For Quick Alerts
  ALLOW NOTIFICATIONS  
  For Daily Alerts

  ಮಗಳು ತಂದು ಕೊಟ್ಟ ಗೌರವಕ್ಕೆ ಕಿಚ್ಚ ಸುದೀಪ್ ಫುಲ್ ಖುಷ್

  By Bharath Kumar
  |

  ಕಿಚ್ಚ ಸುದೀಪ್ ಕನ್ನಡ ಚಿತ್ರರಂಗದ ಪಾಲಿಗೆ ರನ್ನ. ಕನ್ನಡದಲ್ಲಿ ಅಭಿನಯ ಚಕ್ರವರ್ತಿ ಆಗಿ ಸಂಚಲನ ಸೃಷ್ಟಿಸಿ, ಬಾಲಿವುಡ್ ನಲ್ಲಿ ಟ್ಯಾಲೆಂಟ್ ತೋರಿಸಿ, ಟಾಲಿವುಡ್ ನಲ್ಲಿ ಸೌಂಡ್ ಮಾಡಿ, ಕಾಲಿವುಡ್ ನಲ್ಲೂ ಕಮಾಲ್ ಮಾಡಿರುವ ಆರಡಿ ಕಟೌಟ್ ಈಗ ಹಾಲಿವುಡ್ ನಲ್ಲಿ ತನ್ನ ಖದರ್ ತೋರಿಸಲು ಸಜ್ಜಾಗಿದ್ದಾರೆ.

  ಹೀಗೆ, ಉತ್ತರ ಮತ್ತು ದಕ್ಷಿಣ ಚಿತ್ರ ಜಗತ್ತಿನಲ್ಲಿ ತನ್ನ ಅಭಿನಯದ ಮೂಲಕ ಅಪಾರ ಅಭಿಮಾನಿಗಳನ್ನ ಗಳಿಸಿರುವ ಕಿಚ್ಚ ಅವರ ಸಾಧನೆ ದೊಡ್ಡದು. ತಾನು ಬೆಳದು, ಕನ್ನಡ ಚಿತ್ರರಂಗದ ಗೌರವವನ್ನು ಹೆಚ್ಚಿಸಿದ್ದಾರೆ. ಆದ್ರೆ. ಈ ಎಲ್ಲ ಸಾಧನೆ, ಯಶಸ್ಸು, ಕೀರ್ತಿಯನ್ನ ಮರೆಸುವಂತಹ ಗೌರವ ಸುದೀಪ್ ಅವರಿಗೆ ಸಿಕ್ಕಿದೆ.

  ಹೌದು, ಸುದೀಪ್ ಅವರ ಮುದ್ದು ಮಗಳು ಸಾನ್ವಿ ತಂದ ಕೊಟ್ಟಿರುವ ಗೌರವವಿದು. ಸಾನ್ವಿಯ ಈ ಸಾಧನೆಯಿಂದ ಸುದೀಪ್ ದಂಪತಿಗೆ ಫುಲ್ ಖುಷಿ ಆಗಿದ್ದಾರೆ. ಏನದು? ಮುಂದೆ ಓದಿ.....

  ಮಗಳು ತಂದು ಕೊಟ್ಟ ಗೌರವ

  ಮಗಳು ತಂದು ಕೊಟ್ಟ ಗೌರವ

  ಕಿಚ್ಚ ಸುದೀಪ್ ಅವರಿಗೆ ತಮ್ಮ ಮಗಳು ಸಾನ್ವಿ ತಂದು ಕೊಟ್ಟ ಗೌರವದ ಬಗ್ಗೆ ಸುದೀಪ್ ಮತ್ತು ಪ್ರಿಯಾ ದಂಪತಿ ಇಬ್ಬರು ಟ್ವಿಟ್ಟರ್ ನಲ್ಲಿ ಸಂತಸ ಹಂಚಿಕೊಂಡಿದ್ದಾರೆ. ''ನಾವು ಹೆಮ್ಮೆ ಪಡುವಂತೆ ಮಾಡಿದ ನಿನಗೆ ಧನ್ಯವಾದಗಳು'' ಎಂದು ಹೇಳುವ ಮೂಲಕ ಫುಲ್ ಖುಷ್ ಆಗಿದ್ದಾರೆ.

  ಕಿಚ್ಚ ಸುದೀಪ್ ಗೆ ದೃಷ್ಟಿ ತೆಗೆಯಬೇಕು, ಅಷ್ಟು ಸಖತ್ತಾಗಿದ್ದಾರೆ ಎಂದ ನಟಿ ಶ್ರಾವ್ಯ

  'School Prefect' ಸಾನ್ವಿ

  'School Prefect' ಸಾನ್ವಿ

  ಸುದೀಪ್ ಮತ್ತು ಪ್ರಿಯಾ ದಂಪತಿಯ ಮುದ್ದಿನ ಮಗಳು ಸಾನ್ವಿ ತಾನು ಓದುತ್ತಿರುವ ಶಾಲೆಯಲ್ಲಿ ''School Prefect'' (ಶಾಲೆಯ ಲೀಡರ್) ಆಗಿ ಆಯ್ಕೆ ಆಗಿದ್ದಾರೆ.

  ಮಗಳಿಗೆ ಬ್ಯಾಡ್ಜ್ ಹಾಕಿದ ಸುದೀಪ್

  ಮಗಳಿಗೆ ಬ್ಯಾಡ್ಜ್ ಹಾಕಿದ ಸುದೀಪ್

  ''School Prefect'' ಆಗಿ ಆಯ್ಕೆಯಾದ ತಮ್ಮ ಮಗಳಿಗೆ ಸ್ವತಃ ಕಿಚ್ಚ ಸುದೀಪ್ ಅವರೇ ಬ್ಯಾಡ್ಜ್ ಹಾಕಿದ್ದಾರೆ. ಒಬ್ಬ ತಂದೆಗೆ ಇದಕ್ಕಿಂತ ಏನೂ ಬೇಕು ಅಲ್ವಾ....

  ಅಪ್ಪು-ದೀಪು, ಅಂದು-ಇಂದು.!

  ಸುದೀಪ್ ಜೀವನದ 'ಅದ್ಭುತ ಕ್ಷಣ'

  ಸುದೀಪ್ ಜೀವನದ 'ಅದ್ಭುತ ಕ್ಷಣ'

  ತಮ್ಮ ಮಗಳಿಗೆ School Prefect ಬ್ಯಾಡ್ಜ್ ಹಾಕಿದ ಕ್ಷಣವನ್ನ ಸುದೀಪ್ ಅವರು ದಿ ಗ್ರೇಟ್ ಮೊಮೆಂಟ್ ಎಂದು ಬಣ್ಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಇದು ನನ್ನ ಮಗಳು ಕೊಟ್ಟ ಉಡುಗೊರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

  ಕಿಚ್ಚ ಸುದೀಪ್ ಹಾಲಿವುಡ್ ಎಂಟ್ರಿಗೆ ಶುಭ ಹಾರೈಸಿದ ಜಗ್ಗೇಶ್

  English summary
  Kannada Actor Kiccha Sudeep has taken his twitter account to appreciate His Daughter Saanvi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X