'ರಾಬರ್ಟ್' ನಿರ್ದೇಶಕ ತರುಣ್ ಸುಧೀರ್ ವಿರುದ್ಧ ಸುದೀಪ್ ಫ್ಯಾನ್ಸ್ ಬೇಸರ
Recommended Video
ಚೌಕ ಎಂಬ ಸೂಪರ್ ಹಿಟ್ ಸಿನಿಮಾ ನಿರ್ದೇಶನ ಮಾಡಿದ್ದ ತರುಣ್ ಸುಧೀರ್ ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ರಾಬರ್ಟ್ ಸಿನಿಮಾ ಮಾಡ್ತಿದ್ದಾರೆ. ಇತ್ತೀಚಿಗಷ್ಟೆ ರಾಬರ್ಟ್ ಚಿತ್ರದ ಥೀಮ್ ಪೋಸ್ಟರ್ ರಿಲೀಸ್ ಮಾಡಿದ್ದ ನಿರ್ದೇಶಕ ಅಭಿಮಾನಿಗಳ ಥ್ರಿಲ್ ಹೆಚ್ಚಿಸಿದ್ದಾರೆ.
ಪೋಸ್ಟರ್ ಕಂಡು ಫುಲ್ ಖುಷ್ ಆಗಿರುವ ಡಿ ಬಾಸ್ ಬಳಗ ಒಂದು ಕಡೆಯಾದರೆ, ರಾಬರ್ಟ್ ಪೋಸ್ಟರ್ ಕದ್ದಿದ್ದು ಎಂದು ಕೆಲವು ಕಾಲೆಳೆಯುತ್ತಿದ್ದಾರೆ. ಈ ಬಗ್ಗೆ ಈಗಾಗಲೇ ಸ್ಪಷ್ಟನೆ ನೀಡಿರುವ ತರುಣ್ ಸುಧೀರ್ 'ಇದು ಕಾಕತಾಳೀಯ ಅಷ್ಟೆ' ಎಂದಿದ್ದಾರೆ.
ಹೀಗೆ, ರಾಬರ್ಟ್ ಪೋಸ್ಟರ್ ಬಿಟ್ಟು ಶೂಟಿಂಗ್ ನಲ್ಲಿ ತೊಡಗಿಕೊಂಡಿರುವ ತರುಣ್ ಸುಧೀರ್ ವಿರುದ್ಧ ಈಗ ಕಿಚ್ಚ ಸುದೀಪ್ ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಕಾರಣ ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಟೀಸರ್. ಅದು ಹೇಗೆ? ಮುಂದೆ ಓದಿ....

ಎಲ್ಲದಕ್ಕೂ ಕಾರಣ ನಾರಾಯಣ
ಜೂನ್ 6 ರಂದು ರಕ್ಷಿತ್ ಶೆಟ್ಟಿ ಹುಟ್ಟುಹಬ್ಬ. ಈ ವಿಶೇಷ ದಿನ ಪ್ರಯುಕ್ತ ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಈ ಟೀಸರ್ ನೋಡಿ ಮೆಚ್ಚಿಕೊಂಡು ತರುಣ್ ಸುಧೀರ್ ಸಿಂಪಲ್ ಸ್ಟಾರ್ ಗೆ ಮತ್ತು ನಾರಾಯಣ ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ವಿಶ್ ಮಾಡಿದ್ದಾರೆ. ಇದು ಕಿಚ್ಚ ಸುದೀಪ್ ಅಭಿಮಾನಿಗಳ ಕಣ್ಣಿಗೆ ಬಿದ್ದಿದೆ. ಹಾಗಾಗಿ, ತರುಣ್ ವಿರುದ್ಧ ಸುದೀಪ್ ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ.

ಸುದೀಪ್ ಅವರನ್ನ ಮರೆತರಿ
'ರಕ್ಷಿತ್ ಶೆಟ್ಟಿ ನಟನೆಯ ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ ವಿಶ್ ಮಾಡ್ತೀರಾ, ಆದರೆ ನಿಮಗೆ ಆಪ್ತರಾಗಿದ್ದ ಸುದೀಪ್ ಅವರ ಪೈಲ್ವಾನ್ ಸಿನಿಮಾಗೆ ನೀವು ವಿಶ್ ಮಾಡಲ್ಲ' ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಜೂನ್ 4 ರಂದು ಪೈಲ್ವಾನ್ ಪೋಸ್ಟರ್ ರಿಲೀಸ್ ಆಗಿತ್ತು. ಈ ಪೋಸ್ಟರ್ ಬಗ್ಗೆ ತರುಣ್ ಬಹಿರಂಗವಾಗಿ ಯಾವುದೇ ಸ್ಟೇಟಸ್, ಪೋಸ್ಟ್ ಹಾಕಿಲ್ಲ. ಇದು ಸುದೀಪ್ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದೆ.

ರನ್ನ ಪ್ರೆಸ್ ಮೀಟ್ ನೆನಪಿಲ್ವಾ?
ತರುಣ್ ಸುಧೀರ್ ಅವರ ಸಹೋದರ ನಂದ ಕಿಶೋರ್ ನಿರ್ದೇಶನದ ರನ್ನ ಸಿನಿಮಾದಲ್ಲಿ ತರುಣ್ ಬರಹಗಾರನಾಗಿ ಕೆಲಸ ಮಾಡಿದ್ದರು. ರನ್ನ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ಸಹೋದರರಿಬ್ಬರು ಸುದೀಪ್ ಮಾಡಿದ ಸಹಾಯ ನೆನೆದು ಭಾವುಕರಾಗಿದ್ದರು. ಈಗ ಅದೇ ವಿಷ್ಯವನ್ನ ಪ್ರಸ್ತಾಪಿಸಿ ನೀವು ಸುದೀಪ್ ಅವರನ್ನ ಮರೆತರಿ ಎಂದು ಕೇಳುತ್ತಿದ್ದಾರೆ.

ರಾಬರ್ಟ್ ಸಿನಿಮಾ ಕಾರಣನಾ.!
ಸುದೀಪ್ ಮತ್ತು ದರ್ಶನ್ ನಡುವೆ ಬಾಂಧವ್ಯ ಚೆನ್ನಾಗಿಲ್ಲ. ಈಗ ದರ್ಶನ್ ಜೊತೆ ತರುಣ್ ಸಿನಿಮಾ ಮಾಡ್ತಿದ್ದಾರೆ. ಹಾಗಾಗಿ, ಸುದೀಪ್ ಚಿತ್ರಕ್ಕೆ ವಿಶ್ ಮಾಡುವುದು ಸರಿ ಕಾಣಿಸುವುದಿಲ್ಲ ಎಂಬ ಕಾರಣಕ್ಕೆ ಹೀಗೆ ಮಾಡಿರಬಹುದು ಎಂದು ಕೆಲವು ಕಾಮೆಂಟ್ ಹಾಕುತ್ತಿದ್ದಾರೆ.

ರಕ್ಷಿತ್ ಫ್ಯಾನ್ಸ್ ಕೂಡ ಗರಂ
ರಕ್ಷಿತ್ ಶೆಟ್ಟಿ ಅವರ ಅವನೇ ಶ್ರೀಮನ್ನಾರಾಯಣ ಗೆ ವಿಶ್ ಮಾಡಿರುವ ತರುಣ್ ವಿರುದ್ಧ ಸ್ವತಃ ರಕ್ಷಿತ್ ಫ್ಯಾನ್ಸ್ ಗರಂ ಆಗಿದ್ದಾರೆ. ಶ್ರೀಮನ್ನಾರಾಯಣ ಪೋಸ್ಟರ್ ಬಾಲಿವುಡ್ ಸಿನಿಮಾ 'ಫಟಾ ಪೋಸ್ಟರ್ ನಿಕ್ಲಾ ಹೀರೋ' ರೀತಿ ಕಾಣುತ್ತಿದೆ. ಇದರಿಂದ ಕಾಪಿ ಮಾಡಿದ್ರು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಹೀಗಿರುವಾಗಲೇ ತರುಣ್ ಕೂಡ ಇದಕ್ಕೆ ಹೌದು ಎನ್ನುವ ರೀತಿ 'ಫಟಾ ಪೋಸ್ಟರ್ ನಿಕ್ಲಾ ಹೀರೋ...ಶ್ರೀಮನ್ನಾಯರಾಣ ಆಲ್ ದಿ ಬೆಸ್ಟ್' ಎಂದು ವ್ಯಂಗ್ಯ ಮಾಡಿರುವಂತೆ ಪೋಸ್ಟ್ ಹಾಕಿದ್ದಾರೆ. ಅದಕ್ಕೆ ನಿಮ್ಮ ರಾಬರ್ಟ್ ಪೋಸ್ಟರ್ ಕೂಡ ಕದ್ದಿದ್ದೆ ಎಂದು ರಕ್ಷಿತ್ ಫ್ಯಾನ್ಸ್ ಮತ್ತು ಸುದೀಪ್ ಫ್ಯಾನ್ಸ್ ಒಟ್ಟಿಗೆ ಕಿಡಿಕಾರುತ್ತಿದ್ದಾರೆ.

ಏನೋ ಮಾಡಲು ಹೋಗಿ ಏನೋ ಆಗಿದೆ
ಹಾಗ್ನೋಡಿದ್ರೆ, ಸುದೀಪ್ ಅವರ ಪೈಲ್ವಾನ್ ಚಿತ್ರಕ್ಕೆ ತರುಣ್ ಸುಧೀರ್ ಬಹಿರಂಗವಾಗಿ ವಿಶ್ ಮಾಡಿಲ್ಲ ಎಂಬುದು ಅಭಿಮಾನಿಗಳಿಗೆ ಬೇಸರ. ಬಹುಶಃ ಫೋನ್ ಮಾಡಿದ್ರಾ? ಗೊತ್ತಿಲ್ಲ. ಈ ಕಡೆ ರಕ್ಷಿತ್ ಶೆಟ್ಟಿ ಚಿತ್ರಕ್ಕೆ ಉದ್ದೇಶಪೂರ್ವಕವಾಗಿ ಹಾಗೆ ಹಾಕಿದ್ರಾ? ಅಥವಾ ರಕ್ಷಿತ್ ಎಂಟ್ರಿ ಆಗಿದೆ ಎಂದು ಊಹಿಸಿ ಹಾಗೆ ಹಾಕಿದ್ರಾ? ಗೊತ್ತಿಲ್ಲ. ಆದರೆ ಅಭಿಮಾನಿಗಳು ಮಾತ್ರ ತರುಣ್ ನಡೆಯ ಬಗ್ಗೆ ಆಕ್ರೋಶವಾಗಿದ್ದಾರೆ.


Click it and Unblock the Notifications











