For Quick Alerts
  ALLOW NOTIFICATIONS  
  For Daily Alerts

  ಅಜಯ್ ದೇವಗನ್ ಕಂಡ್ರೆ ಸುದೀಪ್‌ಗೆ ಯಾಕೆ ಕೋಪ; ಈ ಬಗ್ಗೆ ಕಿಚ್ಚ ಹೇಳಿದ್ದನು?

  |

  ಕಿಚ್ಚ ಸುದೀಪ್ ಸ್ಯಾಂಡಲ್ ವುಡ್ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯಲ್ಲೂ ನಟಿಸಿ ಸೈ ಎನಿಸಿಕೊಂಡ ನಟ. ಗಡಿಗೂ ಮೀರಿ ಅಭಿಮಾನಿ ಬಳಗ ಸಂಪಾದಿಸಿರುವ ಅಭಿನಯ ಚಕ್ರವರ್ತಿ ಚಿತ್ರರಂಗದಲ್ಲಿ 25 ವರ್ಷಗಳನ್ನು ಪೂರೈಸಿದ್ದಾರೆ. ತನ್ನ ಸಿನಿ ಜೀವನದಲ್ಲಿ ಕಿಚ್ಚ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.

  Ajay Devgan ಕಂಡ್ರೆ ಕಿಚ್ಚನಿಗೆ ಆಗೋದಿಲ್ಲ‌ ಯಾಕೆ ಗೊತ್ತಾ? | Filmibeat Kannada

  ತನ್ನ ವೃತ್ತಿ ಜೀವನದಲ್ಲಿ ಕಿಚ್ಚ ಬೇರೆ ಬೇರೆ ಭಾಷೆಯ ಅನೇಕ ಸ್ಟಾರ್ ನಟರ ಜೊತೆ ಉತ್ತಮ ಸ್ನೇಹ ಬಾಂಧವ್ಯ ಹೊಂದಿದ್ದಾರೆ. ಆದರೆ ಅಭಿನಯ ಚಕ್ರವರ್ತಿಗೆ ಬಾಲಿವುಡ್ ಸ್ಟಾರ್ ನಟ ಅಜಯ್ ದೇವಗನ್ ಕಂಡ್ರೆ ಕೋಪವಂತೆ. ಈ ಬಗ್ಗೆ ಸ್ವತಃ ಕಿಚ್ಚ ಸುದೀಪ್ ಅವರೇ ಬಹಿರಂಗ ಪಡಿಸಿದ್ದಾರೆ. ಹಿಂದಿ ಯೂಟ್ಯೂಬ್ ಚಾನಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಸುದೀಪ್ ಈ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಮುಂದೆ ಓದಿ..

  ಸೋನು ಪಾಟೀಲ್ ತಾಯಿಯ ಚಿಕಿತ್ಸೆಗೆ ಲಕ್ಷ ಲಕ್ಷ ಖರ್ಚು ಮಾಡಿದ ಸುದೀಪ್: ಭಾವುಕರಾದ ನಟಿಸೋನು ಪಾಟೀಲ್ ತಾಯಿಯ ಚಿಕಿತ್ಸೆಗೆ ಲಕ್ಷ ಲಕ್ಷ ಖರ್ಚು ಮಾಡಿದ ಸುದೀಪ್: ಭಾವುಕರಾದ ನಟಿ

  ಅಜಯ್ ದೇವಗನ್ ಮೇಲೆ ಸುದೀಪ್ ಸಿಟ್ಟು

  ಅಜಯ್ ದೇವಗನ್ ಮೇಲೆ ಸುದೀಪ್ ಸಿಟ್ಟು

  ಇತ್ತೀಚಿಗೆ ಹಿಂದಿ ಯೂಟ್ಯೂಬ್ ಚಾನಲ್‌ಗೆ ನೀಡಿದ ಸಂದರ್ಶನದಲ್ಲಿ ಕಿಚ್ಚ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಅಜಯ್ ದೇವಗನ್ ಅವರನ್ನು ಸುದೀಪ್ ದ್ವೇಷ ಮಾಡಲು ಅಸಲಿ ಕಾರಣವೇನು ಎನ್ನುವುದನ್ನು ವಿವರಿಸಿದ್ದಾರೆ. ಸುದೀಪ್‌ಗೆ ಅಜಯ್ ದೇವಗನ್ ಮೇಲಿನ ಕೋಪಕ್ಕೆ ಕಾರಣ ನಟಿ ಕಾಜೋಲ್. ಸುದೀಪ್‌ಗೆ ಕಾಜೋಲ್ ಎಂದರೆ ತುಂಬಾ ಇಷ್ಟ. ಸುದೀಪ್ ಅವರ ಮೊದಲ ಕ್ರಶ್ ಕಾಜೋಲ್.

  ಕಾಜೋಲ್ ಎಂದರೆ ಕಿಚ್ಚನಿಗೆ ತುಂಬಾ ಇಷ್ಟ

  ಕಾಜೋಲ್ ಎಂದರೆ ಕಿಚ್ಚನಿಗೆ ತುಂಬಾ ಇಷ್ಟ

  ಕಾಜೋಲ್ ಅವರನ್ನು ಎಷ್ಟು ಇಷ್ಟಪಡುತ್ತಿದ್ದರೆಂದರೆ ಮ್ಯಾಗಜಿನ್‌ನಲ್ಲಿ ಬರುವ ಕಾಜೋಲ್ ಫೋಟೋಗಳನ್ನು ಸುದೀಪ್ ಮನೆಯ ಗೋಡೆಯ ಮೇಲೆ ಅಂಟಿಸುತ್ತಿದ್ದರಂತೆ. ಕಾಜೋಲ್ ಬಗ್ಗೆ ಇದ್ದ ಸುಮಾರು 30-40 ಮ್ಯಾಗಜಿನ್‌ಗಳನ್ನು ಸಂಗ್ರಹಿಸಿಟ್ಟಿದ್ದ ಬಗ್ಗೆ ಸುದೀಪ್ ಹಂಚಿಕೊಂಡಿದ್ದಾರೆ.

  ಕಾಜೋಲ್ ಮದುವೆಯಾಗಿದ್ದಕ್ಕೆ ಅಜಯ್ ಮೇಲೆ ಕೋಪ

  ಕಾಜೋಲ್ ಮದುವೆಯಾಗಿದ್ದಕ್ಕೆ ಅಜಯ್ ಮೇಲೆ ಕೋಪ

  ಸುದೀಪ್ ತುಂಬಾ ಇಷ್ಟಪಡುತ್ತಿದ್ದ ಕಾಜೋಲ್ ಅವರನ್ನು ನಟ ಅಜಯ್ ದೇವಗನ್ ಮದುವೆಯಾಗುತ್ತಾರೆ. ಇದು ಸುದೀಪ್ ಅವರ ಕೋಪಕ್ಕೆ ಕಾರಣವಾಗಿದೆ. ಹಾಗಾಗಿ ಅಜಯ್ ದೇವಗನ್ ಮೇಲೆ ಸುದೀಪ್‌ಗೆ ತುಂಬಾ ಸಿಟ್ಟಂತೆ. ಸುದೀಪ್ ಅವರ ಈ ಸಂದರ್ಶನ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾಜೋಲ್ ಬಗ್ಗೆ ಹೇಳಿರುವ ಮಾತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

  ಚಾಮರಾಜನಗರ ದುರಂತ: ಮೃತ ಕುಟುಂಬಗಳ ನೆರವಿಗೆ ಧಾವಿಸಿದ ಸುದೀಪ್ಚಾಮರಾಜನಗರ ದುರಂತ: ಮೃತ ಕುಟುಂಬಗಳ ನೆರವಿಗೆ ಧಾವಿಸಿದ ಸುದೀಪ್

   ದಬಂಗ್-3 ಚಿತ್ರೀಕರಣ ವೇಳೆ ಅಜಯ್ ಭೇಟಿಯಾಗಿದ್ದ ಕಿಚ್ಚ

  ದಬಂಗ್-3 ಚಿತ್ರೀಕರಣ ವೇಳೆ ಅಜಯ್ ಭೇಟಿಯಾಗಿದ್ದ ಕಿಚ್ಚ

  ಇತ್ತೀಚಿಗಷ್ಟೆ ಸುದೀಪ್ ಬಾಲಿವುಡ್ ಸ್ಟಾರ್ ನಟ ಅಜಯ್ ದೇವಗನ್ ಅವರನ್ನು ಭೇಟಿಯಾಗಿದ್ದಾರೆ. ದಬಂಗ್-3 ಚಿತ್ರೀಕರಣ ವೇಳೆ ಮುಂಬೈನಲ್ಲಿದ್ದ ಸುದೀಪ್ ಅಜಯ್ ದೇವಗನ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ಸುದೀಪ್ ಟ್ವಿಟ್ಟರ್ ನಲ್ಲಿಯೂ ಹಂಚಿಕೊಂಡಿದ್ದಾರೆ. ನಿಜವಾದ ಜೆಂಟಲ್ ಮ್ಯಾನ್ ಎಂದು ಬರೆದುಕೊಂಡು ಫೋಟೋ ಶೇರ್ ಮಾಡಿದ್ದರು.

  English summary
  Actor Sudeep reveals why he hates Bollywood Actor Ajay Devgan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X