For Quick Alerts
  ALLOW NOTIFICATIONS  
  For Daily Alerts

  ಟ್ರೆಂಡ್ ಆಯ್ತು ಸುದೀಪ್ ಅವರ ಹೊಸ ಸ್ಟೈಲ್

  By Bharath Kumar
  |
  ಸುದೀಪ್ ಸ್ಟೈಲ್ ಕಾಪಿ ಮಾಡಿದ ಅಭಿಮಾನಿಗಳು | Oneindia Kannada

  ಕಿಚ್ಚ ಸುದೀಪ್ ಕನ್ನಡದ ಸ್ಟೈಲಿಶ್ ಸ್ಟಾರ್. ಹೇರ್ ಸ್ಟೈಲ್, ಡ್ರೆಸ್, ವಾಕಿಂಗ್, ಡೈಲಾಗ್ ಡಿಲವರಿ ಹೀಗೆ ಸುದೀಪ್ ಏನೇ ಮಾಡಿದ್ರು, ಅದು ಟ್ರೆಂಡ್ ಆಗುತ್ತೆ. ಹೆಬ್ಬುಲಿ ಹೇರ್ ಸ್ಟೈಲ್, ವಿಲನ್ ಹೇರ್ ಸ್ಟೈಲ್ ನಂತರ ಈಗ ಕಿಚ್ಚನ ವಾಕಿಂಗ್ ಸ್ಟೈಲ್ ಟ್ರೆಂಡ್ ಆಗ್ತಿದೆ.

  ಹೌದು, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ದಿ ವಿಲನ್ 'ಸಿನಿಮಾದ ಹೊಸ ಪೋಸ್ಟರ್ ಈಗ ಭಾರಿ ಸದ್ದು ಮಾಡುತ್ತಿದೆ.

  ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಿದ್ದ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ನಿರ್ದೇಶಕ ಪ್ರೇಮ್, ಎರಡು ಪೋಸ್ಟರ್ ಬಿಡುಗಡೆ ಮಾಡಿದ್ರು. ಒಂದು ಶಿವರಾಜ್ ಕುಮಾರ್ ಕೂತಿರೋದು. ಮತ್ತೊಂದು ಸುದೀಪ್ ನಿಂತಿರೋದು. ಎರಡು ಪೋಸ್ಟರ್ ಗಳು ಚಿತ್ರದ ಖದರ್ ಹೆಚ್ಚಿಸಿದೆ. ಈ ಮಧ್ಯೆ ಕಿಚ್ಚನ ಹೊಸ ಪೋಸ್ಟರ್ ಕ್ರೇಜ್ ಹೆಚ್ಚಿಸಿದೆ.

  ಬಿಡುಗಡೆ ಆಯ್ತು 'ದಿ ವಿಲನ್' ಚಿತ್ರದಲ್ಲಿನ ಸುದೀಪ್-ಶಿವಣ್ಣ ಲುಕ್.!ಬಿಡುಗಡೆ ಆಯ್ತು 'ದಿ ವಿಲನ್' ಚಿತ್ರದಲ್ಲಿನ ಸುದೀಪ್-ಶಿವಣ್ಣ ಲುಕ್.!

  ಸುದೀಪ್ ಅವರು ನಿಂತಿರುವ ಸ್ಟೈಲ್ ನ್ನ ಅಭಿಮಾನಿಗಳು ಅನುಸರಿಸುತ್ತಿದ್ದಾರೆ. ಕಿಚ್ಚನಂತೆ ಫೋಸ್ ಕೊಟ್ಟು ಸ್ಮೈಲ್ ಮಾಡ್ತಿದ್ದಾರೆ. 'ವಿಲನ್' ಹೊಸ ಅವತಾರದಲ್ಲಿ ಫೋಟೋಗಳನ್ನ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

  ಇನ್ನು ಈ ಕ್ರೇಜ್ ನೋಡಿದ ಸುದೀಪ್ ಖುಷಿಯನ್ನ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳ ಈ ಫೋಟೋಗಳಿಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.

  ಅಂತು ಇಂತು 'ದಿ ವಿಲನ್' ಟೀಸರ್ ನೋಡೊ ಭಾಗ್ಯ ಸಿಕ್ತುಅಂತು ಇಂತು 'ದಿ ವಿಲನ್' ಟೀಸರ್ ನೋಡೊ ಭಾಗ್ಯ ಸಿಕ್ತು

  ಬಹುತೇಕ ಚಿತ್ರೀಕರಣ ಮುಗಿಸಿರುವ 'ದಿ ವಿಲನ್' ಚಿತ್ರತಂಡ ಇದೇ ವರ್ಷ ತೆರೆಗೆ ಬರ್ತಿದೆ. ಜೋಗಿ ಪ್ರೇಮ್ ನಿರ್ದೇಶನ ಹಾಗೂ ಸಿ.ಆರ್ ಮನೋಹರ್ ನಿರ್ಮಾಣದಲ್ಲಿ ಬಹಳ ಅದ್ಧೂರಿಯಾಗಿ ಸಿದ್ಧವಾಗುತ್ತಿದೆ. ನಾಯಕಿಯಾಗಿ ಆಮಿ ಜಾಕ್ಸನ್ ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಈಗಾಗಲೇ ಮೋಷನ್ ಪೋಸ್ಟರ್ ಧೂಳೆಬ್ಬಿಸಿದೆ.

  English summary
  There is so much curiosity surrounding The Villain. For starters, this is the first time that Shivarajkumar and Sudeep will be sharing screen space. What has also got everyone excited are the looks of both the stars in the film. Here, we reveal sudeep's look in the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X