For Quick Alerts
  ALLOW NOTIFICATIONS  
  For Daily Alerts

  ನಾಳೆ ಕಿಚ್ಚನ ಅಭಿಮಾನಿಗಳಿಗೆ ಡಬಲ್ ಧಮಾಕಾ

  By Suneetha
  |

  ಕಿಚ್ಚ ಸುದೀಪ್ ಅವರ 'ಕೋಟಿಗೊಬ್ಬ 2' ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಅಭಿಮಾನಿಗಳು ಕೂಡ ಕಾತರದಿಂದ, ಬೇಗ ಬೆಳಗಾಗಬಾರದಾ, ಅದ್ಯವಾಗ ಸಿನಿಮಾ ಬಿಡುಗಡೆ ಆಗುತ್ತೆ, ಅಂತ ಕತ್ತು ಉದ್ದ-ಉದ್ದ ಮಾಡಿ ಕಾದು ಕುಳಿತಿದ್ದಾರೆ.

  ಭಾರಿ ನಿರೀಕ್ಷೆ ಹುಟ್ಟುಹಾಕಿರುವ 'ಕೋಟಿಗೊಬ್ಬ 2' ಅಂತೂ-ಇಂತೂ, ಹಬ್ಬದ ದಿನವಾದ ವರಲಕ್ಷ್ಮಿ ಹಬ್ಬದಂದು ನಾಳೆ (ಆಗಸ್ಟ್ 12) ಇಡೀ ಕರ್ನಾಟಕ ಹಾಗೂ ದಕ್ಷಿಣ ಭಾರತದಾದ್ಯಂತ ಗ್ರ್ಯಾಂಡ್ ಆಗಿ ತೆರೆ ಕಾಣುತ್ತಿದೆ.['ಕೋಟಿಗೊಬ್ಬ 2' ವಿಶೇಷತೆ ಏನು, ಸಿನಿಮಾ ಯಾಕೆ ನೋಡಬೇಕು.?]

  ಅಂದಹಾಗೆ ನಾಳೆ 'ಕೋಟಿಗೊಬ್ಬ 2' ಸಿನಿಮಾ ನೋಡಲು ಹೋದವರಿಗೆ ಒಂದು ಸರ್ ಪ್ರೈಸ್ ಕಾದಿದೆ. ಅದೇನಪ್ಪಾ ಅಂದ್ರೆ, ಸುದೀಪ್ ಅವರ 'ಹೆಬ್ಬುಲಿ' ಚಿತ್ರದ ಮೋಷನ್ ಪೋಸ್ಟರ್ ನಾಳೆ 'ಕೋಟಿಗೊಬ್ಬ 2' ಚಿತ್ರದ ಮಧ್ಯಂತರ ಮತ್ತು ಆರಂಭವಾಗುವಾಗ ರಿಲೀಸ್ ಆಗಲಿದೆ.['ಕೋಟಿಗೊಬ್ಬ' ನಿರ್ದೇಶಕ KS ರವಿಕುಮಾರ್ ಬಗ್ಗೆ ನಿಮಗೆಷ್ಟು ಗೊತ್ತು?]

  Sudeep's 'Hebbuli' motion poster with 'Kotigobba 2'

  ಈ ವಿಚಾರವನ್ನು ಖುದ್ದು ನಿರ್ದೇಶಕ ಕೃಷ್ಣ ಅವರೇ ಟ್ವಿಟ್ಟರ್ ನಲ್ಲಿ ಸ್ಪಷ್ಟಪಡಿಸಿದ್ದಾರೆ. ಅಂದಹಾಗೆ ಕೃಷ್ಣ ಅವರೇ ಮೋಷನ್ ಪೋಸ್ಟರ್ ರಿಲೀಸ್ ಮಾಡಲು ಅಷ್ಟೊಂದು ಎಕ್ಸೈಟ್ ಆಗಿರಬೇಕಾದ್ರೆ, ಇನ್ನೂ ಅಭಿಮಾನಿಗಳಿಗೆ ಡಬಲ್ ಧಮಾಕಾ ಎಂದಾಗ ಅವರಿಗೆ ಹೇಗಾಗಿರಬೇಡ.

  ಒಟ್ನಲ್ಲಿ ಒಂದು ಕೊಂಡರೆ ಇನ್ನೊಂದು ಉಚಿತ ಎನ್ನುವಂತೆ, 'ಕೋಟಿಗೊಬ್ಬ 2' ನೋಡಲು ಹೋದವರಿಗೆ 'ಹೆಬ್ಬುಲಿ' ಚಿತ್ರದ ಮೋಷನ್ ಪೋಸ್ಟರ್ ಉಚಿತವಾಗಿ ನೋಡಲು ಸಿಗಲಿದೆ.

  English summary
  Kannada Actor Sudeep And Actress Amala Paul starrer 'Hebbuli' motion poster will be screened for the first time during the release of Sudeep's 'Kotigobba 2' on August 12th. 'Hebbuli' directed by Krishna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X