ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಜುಲೈನಲ್ಲಿ ಡಬಲ್ ಧಮಾಕಾ
ಕಿಚ್ಚ ಸುದೀಪ್ ಮತ್ತು ನಿತ್ಯಾ ಮೆನನ್ ಒಂದಾಗಿ ಕಾಣಿಸಿಕೊಂಡಿರುವ 'ಕೋಟಿಗೊಬ್ಬ 2' ಚಿತ್ರದ ಟೀಸರ್ ಮತ್ತು ಆಡಿಯೋ ಬಿಡುಗಡೆ ಸಮಾರಂಭಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ಚಿತ್ರದ ಎಲ್ಲಾ ಕೆಲಸಗಳು ಮುಗಿದು ಕೊನೆಯ ಹಂತಕ್ಕೆ ಬಂದು ತಲುಪಿದ್ದು, ಆಡಿಯೋ ಮತ್ತು ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.
ಹೌದು ಜುಲೈ 2ರಂದು ಕೆ.ಎಸ್ ರವಿಕುಮಾರ್ ನಿರ್ದೇಶನದ 'ಕೋಟಿಗೊಬ್ಬ 2' ಚಿತ್ರದ ಟೀಸರ್ ಬಿಡುಗಡೆ ಆಗಲಿದ್ದು, ಜುಲೈ 9ಕ್ಕೆ ಆಡಿಯೋ ಬಿಡುಗಡೆ ಮಾಡಲು ನಿರ್ಮಾಪಕ ಸೂರಪ್ಪ ಬಾಬು ಅವರು ನಿರ್ಧರಿಸಿದ್ದಾರೆ.[ಮತ್ತೆ ನನಸಾಗಲಿಲ್ಲ 'ಕೋಟಿಗೊಬ್ಬ' ಸುದೀಪನ ಕನಸು]

ಈ ಚಿತ್ರ ಕನ್ನಡದಲ್ಲಿ 'ಕೋಟಿಗೊಬ್ಬ 2' ಮತ್ತು ತಮಿಳಿನಲ್ಲಿ 'ಮುಡಿಂಜ ಇವನ ಪುಡಿ' ಎಂಬ ಹೆಸರಿನಲ್ಲಿ ಏಕಕಾಲಕ್ಕೆ ತೆರೆ ಕಾಣುತ್ತಿದೆ. ಈಗಾಗಲೇ ತಮಿಳು ವರ್ಷನ್ ನ ಆಕರ್ಷಕ ಪೋಸ್ಟರ್ ಗಳು ರಿಲೀಸ್ ಆಗಿದ್ದು, ಸಖತ್ ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುವ ಮೂಲಕ ಕಾಲಿವುಡ್ ನಲ್ಲೂ ಸುದೀಪ್ ಹವಾ ಸೃಷ್ಟಿಸಿದ್ದಾರೆ.
ಈ ಮೊದಲು ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ದಿನದಂದು ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆ ಆಗಿತ್ತು. ಅದರಲ್ಲಿ ಸುದೀಪ್ ಅವರನ್ನು ಬಹಳ ಖಡಕ್ ಆಗಿ ಪರಿಚಯ ಮಾಡಲಾಗಿತ್ತು.['ಕೋಟಿಗೊಬ್ಬ-2' ಬಗ್ಗೆ ಬ್ರೇಕಿಂಗ್ ನ್ಯೂಸ್ ಕೇಳಿದ್ರೆ ಕಣ್ಣು-ಬಾಯಿ ಬಿಡ್ತೀರಾ.!]

ಇದೀಗ ಜುಲೈ 2 ರಂದು ಬಿಡುಗಡೆ ಮಾಡುತ್ತಿರುವ ಟೀಸರ್ ನಲ್ಲಿ ಇಡೀ ಚಿತ್ರದ ಕಥಾಹಂದರ ಪ್ರೇಕ್ಷಕರ ತಿಳಿಯಲಿದೆ. ಇನ್ನು ಚಿತ್ರದ ಆಡಿಯೋ ಬಿಡುಗಡೆ ಸಮಾರಂಭವನ್ನು ಬಹಳ ಅದ್ದೂರಿಯಾಗಿ ಮಾಡಲು ನಿರ್ಮಾಪಕ ಸೂರಪ್ಪ ಬಾಬು ಅವರು ಯೋಜನೆ ಹಾಕಿಕೊಂಡಿದ್ದಾರೆ.[ಎಕ್ಸ್ ಕ್ಲೂಸಿವ್: 'ಕೋಟಿಗೊಬ್ಬ-2' ಚಿತ್ರದ ಬೊಂಬಾಟ್ ಫೋಟೋಗಳು]

ಅಂದಹಾಗೆ 'ಕಬಾಲಿ' ತೆರೆಕಂಡ ಮೇಲೆ 'ಕೋಟಿಗೊಬ್ಬ 2' ಚಿತ್ರವನ್ನು ತೆರೆ ಮೇಲೆ ತರಲು ನಿರ್ಮಾಪಕರು ಪ್ಲ್ಯಾನ್ ಮಾಡಿಕೊಂಡಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಜುಲೈ ತಿಂಗಳ ಕೊನೆಯ ವಾರದಲ್ಲಿ 'ಕೋಟಿಗೊಬ್ಬ 2' ಗ್ರ್ಯಾಂಡ್ ಆಗಿ ತೆರೆಗೆ ಅಪ್ಪಳಿಸಲಿದೆ.[ಸುದೀಪ್ ಜೊತೆ ರೋಮ್ಯಾಂಟಿಕ್ ಗುಂಗಿನಲ್ಲಿ ನಿತ್ಯಾ ಮೆನನ್]

ಅಂತೂ ಕಡೆಗೂ ಅಭಿಮಾನಿಗಳ ಕಾಯುವಿಕೆಗೆ ಫುಲ್ ಸ್ಟಾಪ್ ಬಿದ್ದಿದ್ದು, ಸದ್ಯಕ್ಕೆ ಕಿಚ್ಚ ಸುದೀಪ್ ಮತ್ತು ನಿತ್ಯಾ ಮೆನನ್ ಅವರ ರೋಮ್ಯಾಂಟಿಕ್ ಹಾಡುಗಳನ್ನು ಕೇಳಲು ಹಾಗೂ ಟೀಸರ್ ನೋಡಲು ಸಜ್ಜಾಗಿ.


Click it and Unblock the Notifications











