ಉಪ್ಪಿಗೆ ಆಸೆ ಹೇಳಿಕೊಂಡ ಸುದೀಪ್: ಕಿಚ್ಚನ ಆಸೆ ಈಡೇರಿಸುತ್ತಾರಾ ಬುದ್ಧಿವಂತ.?

Recommended Video

I Love You Kannada Movie: ಉಪೇಂದ್ರನಿಗೆ ಅಭಿನಯ ಚಕ್ರವರ್ತಿ ಹೇಳಿದ್ದೇನು? | FILMIBEAT KANNADA

ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಚಿತಾ ರಾಮ್ ಅಭಿನಯದ 'ಐ ಲವ್ ಯೂ' ಸಿನಿಮಾ ಜೂನ್ 14 ರಂದು ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗುತ್ತಿದೆ. ಇತ್ತೀಚಿಗಷ್ಟೆ 'ಐ ಲವ್ ಯೂ' ಚಿತ್ರದ ಟ್ರೈಲರ್ ಮತ್ತು ಆಡಿಯೋ ಬಿಡುಗಡೆ ಸಮಾರಂಭವನ್ನ ಅಧಿಕೃತವಾಗಿ ಮಾಡಲಾಗಿತ್ತು.

ಈ ವಿಶೇಷ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಉಪ್ಪಿ ಅಂಡ್ ಟೀಮ್ ಗೆ ಶುಭ ಕೋರಿದ ಕಿಚ್ಚ, ರಿಯಲ್ ಸ್ಟಾರ್ ಬಳಿ ತಮ್ಮದೊಂದು ಮನವಿ ಮಾಡಿಕೊಂಡರು.

''ನಾನು ಇಲ್ಲಿ ಐ ಲವ್ ಯೂ ಚಿತ್ರಕ್ಕೆ ವಿಶ್ ಮಾಡೋಕೆ ಬಂದಿಲ್ಲ. ಉಪೇಂದ್ರ ಅವರ ಬಳಿ ನನ್ನದೊಂದು ಮನವಿ ಮಾಡಲು ಬಂದಿದ್ದೇನೆ. ಅದನ್ನ ಈಡೇರಿಸಿದರೆ ಸಾಕು' ಎಂದು ಬಹಿರಂಗವಾಗಿ ಹೇಳಿಕೊಂಡರು. ಕಿಚ್ಚನ ಈ ಆಸೆ ಕೇಳಿ ಉಪ್ಪಿ ಸರಿ ಎಂದು ಭರವಸೆ ಕೂಡ ನೀಡಿದ್ರು. ಅಷ್ಟಕ್ಕೂ, ಬುದ್ಧಿವಂತನ ಬಳಿ ಸುದೀಪ್ ಕೇಳಿಕೊಂಡಿದ್ದೇನು? ಮುಂದೆ ಓದಿ.....

ಆ ವಿಷ್ಯದಲ್ಲಿ ಉಪ್ಪಿಗೆ ನಾನೊಬ್ಬನೇ ಎದುರಾಳಿ.!

ಆ ವಿಷ್ಯದಲ್ಲಿ ಉಪ್ಪಿಗೆ ನಾನೊಬ್ಬನೇ ಎದುರಾಳಿ.!

ಉಪ್ಪಿ ಡ್ಯಾನ್ಸ್ ನೋಡಿ ಸರ್ಪ್ರೈಸ್ ಆದ ಸುದೀಪ್ ''ಉಪೇಂದ್ರ ಅವರಿಗೆ ನಾನೊಬ್ಬನೇ ಎದುರಾಳಿ. ಈ ಚಿತ್ರದಲ್ಲಿ ಅವರ ಡ್ಯಾನ್ಸ್ ನೋಡಿದ್ಮೇಲೆ ನಾನು ಎಫರ್ಟ್ ಹಾಕಬೇಕು ಅನಿಸುತ್ತಿದೆ. ಇದು ನನ್ನ ಮರ್ಯಾದೆ ಪ್ರಶ್ನೆ'' ಎಂದು ಖುಷಿಯಾಗಿ ಹೇಳಿಕೊಂಡರು.

ನಮಗೆ ಅವರು ದೊಡ್ಡ ಸ್ಫೂರ್ತಿ

ನಮಗೆ ಅವರು ದೊಡ್ಡ ಸ್ಫೂರ್ತಿ

''ಉಪೇಂದ್ರ ಅವರು ನಮಗೆಲ್ಲ ದೊಡ್ಡ ಸ್ಫೂರ್ತಿ. ಇಂದು ನಾವೇನಾದರೂ ಬೇರೆ ರಾಜ್ಯಗಳಲ್ಲಿ ಸ್ವಲ್ಪ ಕೆಲಸ ಮಾಡಿದ್ದೀವಿ ಅಂದ್ರೆ ಅದಕ್ಕೆ ಇಂತವರು ಸ್ಫೂರ್ತಿ. ಅದನ್ನೆಲ್ಲ ಉಪೇಂದ್ರ ಅವರು ಮಾಡಿಬಿಟ್ಟಿದ್ದಾರೆ'' ಎಂದು ಉಪ್ಪಿ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು.

ನಿಮ್ಮ ಸಿನಿಮಾದಲ್ಲಿ ನೀವು ಅಭಿನಯಿಸಿ

ನಿಮ್ಮ ಸಿನಿಮಾದಲ್ಲಿ ನೀವು ಅಭಿನಯಿಸಿ

''ಸಿನಿಮಾಗಳಲ್ಲಿ ಅಭಿನಯಿಸುವುದರ ಮೂಲಕ ಎಲ್ಲರಿಗೂ ಸ್ಫೂರ್ತಿಯಾಗಿರುವ ನೀವು, ದಯವಿಟ್ಟು ಚಿತ್ರವನ್ನ ನಿರ್ದೇಶನ ಮಾಡುವ ಮೂಲಕ ಸ್ಫೂರ್ತಿ ನೀಡಿ, ನಿಮ್ಮ ನಿರ್ದೇಶನದಲ್ಲಿ ನೀವೇ ಆಕ್ಟ್ ಮಾಡಿ'' ಎಂದು ಕೇಳಿಕೊಂಡರು.

ಪ್ಲೀಸ್ ಡೈರೆಕ್ಷನ್ ಮಾಡಿ

ಪ್ಲೀಸ್ ಡೈರೆಕ್ಷನ್ ಮಾಡಿ

''ಕೆಲವು ನಿರ್ದೇಶಕರು ಮಲಗಬಾರದು. ಇಂಡಸ್ಟ್ರಿಗೆ ಅವರು ಬೇಕು. ಅದರಲ್ಲಿ ಎತ್ತಿದ ಕೈ ಉಪೇಂದ್ರ. ಆರ್ ಚಂದ್ರು, ಪ್ರೇಮ್ ಇನ್ನು ಹಲವರು ಉಪ್ಪಿ ಸರ್ ಅವರ ಸ್ಫೂರ್ತಿಯಿಂದ ಕೆಲಸ ಕಲಿತವರು. ನಾನು ಈ ಕಾರ್ಯಕ್ರಮಕ್ಕೆ ಬರಿ ವಿಶ್ ಮಾಡೋಕೆ ಬರಲಿಲ್ಲ. ನೀವು ಡೈರೆಕ್ಷನ್ ಮಾಡಿ ಎಂದು ಕೇಳೋಕೆ ಬಂದಿದ್ದು. ಪ್ಲೀಸ್ ಡೈರೆಕ್ಷನ್ ಮಾಡಿ'' ಎಂದು ಮನವಿ ಮಾಡಿದರು.

ಡೈರೆಕ್ಷನ್ ಗೆ ಸಿದ್ಧತೆ.!

ಡೈರೆಕ್ಷನ್ ಗೆ ಸಿದ್ಧತೆ.!

ಹಾಗ್ನೋಡಿದ್ರೆ, ಉಪೇಂದ್ರ ಅವರು ತಮ್ಮದೇ 50ನೇ ಚಿತ್ರವನ್ನ ನಿರ್ದೇಶನ ಮಾಡಲಿದ್ದಾರೆ. ಸ್ವತಃ ಉಪ್ಪಿ ಈ ಸುದ್ದಿಯನ್ನ ಖಚಿತಪಡಿಸಿದ್ದಾರೆ. ಆದರೆ ಈ ಪ್ರಾಜೆಕ್ಟ್ ಗೆ ಸಂಬಂಧಿಸಿದಂತೆ ಪ್ರಿ-ಪ್ರೊಡಕ್ಷನ್ ಕೆಲಸ ಮಾಡ್ತಿದ್ದು, ಸದ್ಯದಲ್ಲೇ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರಂತೆ.

More from Filmibeat

English summary
Kiccha sudeep requested to Upendra for direct movie. sudeep Participated in 'i love you' movie trailer launch event as a chief guest.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X