ಕಿಚ್ಚ ಸುದೀಪ್ 'ರನ್ನ' ಇನ್ನು ತಡೆಯೋರು ಯಾರು ಇಲ್ಲ

By Rajendra

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ 'ರನ್ನ' ಚಿತ್ರದ ರಿಲೀಸ್ ಡೇಟ್ ಕನ್ಫರ್ಮ್ ಆಗಿದೆ. ಬಹುಕೋಟಿ ಬಜೆಟ್ ನ ಈ ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಎಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದರು.

ರನ್ನ ಚಿತ್ರಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿದೆ ಎಂಬ ಸುದ್ದಿಯನ್ನು ಚಿತ್ರದ ನಿರ್ಮಾಪಕರು ತಳ್ಳಿಹಾಕಿದ್ದು ಗೊತ್ತೇ ಇದೆ. ಇದೀಗ ಚಿತ್ರ ಇದೇ ಮೇ 7ಕ್ಕೆ ತೆರೆಗೆ ನುಗ್ಗಿ ಬರುತ್ತಿದೆ. ಚಿತ್ರವನ್ನು ಸೆನ್ಸಾರ್ ಗೆ ಕಳುಹಿಸಲಿದ್ದು ಮೇ .7ಕ್ಕೆ ಬಿಡುಗಡೆ ಮಾಡುವ ವಿಶ್ವಾಸದಲ್ಲಿದ್ದೇವೆ ಎಂದಿದ್ದಾರೆ ನಿರ್ಮಾಪಕ ಚಂದ್ರಶೇಖರ್. [ರನ್ನ ಚಿತ್ರಕ್ಕೆ ಅಡ್ಡಿ ಮಾಡುತ್ತಿರುವ ವಿಘ್ನ ಸಂತೋಷಿಗಳಾರು?]

Sudeep's Ranna slated for release on 7th May

ಈಗಾಗಲೆ ಬಿಡುಗಡೆಯಾಗಿರುವ ಚಿತ್ರದ ಹಾಡುಗಳು ಪ್ರೇಕ್ಷಕರಲ್ಲಿ ನಿರೀಕ್ಷೆಗಳನ್ನು ದುಪ್ಪಟ್ಟು ಮಾಡಿವೆ, ಇದು ತೆಲುಗಿನ 'ಅತ್ತಾರಿಂಟಿಕಿ ದಾರೇದಿ' ರೀಮೇಕ್ ಆದರೂ ಸುದೀಪ್ ರನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ.

ನಂದಕಿಶೋರ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದಾಗಿದ್ದು, 'ಬುಲ್ ಬುಲ್' ಖ್ಯಾತಿಯ ರಚಿತಾ ರಾಮ್ ಹಾಗೂ ಹರಿಪ್ರಿಯಾ ನಾಯಕಿಯರಾಗಿರುವ ಚಿತ್ರದಲ್ಲಿ ಅತ್ತೆ ಪಾತ್ರವನ್ನು "ಗೊಂಬೆ ಗೊಂಬೆ ಗೊಂಬೆ ನಿನ್ನ ಮುದ್ದಾಡಬೇಕು ನರಗೊಂಬೆ..." ಎಂದು ಕ್ರೇಜಿಸ್ಟಾರ್ ಜೊತೆ ಕುಣಿದಿದ್ದ ಮಧು ಅತ್ತೆ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಸರಿಸುಮಾರು ರು.20 ಕೋಟಿ ಬಜೆಟ್ ನಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ ಎಂ ಚಂದ್ರಶೇಖರ್. ಚಿತ್ರದ ಮುಖ್ಯಪಾತ್ರಗಳಲ್ಲಿ ದೇವರಾಜ್ ಹಾಗೂ ಪ್ರಕಾಶ್ ರೈ ಸಹ ಇದ್ದು ವಿ ಹರಿಕೃಷ್ಣ ಅವರ ಸಂಗೀತ ಚಿತ್ರಕ್ಕಿದೆ. ಸುಧಾಕರ್ ಎಸ್ ರಾಜು ಅವರ ಛಾಯಾಗ್ರಹಣ ಕೆ.ಎಂ. ಪ್ರಕಾಶ್ ಅವರ ಸಂಕಲನ ಚಿತ್ರಕ್ಕಿದೆ. ಕಾರ್ಮಿಕರ ದಿನವನ್ನ ಎನ್ ಕ್ಯಾಶ್ ಮಾಡಿಕೊಳ್ಳೋಕೆ ಸುದೀಪ್ ಅಂಡ್ ಟೀಂ ರೆಡಿಯಾಗಿದೆ, ಸಿನಿಮಾ ನೋಡೋಕೆ ರೆಡಿಯಾಗಿ. (ಏಜೆನ್ಸೀಸ್)

More from Filmibeat

English summary
Sudeep's Ranna slated for release on 7th May. The action film directed by Nanda Kishore. The principal cast includes Kiccha Sudeep, Rachita Ram, Haripriya and Madhoo.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X