»   » 'ವಿಲನ್' ಆಗಿರುವ ಸುದೀಪ್ ಇಂಟ್ರೊಡಕ್ಷನ್ ಹಾಡಿಗೆ ಕೋಟಿ ಕೋಟಿ ಸುರಿದ ಪ್ರೇಮ್ !

'ವಿಲನ್' ಆಗಿರುವ ಸುದೀಪ್ ಇಂಟ್ರೊಡಕ್ಷನ್ ಹಾಡಿಗೆ ಕೋಟಿ ಕೋಟಿ ಸುರಿದ ಪ್ರೇಮ್ !

Posted By:
Subscribe to Filmibeat Kannada

'ದಿ ವಿಲನ್' ಎಷ್ಟೇ ಆಗಲಿ, ಪ್ರೇಮ್ ಸಿನಿಮಾ..! ಅಂದ್ಮೇಲೆ, 'ದಿ ವಿಲನ್' ಅಡ್ಡದಿಂದ ದಿನಕ್ಕೊಂದು ಸುದ್ದಿ ಹೊರಬರಲೇಬೇಕು.

ಸದ್ಯ 'ದಿ ವಿಲನ್' ಸಿನಿಮಾದ ಇಂಟ್ರೊಡಕ್ಷನ್ ಹಾಡಿನ ಬಗ್ಗೆ ಎಲ್ಲರೂ ಮಾತನಾಡುವಂತಾಗಿದೆ. ಚಿತ್ರದಲ್ಲಿ 'ಹೆಬ್ಬುಲಿ' ಸುದೀಪ್ ಅವರ ಪಾತ್ರವನ್ನು ಪರಿಚಯ ಮಾಡುವ ಒಂದು ಹಾಡಿಗೆ ಪ್ರೇಮ್ ಕೋಟಿ ಕೋಟಿ ಸುರಿದಿದ್ದಾರೆ. ಪ್ರೇಮ್ ಸಿನಿಮಾ ಅಂದರೆ ಶ್ರೀಮಂತಿಕೆಗೆ ಕೊರತೆ ಇರುವುದಿಲ್ಲ ಎನ್ನುವುದು ಮತ್ತೆ ಇದೀಗ ಸಾಬೀತು ಆಗಿದೆ. ಮುಂದೆ ಓದಿ...

2 ಕೋಟಿ ಖರ್ಚು

'ದಿ ವಿಲನ್' ಚಿತ್ರದ ಸುದೀಪ್ ಅವರ ಇಂಟ್ರೊಡಕ್ಷನ್ ಹಾಡು 2 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿದೆ. ಈ ಒಂದೇ ಹಾಡಿಗೆ ಬರೋಬ್ಬರಿ 2 ಕೋಟಿಯನ್ನು ಖರ್ಚು ಮಾಡಲಾಗಿದೆ.

ನೂರು ಜನ ಡ್ಯಾನ್ಸರ್ಸ್

ಸುದೀಪ್ ಜೊತೆ ಈ ಹಾಡಿನಲ್ಲಿ 100 ಜನ ವಿದೇಶಿ ಡ್ಯಾನ್ಸರ್ ಗಳು ಕುಣಿಯಲಿದ್ದಾರೆ. ಅದ್ದೂರಿ ಸೆಟ್ ಹಾಕಿ ಈ ಹಾಡನ್ನು ಚಿತ್ರೀಕರಣ ಮಾಡಲಾಗುತ್ತದೆ.

ಪ್ರೇಮ್ ಧ್ವನಿ

ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಹಾಡಿಗೆ ನಿರ್ದೇಶಕ ಪ್ರೇಮ್ ಅವರೇ ಧ್ವನಿ ನೀಡಿರುವುದು ಮತ್ತೊಂದು ವಿಶೇಷ.

ನಾಗೇಶ್ ನೃತ್ಯ ನಿರ್ದೇಶನ

ಈ ವಿಶೇಷ ಹಾಡಿಗೆ ನಾಗೇಶ್ ನೃತ್ಯ ನಿರ್ದೇಶನ ಮಾಡಿದ್ದು, ಗಿರಿ ತಮ್ಮ ಕ್ಯಾಮರಾದಲ್ಲಿ ಹಾಡನ್ನು ಸೆರೆ ಹಿಡಿಯಲಿದ್ದಾರೆ.

'ದಿ ವಿಲನ್' ಮುಗಿಯುವ ಮೊದಲೇ ಶಿವಣ್ಣ - ಪ್ರೇಮ್ ಮುಂದಿನ ಸಿನಿಮಾ ಸುದ್ದಿ ಹೊರ ಬಂತು!

ಶಿವಣ್ಣನ ಹಾಡು

ಶಿವರಾಜ್ ಕುಮಾರ್ ಅವರಿಗೂ ಒಂದು ಇಂಟ್ರೊಡಕ್ಷನ್ ಹಾಡು ಇದ್ದು, ಅದನ್ನು ಕೂಡ ದೊಡ್ಡ ಮಟ್ಟದಲ್ಲಿ ಚಿತ್ರೀಕರಣ ಮಾಡುವ ಪ್ಲಾನ್ ನಲ್ಲಿ ಪ್ರೇಮ್ ಇದ್ದಾರೆ.

ಶೋ ಮ್ಯಾನ್ ಪ್ರೇಮ್ ಹುಟ್ಟುಹಬ್ಬಕ್ಕೆ ಅಪ್ಸರೆ ಆಮಿ ಜಾಕ್ಸನ್ ಮಾಡಿದ ವಿಶ್ ಹೀಗಿತ್ತು

ಹೈದರಾಬಾದ್ ನಲ್ಲಿ ಶೂಟಿಂಗ್

ಸದ್ಯ ಶಿವರಾಜ್ ಕುಮಾರ್ ಅವರ ಸಾಹಸ ದೃಶ್ಯದ ಚಿತ್ರೀಕರಣ ನಡೆಯುತ್ತಿದ್ದು, ಇದರ ಬಳಿಕ ಹೈದರಾಬಾದ್ ನಲ್ಲಿ ಚಿತ್ರದ ಶೂಟಿಂಗ್ ಮುಂದುವರೆಯಲಿದೆ.

ಈ 7 ವಿಶೇಷತೆಗಳು 'ದಿ ವಿಲನ್' ಚಿತ್ರದಲ್ಲಿ ರಾಮ-ರಾವಣನ ಪವರ್ ಹೆಚ್ಚಿಸಿದೆ!

ದುಬಾರಿ ಹಾಡುಗಳು

ಈ ಹಿಂದೆ ಸುದೀಪ್ ಅವರ 'ಹೆಬ್ಬುಲಿ' ಮತ್ತು 'ರನ್ನ' ಸಿನಿಮಾದ ಇಂಟ್ರೊಡಕ್ಷನ್ ಹಾಡುಗಳನ್ನು ಕೂಡ ದುಬಾರಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು.

English summary
Sudeep’s introductory song for 'The Villain' movie to cost Rs 2 crore.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X