KPL ಟೂರ್ನಿಯಿಂದ 'ರಾಕ್ ಸ್ಟಾರ್'ಗೆ ಗೇಟ್ ಪಾಸ್: ಸುದೀಪ್ ಬೇಸರ

By Bharath Kumar

6ನೇ ಆವೃತ್ತಿಯ 'ಕರ್ನಾಟಕ ಪ್ರೀಮಿಯರ್ ಲೀಗ್' ಕ್ರಿಕೆಟ್ ಟೂರ್ನಿಯಿಂದ ಕಿಚ್ಚ ಸುದೀಪ್ ನೇತೃತ್ವದ ರಾಕ್ ಸ್ಟಾರ್ ತಂಡವನ್ನ ಕೈಬಿಡಲಾಗಿದ್ದು, ರಾಕ್ ಸ್ಟಾರ್ ತಂಡದ ನಾಯಕ ಕಿಚ್ಚ ಸುದೀಪ್ ಈ ಕೆಪಿಎಲ್ ಆಡಳಿತ ಮಂಡಳಿಯ ನಡೆಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಸೆಪ್ಟಂಬರ್ 1 ರಿಂದ ಕೆಪಿಎಲ್ ಲೀಗ್ 6ನೇ ಆವೃತ್ತಿ ಆರಂಭವಾಗುತ್ತಿದ್ದು, ನಿನ್ನೆ ಅಧಿಕೃತವಾಗಿ ತಂಡಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಆದ್ರೆ, ಈ ಪಟ್ಟಿಯಲ್ಲಿ ರಾಕ್ ಸ್ಟಾರ್ ತಂಡವನ್ನ ಕಡೆಗಣಿಸಲಾಗಿದೆ. ಕಳೆದ ಬಾರಿ ಭಾಗವಹಿಸಿದ್ದ 6 ತಂಡಗಳನ್ನ ಉಳಿಸಿಕೊಂಡಿದ್ದು, ರಾಕ್ ಸ್ಟಾರ್ ತಂಡವನ್ನ ಟೂರ್ನಿಯಿಂದ ಹೊರಗುಳಿಸಿದೆ. ಏಕಾಏಕಿ ಕಾರಣವಿಲ್ಲದೆ ಈ ನಿರ್ಧಾರ ಕೈಗೊಂಡಿರುವ ಬಗ್ಗೆ ಸುದೀಪ್ ಬೇಸರವಾಗಿದ್ದಾರೆ.

Sudeep's Rockstar Eliminated From KPL Leauge

ಸತತ ಸಿನಿಮಾ ಕೆಲಸಗಳ ನಡುವೆಯೂ ಕ್ರಿಕೆಟ್ ಗಾಗಿ ಬಿಡುವು ಮಾಡಿಕೊಂಡು ಸಮಯ ನೀಡುತ್ತಿದ್ದ ತಂಡದ ಎಲ್ಲ ಆಟಗಾರರಿಗೂ ಧನ್ಯವಾದಗಳನ್ನ ತಿಳಿಸಿದ್ದಾರೆ. ಕಳೆದ ಆವೃತ್ತಿಯ ಕೆಪಿಎಲ್ ನಲ್ಲಿ ಆಡಲು ಅವಕಾಶ ಮಾಡಿಕೊಟ್ಟಿದ್ದ ಮಂಡಳಿಗೂ ಧನ್ಯವಾದಗಳು ತಿಳಿಸಿದ್ದಾರೆ.

ಕಳೆದ ಬಾರಿ ಕೆಪಿಎಲ್ ಟೂರ್ನಿಯಲ್ಲಿ ಸುದೀಪ್ ನಾಯಕತ್ವದ ತಂಡ ಭಾಗವಹಿಸಿತ್ತು. ಈ ತಂಡದಲ್ಲಿ ಸುದೀಪ್ ಸೇರಿದಂತೆ ಕನ್ನಡದ ಹಾಗೂ ತೆಲುಗು, ತಮಿಳಿನ ಕೆಲ ಆಟಗಾರರು ಆಡಿದ್ದರು.

More from Filmibeat

English summary
kannada actor kiccha sudeep has taken her twitter account to express his displeasure againt KPL (karnataka premier league)
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X