'ನಿಮ್ಮ ಬಾಸ್ ಯಾರು' ಎಂದು ಕೇಳಿದ್ದಕ್ಕೆ ಸುದೀಪ್ ಹೇಳಿದ ಹೆಸರು ಯಾವುದು?
Recommended Video
ಒಬ್ಬೊಬ್ಬರಿಗೆ ಒಬ್ಬೊಬ್ಬರು ಬಾಸ್. ಸಿನಿಮಾ ಇಂಡಸ್ಟ್ರಿಯಲ್ಲಿ ಈ ಬಾಸ್ ಅನ್ನೋ ಪದಕ್ಕೆ ಬಹಳ ಬೇಡಿಕೆ ಇದೆ. ಅದರ ಬಗ್ಗೆ ಹೆಚ್ಚೇನು ಹೇಳುವ ಅವಶ್ಯಕತೆ ಇಲ್ಲ. ಹಾಗಿದ್ರೆ ಈಗೇಕೆ ಬಾಸ್ ಬಗ್ಗೆ ಚರ್ಚೆ ಅಂದ್ರೆ, ಅದಕ್ಕೆ ಕಾರಣ ಕಿಚ್ಚ ಸುದೀಪ್.
ಇತ್ತೀಚಿಗಷ್ಟೆ ಅಭಿನಯದ ಚಕ್ರವರ್ತಿ ಕಿಚ್ಚ ಸುದೀಪ್ AskPailwan ಎಂಬ ಅಭಿಯಾನ ಆರಂಭಿಸಿದ್ದರು. ಈ ಅಭಿಯಾನದಲ್ಲಿ ಸುದೀಪ್ ಅವರ ಬಳಿ ಏನೇ ಕೇಳಬೇಕು ಎಂದುಕೊಂಡಿದ್ದರು ಅದನ್ನ ಕೇಳಬಹುದಿತ್ತು. ಹಾಗೆ, ನೂರಾರು ಸಂಖ್ಯೆಯ ಅಭಿಮಾನಿಗಳು ಪ್ರಶ್ನೆಗಳನ್ನ ಕೇಳಿದ್ದಾರೆ.
ಇದರಲ್ಲಿ ಒಂದು ಪ್ರಶ್ನೆ ಸುದೀಪ್ ಅವರಿಗೆ ಬಂದಿದ್ದು, 'ನಿಮ್ಮ ಬಾಸ್ ಯಾರು?' ಎಂಬುದು. ಅದಕ್ಕೆ ಕಿಚ್ಚ ಸುದೀಪ್ ಕೂಡ ವಿಶೇಷವಾದ ಉತ್ತರವನ್ನೇ ಕೊಟ್ಟಿದ್ದಾರೆ. ಅಷ್ಟಕ್ಕೂ, ಸುದೀಪ್ ಅವರ ಬಾಸ್ ಯಾರು? ಮುಂದೆ ಓದಿ....

ಸುದೀಪ್ ನಿಮ್ಮ ಬಾಸ್ ಯಾರು?
ಕಿಚ್ಚ ಸುದೀಪ್ ಅವರಿಗೆ ಚಿತ್ರರಂಗದಲ್ಲಿ ಬಾಸ್ ಯಾರು ಎಂದು ತಿಳಿದುಕೊಳ್ಳುವ ಕುತೂಹಲದಿಂದ ಅಭಿಮಾನಿ ಪ್ರಶ್ನೆ ಕೇಳಿದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಸುದೀಪ್ ''ನನಗೆ ಬಾಸ್ ಇಲ್ಲ, ಬಾಸ್ ರೂಪದಲ್ಲಿ ನನ್ನ ತಂದೆ ಇದ್ದಾರೆ'' ಎಂದು ಉತ್ತರಿಸುವ ಮೂಲಕ ಅಭಿಮಾನಿಗೆ ಅಚ್ಚರಿ ನೀಡಿದರು.

ರಾಜ್ ಕುಮಾರ್ ಬಗ್ಗೆ ಒಂದು ಮಾತು
ಡಾ ರಾಜ್ ಕುಮಾರ್ ಅವರ ಬಗ್ಗೆ ಒಂದು ಪದದಲ್ಲಿ ಏನು ಹೇಳುತ್ತೀರಾ ಎಂದು ಮತ್ತೊಬ್ಬ ಅಭಿಮಾನಿ ಕೇಳಿದರು. ಅದಕ್ಕೆ ಉತ್ತರಿಸಿದ ಸುದೀಪ್ ಒಂದೇ ಪದದಲ್ಲಿ ''ನಿಜವಾದ ದಂತಕತೆ (A True Legend) ಎಂದರು.

ಧೋನಿ ಬಗ್ಗೆ ಏನಾದರೂ ಹೇಳಿ
ಭಾರತ ಕ್ರಿಕೆಟ್ ತಂಡ ಕಂಡ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಬಗ್ಗೆ ಏನಾದರೂ ಹೇಳಿ ಎಂದು ಇನ್ನೊಬ್ಬ ಅಭಿಮಾನಿ ಕೇಳಿದ್ದಾರೆ. ಕ್ರಿಕೆಟ್ ಬಗ್ಗೆ ಬಹಳ ಆಸಕ್ತಿ ಹೊಂದಿರುವ ಸುದೀಪ್ ಈ ಪ್ರಶ್ನೆಗೆ ''ವಿನ್ನರ್'' ಎಂದು ಒಂದೇ ಪದದಲ್ಲಿ ಉತ್ತರಿಸಿದ್ದಾರೆ.

ಪವನ್ ಕಲ್ಯಾಣ್ ಬಗ್ಗೆ ಸುದೀಪ್ ಹೇಳಿದ್ದೇನು?
ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಕುರಿತು ಒಂದು ಮಾತು ಹೇಳಿ ಎಂದು ಅಭಿಮಾನಿಯೊಬ್ಬರು ಕೇಳಿದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಸುದೀಪ್ ''ಅವರು ರಿಯಲ್'' ಎಂದಷ್ಟೇ ಹೇಳಿದ್ದಾರೆ. ಅದು ಯಾವ ಅರ್ಥದಲ್ಲಿ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ.

ಮಾಣಿಕ್ಯ ಅಥವಾ ಹೆಬ್ಬುಲಿ
ಇನ್ನು ಸುದೀಪ್ ಅಭಿನಯಿಸಿದ್ದ ಎರಡು ರೀತಿಯ ಚಿತ್ರಗಳ ಆಯ್ಕೆ ಕೊಟ್ಟು ಇದರಲ್ಲಿ ನಿಮಗೆ ಯಾವುದು ಇಷ್ಟ ಎಂದು ಪ್ರಶ್ನಿಸಿದ್ದಾರೆ. ಶಾಂತಿ ನಿವಾಸ, ಮಾಣಿಕ್ಯನಾ ತರ ಇಷ್ಟನಾ ಅಥವಾ ಹೆಬ್ಬುಲಿನಾ ತರ ಇಷ್ಟನಾ?. ಇದಕ್ಕೆ ಸುದೀಪ್ ''ನಿಮ್ಮೆಲ್ಲರಿಗೆ ತೃಪ್ತಿ ಕೊಡುವಂತ ಕಥೆ'' ಎಂದು ಹೇಳಿದ್ದಾರೆ.


Click it and Unblock the Notifications











