For Quick Alerts
  ALLOW NOTIFICATIONS  
  For Daily Alerts

  ಫ್ಯಾಂಟಮ್ ಅಪ್‌ಡೇಟ್: ಎರಡು ಪ್ರಮುಖ ವಿಷಯ ಪ್ರಕಟಿಸಿದ ಅನೂಪ್ ಭಂಡಾರಿ

  |

  ಕಿಚ್ಚ ಸುದೀಪ್ ಹಾಗೂ ಅನೂಪ್ ಭಂಡಾರಿ ಕಾಂಬಿನೇಷನ್‌ನಲ್ಲಿ ಸೆಟ್ಟೇರಿದ್ದ ಫ್ಯಾಂಟಮ್ ಸಿನಿಮಾ ಚಿತ್ರೀಕರಣ ಮುಗಿಸಿ ತೆರೆಗೆ ಬರಲು ಸಜ್ಜಾಗುತ್ತಿದೆ. ಈ ನಡುವೆ ಚಿತ್ರದ ಟೈಟಲ್ ಬಗ್ಗೆ ಊಹಾಪೋಹ ಎದ್ದಿತ್ತು. ಫ್ಯಾಂಟಮ್ ಹೆಸರು ಬದಲಾವಣೆ ಆಗಲಿದೆ ಎಂಬ ಸುದ್ದಿ ಚರ್ಚೆಯಾಗುತ್ತಿತ್ತು.

  ಈ ಸಾಧನೆ ಮಾಡಿದ ಮೊದಲ ಕನ್ನಡಿಗ ಸುದೀಪ್ | Filmibeat Kannada

  ನಿರೀಕ್ಷೆಯಂತೆ ಹೆಸರು ಬದಲಾಗಿದೆ. ಫ್ಯಾಂಟಮ್ ಬದಲು ವಿಕ್ರಾಂತ್ ರೋಣ ಎಂದು ಚಿತ್ರಕ್ಕೆ ಮರುನಾಮಕರಣ ಮಾಡಲಾಗಿದೆ. ಈ ಕುರಿತು ನಿರ್ದೇಶಕ ಅನೂಪ್ ಭಂಡಾರಿ ಅಧಿಕೃತ ಪ್ರಕಟಣೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಕಿಚ್ಚ ಸುದೀಪ್ ಅವರಿಗೆ ವಿಶೇಷವಾದ ಗೌರವ ಸಲ್ಲಿಸಲು ಮೆಗಾ ಪ್ಲಾನ್ ಮಾಡಿರುವುದನ್ನು ಸಹ ಘೋಷಿಸಿದ್ದಾರೆ. ಮುಂದೆ ಓದಿ...

  ಬುರ್ಜ್ ಖಲೀಫ ಮೇಲೆ ಸುದೀಪ್

  ಬುರ್ಜ್ ಖಲೀಫ ಮೇಲೆ ಸುದೀಪ್

  ಸಿನಿಮಾ ಜಗತ್ತಿನಲ್ಲಿ ಕಿಚ್ಚ ಸುದೀಪ್ 25 ವರ್ಷಗಳನ್ನು ಪೂರೈಸಿರುವ ಖುಷಿ ಹಿನ್ನೆಲೆ, ಪ್ರಪಂಚದ ಅತಿ ಎತ್ತರದ ಕಟ್ಟಡ ದುಬೈನ ಬುರ್ಜ್ ಖಲೀಫದ ಮೇಲೆ ಸುದೀಪ್ ಅವರ ಫೋಟೋ ಅಥವಾ ಟೀಸರ್ ಪ್ರದರ್ಶನವಾಗಲಿದೆ ಎಂದು ಹೇಳಲಾಗಿತ್ತು. ಅದನ್ನೀಗ ಅನೂಪ್ ಭಂಡಾರಿ ಅಧಿಕೃತ ಮಾಡಿದ್ದಾರೆ.

  ಸುದೀಪ್ 'ಫ್ಯಾಂಟಮ್' ಸಿನಿಮಾದ ಟೈಟಲ್ ಬದಲಾವಣೆ: ನಿರ್ದೇಶಕರು ಹೇಳಿದ್ದೇನು?ಸುದೀಪ್ 'ಫ್ಯಾಂಟಮ್' ಸಿನಿಮಾದ ಟೈಟಲ್ ಬದಲಾವಣೆ: ನಿರ್ದೇಶಕರು ಹೇಳಿದ್ದೇನು?

  ಜನವರಿ 31ಕ್ಕೆ ಟೈಟಲ್ ಪೋಸ್ಟರ್

  ಜನವರಿ 31ಕ್ಕೆ ಟೈಟಲ್ ಪೋಸ್ಟರ್

  ಫ್ಯಾಂಟಮ್ ಬದಲು ವಿಕ್ರಾಂತ್ ರೋಣ ಹೆಸರು ಬದಲಾಗಿರುವ ಹಿನ್ನೆಲೆ, ಪ್ರಪಂಚದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫ ಮೇಲೆ ವಿಕ್ರಾಂತ್ ರೋಣ ಟೈಟಲ್ ಲೋಗೋ ಅನಾವರಣಗೊಳಿಸಲಿದ್ದಾರೆ. ಜನವರಿ 31 ರಂದು ಬೆಳಗ್ಗೆಯಿಂದ ಈ ಕಾರ್ಯಕ್ರಮ ಕಿಚ್ಚ ಕ್ರಿಯೇಷನ್ಸ್ ಯ್ಯೂಟ್ಯೂಬ್ ವಾಹಿನಿಯಲ್ಲಿ ನೇರ ಪ್ರಸಾರವಾಗಲಿದೆ.

  ಕನ್ನಡದ ಪ್ರಥಮ ನಟ ಎಂಬ ಹೆಗ್ಗಳಿಕೆ

  ಕನ್ನಡದ ಪ್ರಥಮ ನಟ ಎಂಬ ಹೆಗ್ಗಳಿಕೆ

  ಬುರ್ಜ್ ಖಲೀಫ ಕಟ್ಟಡದ ಮೇಲೆ ಸುದೀಪ್ ಅವರ ಕಟೌಟ್ ಅಥವಾ ಪೋಸ್ಟರ್ ಪ್ರದರ್ಶನ ಕಾಣಲಿದೆ. ಸೂಪರ್ ಸ್ಟಾರ್ ರಜನಿಕಾಂತ್, ಶಾರೂಖ್ ಖಾನ್ ಅಂತಹ ಕೆಲವೇ ನಟರ ಫೋಟೋಗಳು ಈ ಬುರ್ಜ್ ಖಲೀಫ ಕಟ್ಟಡದ ಮೇಲೆ ಪ್ರದರ್ಶನವಾಗಿದೆ. ಈಗ ಸುದೀಪ್ ಅವರ ಫೋಟೋ ಪ್ರದರ್ಶನವಾಗುತ್ತಿದ್ದು, ಕನ್ನಡದ ಮೊದಲ ನಟ ಎನಿಸಿಕೊಳ್ಳುತ್ತಿದ್ದಾರೆ.

  ದುಬೈನಲ್ಲಿ ಫ್ಯಾಂಟಮ್ ಸಂಭ್ರಮ: ಕಿಚ್ಚನಿಗಾಗಿಯೇ ಇದೆಲ್ಲಾದುಬೈನಲ್ಲಿ ಫ್ಯಾಂಟಮ್ ಸಂಭ್ರಮ: ಕಿಚ್ಚನಿಗಾಗಿಯೇ ಇದೆಲ್ಲಾ

  ಶೀರ್ಷಿಕೆ ಬದಲಾಗಲು ಕಾರಣವೇನು?

  ಶೀರ್ಷಿಕೆ ಬದಲಾಗಲು ಕಾರಣವೇನು?

  ಫ್ಯಾಂಟಮ್ ಸಿನಿಮಾ ಶೀರ್ಷಿಕೆಯನ್ನು ಬದಲಾಯಿಸಲು ನಿಖರವಾದ ಕಾರಣ ತಿಳಿದಿಲ್ಲ. ಆದರೆ, ಫ್ಯಾಂಟಮ್ ಟೈಟಲ್ ಹಕ್ಕು ಬೇರೆ ನಿರ್ಮಾಪಕರ ಬಳಿ ಇದೆ. ಹಾಗಾಗಿ, ಈ ಶೀರ್ಷಿಕೆ ಬಳಸಲು ಸಾಧ್ಯವಾಗುತ್ತಿಲ್ಲ. ಇನ್ನು ಚಿತ್ರದಲ್ಲಿ ಸುದೀಪ್ ವಿಕ್ರಾಂತ್ ರೋಣ ಎಂಬ ಪೊಲೀಸ್ ಆಫೀಸರ್ ಪಾತ್ರ ನಿರ್ವಹಿಸುತ್ತಿದ್ದು, ಅದೇ ಹೆಸರನ್ನು ಚಿತ್ರಕ್ಕೆ ಇಡಲು ನಿರ್ಧರಿಸಲಾಗಿದೆ ಎಂಬ ಮಾತಿದೆ.

  English summary
  Phantom is now Vikrant Rona. World's first movie to reveal Title Logo+180 secs sneak peek on Burj Khalifa Jan 31st.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X