ರಷ್ಯಾದ ಅಭಿಮಾನಿಯಿಂದ ಕಿಚ್ಚ ಸುದೀಪ್ ಗೆ ಬಂತು ವಿಶೇಷ ಸಂದೇಶ
ಸ್ಯಾಂಡಲ್ ವುಡ್ ಮಾಣಿಕ್ಯ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೆ ಪ್ರಪಂಚದಾದ್ಯಂತ ಅಭಿಮಾನಿಗಳಿಗೆದ್ದಾರೆ. ಕನ್ನಡ ಮಾತ್ರವಲ್ಲದೆ ಗಡಿಗೂ ಮೀರಿ ಅಭಿಮಾನಿಗಳನ್ನು ಸಂಪಾದಿರುವ ಮಾಣಿಕ್ಯ, ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಬೇರೆ ಬೇರೆ ಭಾಷೆಗಳಲ್ಲಿಯೂ ಮಿಂಚುತ್ತಿದ್ದಾರೆ.
ಸದ್ಯ 'ಕೋಟಿಗೊಬ್ಬ-3' ಚಿತ್ರದ ಜೊತೆಗೆ ಕಿರುತೆರೆಯಲ್ಲಿಯೂ ಕಿಚ್ಚ ಬ್ಯುಸಿಯಾಗಿದ್ದಾರೆ. ಸುದೀಪ್ ಸಿನಿಮಾಗಳು ಮತ್ತು ಬಿಗ್ ಬಾಸ್ ನಡೆಸಿಕೊಡುವ ರೀತಿ ನೋಡಿ ಫಿದಾ ಆಗಿರುವ ದೂರದ ರಷ್ಯಾ ಯುವತಿಯೊಬ್ಬರು ಕಿಚ್ಚನಿಗೆ ವಿಶೇಷ ಸಂದೇಶವೊಂದು ಕಳುಹಿಸಿದ್ದಾರೆ. ರಷ್ಯಾದ ಮರೀನಾ ಕಾರ್ಟಿಂಕಾ ಎನ್ನುವ ಯುವತಿ ಸುದೀಪ್ ದೊಡ್ಡ ಅಭಿಮಾನಿಯಿಂತೆ. ಮರೀನಾ ತನ್ನ ಅಭಿಮಾನವನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ.
ವಿಡಿಯೋ ಮೂಲಕ ಕಿಚ್ಚನ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. "ನಮಸ್ಕಾರ ಸುದೀಪ್ ಅವರೆ. ನಾನು ಮರೀನಾ ಕಾರ್ಟಿಂಕಾ. ನಿಮ್ಮ ಅಭಿನಯ ನನಗೆ ತುಂಬ ಇಷ್ಟ. ನಾನು ಇಲ್ಲಿ, ನೀವು ನಡೆಸಿಕೊಡುವ ಬಿಗ್ ಬಾಸ್ ಕಾರ್ಯಕ್ರಮವನ್ನು ನೋಡಲು ಪ್ರಯತ್ನ ಪಡುತ್ತೇನೆ. ನೀವು ಅದ್ಭುತವಾದ ನಟ. ನಿಮ್ಮ ಸಿನಿಮಾ ನೋಡಲು ನಿಮ್ಮ ಸಿನಿಮಾಗಳನ್ನು ನೋಡಿ ತುಂಬ ಇಷ್ಟಪಟ್ಟಿದ್ದೇನೆ. ಕೋಟಿಗೊಬ್ಬ, ಪುಲಿ, ಪೈಲ್ವಾನ್, ಹೆಬ್ಬುಲಿ ಸೇರಿದಂತೆ ಅನೇಕ ಸಿನಿಮಾಗಳನ್ನು ನೋಡಿದ್ದೇನೆ. ನಾನು ಒಂದು ದಿನ ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ಭಾವಿಸಿದ್ದೇನೆ. ನೀವು ಆರೋಗ್ಯವಾಗಿ ಮತ್ತು ಸಂತೋಷವಾಗಿರಿ ಎಂದು ಹಾರೈಸುತ್ತೇನೆ. ನಮಗೆ ಮನೋರಂಜನೆ ನೀಡುತ್ತಿರುವುದಕ್ಕೆ ಧನ್ಯವಾದಗಳು" ಎಂದು ಹೇಳಿರುವ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅವಕು ರಾಜು ಫ್ಯಾನ್ ಗರ್ಲ್ ಪೇಜ್ ನಲ್ಲಿದ್ದ ಈ ವಿಡಿಯೋವನ್ನು ನೋಡಿ ಕಿಚ್ಚ ಸುದೀಪ್ ಸಹ ಪ್ರತಿಕ್ರಿಯೆ ನೀಡಿದ್ದಾರೆ. ದೂರದ ರಷ್ಯಾದ ಅಭಿಮಾನಿಯ ಅಭಿಮಾನ ಕಂಡು ಸುದೀಪ್ ಧನ್ಯವಾದ ತಿಳಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಶೇಷ ಅಂದರೆ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ಕಾರ್ಯಕ್ರಮವನ್ನು ಮರೀನಾ ರಷ್ಯಾದಿಂದನೆ ವೀಕ್ಷಿಸುತ್ತಾರಂತೆ.
ಕಿಚ್ಚ ಸುದೀಪ್ ಸದ್ಯ ಕೋಟಿಗೊಬ್ಬ-3 ಚಿತ್ರೀಕರಣದ ಕೊನೆಯ ಹಂತದಲ್ಲಿದ್ದಾರೆ. ಇದಾದ ಬಳಿಕ ಅನೂಪ್ ಭಂಡಾರಿ ನಿರ್ದೇಶನದ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಸುದೀಪ್ ನಿರ್ದೇಶನ ಕೂಡ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.


Click it and Unblock the Notifications











