?''
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X