For Quick Alerts
  ALLOW NOTIFICATIONS  
  For Daily Alerts

  ನಾನು ಕಪ್ಪು ಬಟ್ಟೆ ಹಾಕಲು ಕಾರಣನೇ ರವಿ ಸರ್; ಕಿಚ್ಚ ಸುದೀಪ್

  |

  ಕಿಚ್ಚ ಸುದೀಪ್ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿ 25 ವರ್ಷಗಳು ಪೂರೈಸಿದೆ. ಕಿಚ್ಚನ ಬೆಳ್ಳಿಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ. ಕೋಟಿಗೊಬ್ಬ-3 ಸಿನಿಮಾತಂಡದಿಂದ ಸುದೀಪ್ ಬೆಳ್ಳಿಹಬ್ಬದ ಸಂಭ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

  ನನ್ನ ಟೆಕ್ಷನ್ ಗೆ ಕಾರಣಾನೆ ಶಿವಣ್ಣ | Kichcha Sudeep | Shivanna | Filmbeat Kannada

  ಅಭಿನಯ ಚಕ್ರವರ್ತಿಯ ಬೆಳ್ಳಿಹಬ್ಬದ ಸಂಭ್ರಮದಲ್ಲಿ ಸಿಎಂ ಯಡಿಯೂರಪ್ಪ ವಿಶೇಷ ಅತಿಥಿಯಾಗಿ ಭಾಗಿಯಾಗಿದ್ದರು. ಸುದೀಪ್ ಅವರಿಗೆ ಸನ್ಮಾನ ಮಾಡಿ ಗೌರವಿಸಿದರು. ಇದೇ ವೇದಿಕೆಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರವಿಚಂದ್ರನ್, ರಮೇಶ್ ಅರವಿಂದ್, ಸುನಿಲ್ ಕುಮಾರ್ ದೇಸಾಯಿ, ರವಿಶಂಕರ್ ಸೇರಿದಂತೆ ಇನ್ನು ಹಲವು ಗಣ್ಯರು ಹಾಜರಿದ್ದರು.

  ಸುದೀಪ್ 'ಬೆಳ್ಳಿಹಬ್ಬ': 25 ವರ್ಷದ ಪಯಣದ ಬಗ್ಗೆ ಕಿಚ್ಚನ ಭಾವುಕ ಮಾತುಸುದೀಪ್ 'ಬೆಳ್ಳಿಹಬ್ಬ': 25 ವರ್ಷದ ಪಯಣದ ಬಗ್ಗೆ ಕಿಚ್ಚನ ಭಾವುಕ ಮಾತು

  ಈ ಸಮಯದಲ್ಲಿ ಮಾತನಾಡಿದ ಕಿಚ್ಚ ಸುದೀಪ್, 'ನನಗಿಂತಲೂ ಹಿರಿಯರು ಇಲ್ಲಿದ್ದಾರೆ. ನನಗಿಂತಲೂ ಮುಂಚೆ ಅವರು ಸಿನಿಯಾನ ಆರಂಭಿಸಿದ್ದಾರೆ, ಅವರ ನೆರಳಿನಲ್ಲಿ ನಾನು ಸಾಗಿಬಂದಿದ್ದೇನೆ' ಎಂದರು.

  ಚಿತ್ರರಂಗಕ್ಕೆ ಧನ್ಯವಾದ ತಿಳಿಸುತ್ತಾ ಮಾತು ಪ್ರಾರಂಭಿಸಿದ ಕಿಚ್ಚ ಕಪ್ಪು ಬಟ್ಟೆ ಧರಿಸುವ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿ ಬಹಿರಂಗಪಡಿಸಿದರು. 'ಕಪ್ಪು ಬಟ್ಟೆ ಧರಿಸಲು ಕಾರಣ ರವಿ ಸರ್' ಎಂದು ಹೇಳಿದ್ದಾರೆ. ಚಿಕ್ಕವನಾಗಿದ್ದಾಗಿಂದ ರವಿಚಂದ್ರನ್ ಅವರ ಸಿನಿಮಾಗಳನ್ನು ನೋಡಿ ಬೆಳೆದವನು. ಅವರ ಸಿನಿಮಾಗಳನ್ನು ನೋಡಿ ನಾನು ಕೂಡ ಕಪ್ಪು ಬಟ್ಟೆ ಹಾಕುತ್ತಿದ್ದೆ ಎಂದರು.

  'ಯಾವಾಗಲು ಕಪ್ಪು ಬಟ್ಟೆ ಧರಿಸುತ್ತೀರಿ ಯಾಕೆ ಎಂದು ಒಮ್ಮೆ ರವಿ ಸರ್ ಅವರನ್ನೆ ಕೇಳಿದ್ದೆ. ಎರಡು ಕಾರಣ ಇದೆ ಎಂದು ಹೇಳಿದ್ದರು, ಒಂದು ನಾವು ಬೆಳ್ಳಗೆ ಕಾಣುತ್ತೇವೆ ಎರಡನೇಯದು ತೆಳ್ಳಗೆ ಕಾಣುತ್ತೇವೆ ಎಂದಿದ್ದರು' ಎನ್ನುವ ಮಾತನ್ನು ಸುದೀಪ್ ಬೆಳ್ಳಿಹಬ್ಬದ ವೇದಿಕೆ ಮೇಲೆ ನೆನಪಿಸಿಕೊಂಡರು.

  'ಅಷ್ಟು ದೊಡ್ಡ ಕಲಾವಿದರು ಇವತ್ತು ನನ್ನನ್ನು ಅವರ ಹಿರಿಯ ಮಗ ಎಂದಾಗ ಎಲ್ಲಿಲ್ಲದ ಖುಷಿಯಾಗುತ್ತೆ' ಎಂದು ಸುದೀಪ್ ರವಿಚಂದ್ರನ್ ಮೇಲಿರುವ ಪ್ರೀತಿಯನ್ನು ವ್ಯಕ್ತಪಡಿಸಿದರು. 'ಒಬ್ಬ ಕಲಾವಿದನಾಗಿ ನನ್ನನ್ನು ಹೊಗಳುವುದು ಬೇರೆ ಆದರೆ ಮನಪೂರ್ವಕವಾಗಿ ನನ್ನ ದೊಡ್ಡ ಮಗ ಎನ್ನುವುದು ಬೇರೆ' ಎನ್ನುತ್ತಾ ರವಿಚಂದ್ರನ್ ಅವರಿಗೆ ಧನ್ಯವಾದ ತಿಳಿಸಿದರು.

  English summary
  Sudeep reveals reason why he wears black clothes in his silver jubilee function. Read on.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X