ಕಿಚ್ಚನಿಗಾಗಿ 'ಕೆಡಿ' ಕಥೆ ಬದಲಿಸಿದ್ರಾ ಪ್ರೇಮ್? ಪಾರ್ಟ್-2 ಹೀರೊ ಸುದೀಪ್ ಒಬ್ರೇನಾ?

ಜೋಗಿ ಪ್ರೇಮ್ ನಿರ್ದೇಶನದ 'ಕೆಡಿ' ಸಿನಿಮಾ ಕೊನೆಗೂ ತೆರೆಗಪ್ಪಳಿಸಿದೆ. ಧ್ರುವ ಸರ್ಜಾ, ರವಿಚಂದ್ರನ್, ಸಂಜಯ್ ದತ್, ಶಿಲ್ಪಾ ಶೆಟ್ಟಿ, ರಮೇಶ್ ಅರವಿಂದ್, ಆರ್ಮುಗ ರವಿಶಂಕರ್ ಹೀಗೆ ಘಟಾನುಘಟಿ ಕಲಾವಿದರು ಸಮಾಗಮದ ಸಿನಿಮಾ ಅಭಿಮಾನಿಗಳ ಮನಗೆದ್ದಿದೆ. ಚಿತ್ರಕ್ಕೆ ಎಲ್ಲೆಡೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಬಹಳ ದಿನಗಳ ಬಳಿಕ ಪ್ರೇಮ್ ಹಾಗೂ ಧ್ರುವ ಇಬ್ಬರಿಗೂ ಸಕ್ಸಸ್ ಸಿಗುತ್ತದೆ ಎನ್ನುವ ಚರ್ಚೆ ಶುರುವಾಗಿದೆ.

4 ವರ್ಷಗಳ ಹಿಂದೆ ಶುರುವಾಗಿದ್ದ 'ಕೆಡಿ' ಸಿನಿಮಾ ನಾನಾ ಕಾರಣಗಳಿಂದ ಬಿಡುಗಡೆ ಆಗುವುದು ತಡವಾಗುತ್ತಾ ಬಂದಿತ್ತು. ಟ್ರೈಲರ್ ಬಿಡುಗಡೆ ಆಗುವವರೆಗೆ ಸಿನಿಮಾ ಬಗ್ಗೆ ಅಷ್ಟೇನು ನಿರೀಕ್ಷೆ ಇರಲಿಲ್ಲ. ಪ್ರೇಮ್ ಹಾಗೂ ಧ್ರುವ ಸರ್ಜಾ ಹಿಂದಿನ ಸಿನಿಮಾ ಪ್ರಭಾವ ಅದು. ಆದರೆ ಕಿಚ್ಚ ಸುದೀಪ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ ಎಂದಾಗಲೇ ನಿರೀಕ್ಷೆ ಶುರುವಾಗಿತ್ತು. ಇದೀಗ ಸಿನಿಮಾ ಬಿಡುಗಡೆಯಾಗಿದೆ. ಸುದೀಪ್ ಪಾತ್ರ ಏನು ಎನ್ನುವುದು ಬಹಿರಂಗವಾಗಿದೆ. ಸೀಕ್ವೆಲ್ ಬಗ್ಗೆ ಕೂಡ ಮಾಹಿತಿ ಸಿಕ್ಕಿದೆ.

Sudeep s Kala Bhairava Steals the Show in KD Climax Prem Sets Up Massive Part-2 Twist

ಹೌದು.. 'ಕೆಡಿ' ಸಿನಿಮಾ ಸೀಕ್ವೆಲ್ ಕೂಡ ತೆರೆಗೆ ಬರಲಿದೆ. ಆ ಚಿತ್ರದಲ್ಲಿ ಕೂಡ ಕಿಚ್ಚನ ಆರ್ಭಟ ನಡೆಯಲಿದೆ. ನಿಜ ಹೇಳಬೇಕು ಅಂದ್ರೆ ಸುದೀಪ್ ಎಂಟ್ರಿ ಬಳಿಕ ಕಥೆಗೆ ಬೇರೆಯದ್ದೇ ರೂಪ ಕೊಟ್ಟು ಮೊದಲ ಭಾಗವನ್ನು ಪ್ರೇಮ್ ತೆರೆಗೆ ತಂದಿದ್ದಾರೆ. 'ಕೆಡಿ' ಕಾಳಿದಾಸ(ಧ್ರುವ ಸರ್ಜಾ)ನಿಗಿಂತ ಖತರ್ನಾಕ್ ಕಾಲ ಭೈರವ(ಸುದೀಪ್) ಯಾರು? ಆತನ ಹಿನ್ನೆಲೆ ಏನು? ಎನ್ನುವ ಕುತೂಹಲದೊಂದಿಗೆ ಮೊದಲ ಭಾಗಕ್ಕೆ ಶುಭಂ ಕಾರ್ಡ್ ಹಾಕಿದ್ದಾರೆ.

ಕ್ಲೈಮ್ಯಾಕ್ಸ್‌ನಲ್ಲಿ ಕಿಚ್ಚನ ಸಣ್ಣ ಆಕ್ಷನ್ ಝಲಕ್ ಕೂಡ ಇದೆ. ತೆರೆಮೇಲೆ ಅಭಿನಯ ಚಕ್ರವರ್ತಿಯನ್ನು ನೋಡಿ ಅಭಿಮಾನಿಗಳು ಶಿಳ್ಳೆ ಚಪ್ಪಾಳೆ ಗಿಟ್ಟಿಸಿದ್ದಾರೆ. ಒಂದು ಟ್ರೈಲರ್ ರೀತಿ ಎರಡೂವರೆ ಗಂಟೆ ಸಿನಿಮಾದಲ್ಲಿ ಹುಬ್ಬೇರಿಸುವ ಸಾಕಷ್ಟು ಬಿಲ್ಡಪ್ ದೃಶ್ಯಗಳು 'ಕೆಡಿ' ಚಿತ್ರದಲ್ಲಿ ತುಂಬಿಕೊಂಡಿದೆ. ಅದಕ್ಕೆಲ್ಲಾ ಕೇಕ್ ಮೇಲಿನ ಚೆರ್ರಿ ಎನ್ನುವಂತೆ ಕಾಲಭೈರವನಾಗಿ ಸುದೀಪ್ ಎಂಟ್ರಿ ಆಗುತ್ತದೆ. ಮತ್ತಷ್ಟು ಕಿಕ್ ಕೊಡುತ್ತದೆ. ಕಿಚ್ಚನ ಅಭಿಮಾನಿಗಳಿಗೂ ಇಷ್ಟವಾಗುತ್ತದೆ.

Sudeep s Kala Bhairava Steals the Show in KD Climax Prem Sets Up Massive Part-2 Twist

2022ರ ಏಪ್ರಿಲ್ 24ರಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ 'ಕೆಡಿ' ಸಿನಿಮಾ ಮುಹೂರ್ತ ನೆರವೇರಿತ್ತು. ಬಳಿಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸುದ್ದಿಗೋಷ್ಠಿ ಮಾಡಿ ಒಂದು ಟೀಸರ್ ಕೂಡ ಬಿಡುಗಡೆ ಮಾಡಿದ್ದರು. ಆದರೆ ಟೀಸರ್‌ನಲ್ಲಿದ್ದ ಬಹುತೇಕ ದೃಶ್ಯಗಳು ಈಗ ಬಿಡುಗಡೆ ಆಗಿರುವ ಸಿನಿಮಾದಲ್ಲಿ ಇಲ್ಲ. ಅಂದರೆ ಪ್ರೇಮ್ ಮೊದಲು ಮಾಡಿಕೊಂಡಿದ್ದ ಕಥೆ ಕಾಲಾನಂತರದಲ್ಲಿ ಬದಲಾಗುತ್ತಾ ಬಂದಂತೆ ಇದೆ. ಅಥವಾ ಎರಡು ಭಾಗಗಳಾಗಿ ಕಥೆ ಹೇಳಲು ಮೊದಲು ಮಾಡಿಕೊಂಡಿದ್ದ ಕಥೆಯನ್ನು ಬೆಳೆಸಿಕೊಂಡು ಹೋಗಿದ್ದಾರೆ. ಸುದೀಪ್ ಆಗಮನದ ಬಳಿಕ ಮತ್ತೊಂದು ಆಯಾಮವನ್ನೇ ಪಡೆದುಕೊಂಡಿದೆ.

ಸೀಕ್ವೆಲ್‌ನಲ್ಲಿ ಸುದೀಪ್ ಹೀರೊ ಎನ್ನುವ ಮಾತುಗಳು ಕೇಳಿಬಂದಿತ್ತು. ಹಾಗಿದ್ದರೆ ಧ್ರುವ ಕಥೆ ಏನಿರಬಹುದು ಎನ್ನುವ ಕುತೂಹಲ ಮೂಡಿತ್ತು. ಸಿನಿಮಾ ನೋಡಿದ್ಮೇಲೆ ಪಾರ್ಟ್-2 ಚಿತ್ರದಲ್ಲಿ ಕೂಡ ಧ್ರುವ ಸರ್ಜಾ ಹೀರೊ ಆಗಿ ಉಳಿಯುವುದು ಖಚಿತವಾಗಿದೆ. ಆದರೆ ಪ್ರಮುಖ ಪಾತ್ರದಲ್ಲಿ ಸುದೀಪ್ ಇರುತ್ತಾರೆ ಎನ್ನುವುದು ಸಿನಿಮಾ ಕ್ಲೈಮ್ಯಾಕ್ಸ್ ನೋಡಿದ್ರೆ ಅರ್ಥವಾಗುತ್ತದೆ. ಆದರೆ ಹೆಚ್ಚು ಸ್ಕ್ರೀನ್‌ ಸ್ಪೇಸ್ ಇರಲಿದೆ.

'ಕೆಡಿ' ಚಿತ್ರದಲ್ಲಿ ಒಂದೆರಡು ನಿಮಿಷ ತೆರೆಮೇಲೆ ಕಾಣಿಸಿಕೊಳ್ಳುವ ಕಿಚ್ಚ ಎಂದಿನಂತೆ ತಮ್ಮ ಖಡಕ್ ನಟನೆ, ಆಕ್ಷನ್ ಮೂಲಕ ಮೋಡಿ ಮಾಡಿದ್ದಾರೆ. ರಗಡ್ ಅವತಾರದಲ್ಲಿ ದರ್ಶನ ಕೊಟ್ಟು ಹುಬ್ಬೇರಿಸಿದ್ದಾರೆ. ಪ್ರೇಮ್ ಹಾಗೂ ಧ್ರುವ ಚಿತ್ರಕ್ಕೆ ಹೆಚ್ಚಿನ ಬಲ ತುಂಬಿದ್ದಾರೆ.

Read more about: sudeep kd prem
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X