»   » ಸುದೀಪ್ ವಿದೇಶಿ ಅಭಿಮಾನಿಯ ಕನ್ನಡ ಪ್ರೀತಿ ನೋಡಿದ್ರೆ ಬೆರಗಾಗ್ತೀರಾ.!

ಸುದೀಪ್ ವಿದೇಶಿ ಅಭಿಮಾನಿಯ ಕನ್ನಡ ಪ್ರೀತಿ ನೋಡಿದ್ರೆ ಬೆರಗಾಗ್ತೀರಾ.!

Posted By:
Subscribe to Filmibeat Kannada

ಎತ್ತಣ ಮಾಮರ... ಎತ್ತಣ ಕೋಗಿಲೆ ಎನ್ನುವ ಹಾಗೆ ಕನ್ನಡದ ಕೆಚ್ಚೆದೆಯ ಕಿಚ್ಚ ಸುದೀಪ್ ರವರಿಗೆ ಜಪಾನ್ ನಲ್ಲಿಯೂ ಅಭಿಮಾನಿಗಳಿದ್ದಾರೆ. ಎಸ್.ಎಸ್.ರಾಜಮೌಳಿ ನಿರ್ದೇಶನದ ಸುದೀಪ್ ಅಭಿನಯದ 'ಈಗ' ಸಿನಿಮಾ ಜಪಾನ್ ಭಾಷೆಗೂ ಡಬ್ ಆಗಿ ಬಿಡುಗಡೆ ಆದ್ಮೇಲೆ, ಜಪಾನ್ ನಲ್ಲಿಯೂ ಸುದೀಪ್ ಸಿಕ್ಕಾಪಟ್ಟೆ ಜನಪ್ರಿಯರಾದರು.

ಸುದೀಪ್ ಅಭಿನಯ ಕಂಡು ಮನಸೋತ ಜಪಾನ್ ಅಭಿಮಾನಿ ಜುಂಕೋ ಎಂಬಾಕೆ ಬೆಂಗಳೂರಿಗೂ ಬಂದು ಸುದೀಪ್ ರವರನ್ನ ಭೇಟಿ ಮಾಡಿ ಅಚ್ಚರಿ ಮೂಡಿಸಿದ್ದರು.

ಸುದೀಪ್ ರನ್ನು ಭೇಟಿಯಾದ ಜಪಾನ್ ಅಭಿಮಾನಿ

ಈಗ ಅದೇ ಜುಂಕೋ ಎಂಬಾಕೆಯ ಕನ್ನಡ ಪ್ರೀತಿ ಬಗ್ಗೆ ನಾವು ಹೇಳಲು ಹೊರಟಿದ್ದೇವೆ. ಮುಂದೆ ಓದಿರಿ....

ಕನ್ನಡ ಕಲಿಯುತ್ತಿದ್ದಾರೆ ಜುಂಕೋ.!

ಕಿಚ್ಚ ಸುದೀಪ್ ರವರ ಎಲ್ಲ ಸಿನಿಮಾಗಳನ್ನೂ ಬಿಟ್ಟೂಬಿಡದೆ ನೋಡಿರುವ ಜುಂಕೋ 'ಕನ್ನಡ' ಕಲಿಯಲು ಮನಸ್ಸು ಮಾಡಿದ್ದಾರೆ. ಅದಕ್ಕಾಗಿ ಕನ್ನಡ ಕಲಿಕೆಯ ಪುಸ್ತಕವನ್ನು ಕೊಂಡುಕೊಂಡಿದ್ದಾರೆ.

ಸುದೀಪ್ ಅಂದ್ರೆ ಅಚ್ಚುಮೆಚ್ಚು

ಜಪಾನ್ ನಲ್ಲಿ ನೆಲೆಸಿರುವ ಜುಂಕೋ ರವರಿಗೆ ಕಿಚ್ಚ ಸುದೀಪ್ ಅಂದ್ರೆ ಅಚ್ಚುಮೆಚ್ಚು. ಸುದೀಪ್ ಮೇಲಿನ ಜುಂಕೋ ಅಭಿಮಾನ ತಿಳಿಯಬೇಕು ಅಂದ್ರೆ ಒಮ್ಮೆ ಆಕೆಯ ಟ್ವಿಟ್ಟರ್ ಅಕೌಂಟ್ ಗೆ ಭೇಟಿ ಕೊಡಿ....

ಕನ್ನಡ ಸಿನಿಮಾ ಪ್ರಿಯೆ...

''ನಾನು ಜಪಾನ್ ನಲ್ಲಿ ನೆಲೆಸಿದ್ದೇನೆ. ಐ ಲವ್ ಕನ್ನಡ ಮೂವೀಸ್, ಕಿಚ್ಚ ಸುದೀಪ್ ಮತ್ತು ಹಾಂಗ್ ಕಾಂಗ್ ಮೂವೀಸ್'' ಎಂದು ಟ್ವಿಟ್ಟರ್ ನಲ್ಲಿ ತಮ್ಮ ಕುರಿತು ಪುಟ್ಟ ಪರಿಚಯ ಮಾಡಿಕೊಂಡಿದ್ದಾರೆ ಜುಂಕೋ.!

ಸುದೀಪ್ ಸುದ್ದಿ ಮಿಸ್ ಮಾಡಲ್ಲ.!

ಕಿಚ್ಚ ಸುದೀಪ್ ಕುರಿತು ಯಾವುದೇ ಸುದ್ದಿ, ವಿಡಿಯೋ ಬಂದರೂ, ಅದನ್ನ ತಪ್ಪದೇ ಶೇರ್ ಮಾಡುತ್ತಾರೆ ಜುಂಕೋ. ಜುಂಕೋ ಟ್ವಿಟ್ಟರ್ ಅಕೌಂಟ್ ಕವರ್ ಪೇಜ್ ನಲ್ಲಿಯೂ ಕಿಚ್ಚ ಸುದೀಪ್ ರವರೇ ರಾರಾಜಿಸುತ್ತಿದ್ದಾರೆ.

ಕನ್ನಡ ಸಿನಿಮಾಗಳನ್ನೂ ನೋಡುತ್ತಿರುವ ಜುಂಕೋ.!

ಸುದೀಪ್ ರವರಿಂದ ಕನ್ನಡ ಹಾಗೂ ಕನ್ನಡ ಸಿನಿಮಾಗಳ ಬಗ್ಗೆ ಜುಂಕೋ ಗೆ ಕುತೂಹಲ ಹೆಚ್ಚಾಗಿದೆ. ದರ್ಶನ್, ರವಿಚಂದ್ರನ್, ಪ್ರಕಾಶ್ ರಾಜ್, ಚಿಕ್ಕಣ್ಣ, ಯಶ್ ಬಗ್ಗೆಯೂ ಜುಂಕೋ ತಿಳಿದುಕೊಂಡಿದ್ದಾರೆ.

ಮೊಬೈಲ್ ನಲ್ಲೂ ಸುದೀಪ್

ಜುಂಕೋಗೆ ಸುದೀಪ್ ಎಷ್ಟು ಇಷ್ಟ ಅನ್ನೋದಕ್ಕೆ ಈ ಫೋಟೋ ಸಾಕ್ಷಿ. ಸುದೀಪ್ ರವರ 'ಈಗ' ಚಿತ್ರದ ಫೋಟೋವನ್ನ ತನ್ನ ಮೊಬೈಲ್ ಕವರ್ ಗೆ ಹಾಕಿಕೊಂಡು ತಮ್ಮ ಅಭಿಮಾನ ಪ್ರದರ್ಶಿಸಿದ್ದಾರೆ ಜುಂಕೋ.

ನಿಜಕ್ಕೂ ಗ್ರೇಟ್

ಕನ್ನಡ ಹಾಗೂ ಕನ್ನಡ ಸಿನಿಮಾಗಳ ಕಡೆ ಕನ್ನಡಿಗರೇ ಮುಖ ಮಾಡದ ಈಗಿನ ಕಾಲದಲ್ಲಿ ಜುಂಕೋ ನಿಜಕ್ಕೂ ಗ್ರೇಟ್. ಕನ್ನಡ ಸಿನಿಮಾ ತಾರೆಯರ ಮೇಲಿನ ಅಭಿಮಾನದಿಂದ ಕನ್ನಡ ಕಲಿಯಲು ಮುಂದಾಗಿರುವ ಜುಂಕೋಗೆ ನಮ್ಮ ಕಡೆಯಿಂದ ಹ್ಯಾಟ್ಸ್ ಆಫ್.

English summary
Junko, Sudeep's Japanese fan is in love for Kannada Movies. She is also Learning Kannada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada