For Quick Alerts
  ALLOW NOTIFICATIONS  
  For Daily Alerts

  ವಿಶೇಷ ಕಾಳಜಿ-ಪ್ರೀತಿ ತೋರಿದ ಶಿವಣ್ಣ, ರವಿಚಂದ್ರನ್, ಉಪೇಂದ್ರ ಬಗ್ಗೆ ಸುದೀಪ್ ಹೇಳಿದ್ದೇನು?

  |

  ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕಿಚ್ಚ ಸುದೀಪ್ ಈಗ ಚೇತರಿಸಿಕೊಂಡಿದ್ದಾರೆ. ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಳ್ಳದ ಕಿಚ್ಚನನ್ನು ನೋಡಲು, ಆರೋಗ್ಯದ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಪರದಾಡುತ್ತಿದ್ದರು. ಖುದ್ದು ಸುದೀಪ್ ಅವರೇ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಲ್ಲಿದ್ದ ಆತಂಕ ದೂರ ಮಾಡಿದ್ದಾರೆ.

  ಚೇತರಿಸಿಕೊಂಡಿರುವ ಬಗ್ಗೆ ಹೇಳುವ ಜೊತೆಗೆ ಪ್ರಾರ್ಥಿಸಿ, ಹಾರೈಸಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದರು. ಚಿಕಿತ್ಸೆ ನೀಡಿದ ವೈದ್ಯರಿಗೂ ವಿಶೇಷವಾದ ಧನ್ಯವಾದ ತಿಳಿಸಿ ವಾರದ ಕೊನೆಯಲ್ಲಿ ಕಿರುತೆರೆಯಲ್ಲಿ ಕಾಣಿಸಿಕೊಳ್ಳುವ ಸಂತಸದ ಸುದ್ದಿ ನೀಡಿದ್ದರು. ಇದೀಗ ಟ್ವೀಟ್ ಮಾಡಿರುವ ಸುದೀಪ್ ಅನಾರೋಗ್ಯದ ಸಮಯದಲ್ಲಿ ವಿಶೇಷ ಕಾಳಜಿ ಮತ್ತು ಪ್ರೀತಿ ತೋರಿದ ಸ್ಯಾಂಡಲ್ ವುಡ್ ವಿಶೇಷ ವ್ಯಕ್ತಿಗಳ ಬಗ್ಗೆ ಬಹಿರಂಗ ಪಡಿಸಿದ್ದಾರೆ.

  ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದ ಸುದೀಪ್; ಈಗ ಹೇಗಿದ್ದಾರೆ?ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದ ಸುದೀಪ್; ಈಗ ಹೇಗಿದ್ದಾರೆ?

  ಕಿಚ್ಚನಿಗೆ ವಿಶೇಷ ಕಾಳಜಿ ತೋರಿದ ಗೆಳೆಯರು

  ಕಿಚ್ಚನಿಗೆ ವಿಶೇಷ ಕಾಳಜಿ ತೋರಿದ ಗೆಳೆಯರು

  ಆನಾರೋಗ್ಯದ ಸಮಯದಲ್ಲಿ ಕಿಚ್ಚನಿಗೆ ವೈಯಕ್ತಿಕವಾಗಿ ಕರೆ ಮಾಡಿ ವಿಶೇಷ ಕಾಳಜಿ ತೋರಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಉಪೇಂದ್ರ, ರವಿಚಂದ್ರನ್ ಮತ್ತು ರಿಷಬ್ ಶೆಟ್ಟಿ ಬಗ್ಗೆ ಸುದೀಪ್ ಬಹಿರಂಗ ಪಡಿಸಿ ಧನ್ಯವಾದ ತಿಳಿಸಿದ್ದಾರೆ.

  ಸುದೀಪ್ ಜೊತೆ ಉತ್ತಮ ಸ್ನೇಹ-ಬಾಂಧವ್ಯ ಹೊಂದಿದ್ದಾರೆ

  ಸುದೀಪ್ ಜೊತೆ ಉತ್ತಮ ಸ್ನೇಹ-ಬಾಂಧವ್ಯ ಹೊಂದಿದ್ದಾರೆ

  ಶಿವಣ್ಣ, ಉಪೇಂದ್ರ, ರವಿಚಂದ್ರನ್ ಹಾಗೂ ರಿಷಬ್ ಎಲ್ಲರ ಜೊತೆ ಕಿಚ್ಚನ ಸ್ನೇಹ ಬಾಂಧವ್ಯ ಉತ್ತಮವಾಗಿದೆ. ನಟ ರವಿಚಂದ್ರನ್, ಸುದೀಪ್ ಅವರನ್ನು ತನ್ನ ಹಿರಿಯ ಮಗ ಎಂದು ಹೇಳುತ್ತಾರೆ. ಇವರೆಲ್ಲರ ಪ್ರೀತಿ, ಕಾಳಜಿ ಬಗ್ಗೆ ಸುದೀಪ್ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗ ಪಡಿಸಿದ್ದಾರೆ.

  ಶಂಕರ್-ರಾಮ್ ಚರಣ್ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಕಿಚ್ಚ ಸುದೀಪ್?ಶಂಕರ್-ರಾಮ್ ಚರಣ್ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಕಿಚ್ಚ ಸುದೀಪ್?

  ಸುದೀಪ್ ಟ್ವೀಟ್

  ಸುದೀಪ್ ಟ್ವೀಟ್

  'ಉಪೇಂದ್ರ, ಶಿವರಾಜ್ ಕುಮಾರ್, ರವಿಚಂದ್ರನ್ ಮತ್ತು ರಿಷಬ್ ಶೆಟ್ಟಿ ಅವರು ಫೋನ್ ಮಾಡಿ ಆರೋಗ್ಯ ವಿಚಾರಿಸಿ, ವಿಶೇಷ ಕಾಳಜಿ ಮತ್ತು ಪ್ರೀತಿ ತೋರಿದ್ದಕ್ಕಾಗಿ ಧನ್ಯವಾದಗಳು. ಪ್ರೀತಿ, ಕಾಳಜಿ, ಉತ್ಸಾಹ ತುಂಬಿದ ಚಿತ್ರರಂಗದ ಪ್ರೀತಿಯ ಸ್ನೇಹಿತರು ಮತ್ತು ಸಹೋದ್ಯೋಗಿಗಳಿಗೆ ಧನ್ಯವಾದಗಳು' ಎಂದು ಹೇಳಿದ್ದಾರೆ.

  ಮಾಲಾಶ್ರೀಗೆ ಜಗ್ಗೇಶ್ ಧೈರ್ಯ ಮತ್ತು ಸಾಂತ್ವನ ನೀಡಿದ್ದು ಹೀಗೆ | Filmibeat Kannada
  ಈ ವಾರವು ಇಲ್ಲ ಕಿಚ್ಚನ ದರ್ಶನ

  ಈ ವಾರವು ಇಲ್ಲ ಕಿಚ್ಚನ ದರ್ಶನ

  ಇನ್ನು ಕಿಚ್ಚ ಈ ವಾರ ಕಿರುತೆರೆಯಲ್ಲಿ ದರ್ಶನ ನೀಡುವುದಾಗಿ ಹೇಳಿದ್ದರು. ಈ ವಾರ ಸುದೀಪ್ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಆದರೆ ಸಾಧ್ಯವಿಲ್ಲ ಎಂದು ಹೇಳುವ ಮೂಲಕ ನಿರಾಸೆ ಮೂಡಿಸಿದ್ದಾರೆ. ಕೋವಿಡ್ ನಿಯಮದ ಪ್ರಕಾರ ಚಿತ್ರೀಕರಣ ಮಾಡಲು ಆಗಲ್ಲ ಎನ್ನುವ ಕಾರಣಕ್ಕೆ ವೀಕೆಂಡ್ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.

  English summary
  Sudeep reveals Shivarajkumar, Upendra, Ravichandran and Rishab Shetty personally calling to him and showing concern.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X