For Quick Alerts
  ALLOW NOTIFICATIONS  
  For Daily Alerts

  ನಿಮಗೆ ಗೊತ್ತಿಲ್ಲದ 'ನಲ್ಲ' ಸುದೀಪ್ ಇನ್ನೊಂದು ಮುಖ

  By Harshitha
  |

  ಎಲ್ಲರಿಗೂ ಸುದೀಪ್ ಹೇಗೆ ಕಾಣ್ತಾರೆ? ನೋಡಿದ ತಕ್ಷಣ Attitude Problem, ತುಂಬಾ Arrogant, ನೆಲದ ಮೇಲೆ ನಿಲ್ಲದ ವ್ಯಕ್ತಿ, ಎಕ್ಸೆಟ್ರಾ ಎಕ್ಸೆಟ್ರಾ....ಅಂತ ಮಾತನಾಡಿಕೊಳ್ಳುವವರು ತುಂಬಾ ಜನ ಇದ್ದಾರೆ.

  ಸುದೀಪ್ ಹಾಗೆ ಕಾಣ್ಬಹುದು. ಆದ್ರೆ, ಕಂಡಿದ್ದು ಎಲ್ಲವೂ ನಿಜವಲ್ಲ. ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು ಅಂತಾರಲ್ಲ ಹಾಗೆ. ಸುದೀಪ್ ರನ್ನ ಹತ್ತಿರದಿಂದ ಬಲ್ಲವರು ಮಾತ್ರ ಅವರು ಎಂಥಾ 'ಮಾಣಿಕ್ಯ' ಅಂತ ಹೆಮ್ಮೆಯಿಂದ ಹೇಳುವುದಕ್ಕೆ ಸಾಧ್ಯ.

  ಸುದೀಪ್ ಚಿನ್ನದಂಥ ವ್ಯಕ್ತಿತ್ವದ ಬಗ್ಗೆ ಒಂದು ಪುಟ್ಟ ನಿದರ್ಶನ ಹೇಳ್ತೀವಿ..ಕೆಳಗಿರುವ ಸ್ಲೈಡ್ ಗಳಲ್ಲಿ ಓದಿ...

  ಇಂದು ಕೋಟಿಗಟ್ಟಲೆ ಸಂಭಾವನೆ ಪಡೆಯುವ ನಟ

  ಇಂದು ಕೋಟಿಗಟ್ಟಲೆ ಸಂಭಾವನೆ ಪಡೆಯುವ ನಟ

  ಕರ್ನಾಟಕ, ತಮಿಳುನಾಡು, ಆಂಧ್ರಾ ಮತ್ತು ಮುಂಬೈನಲ್ಲಿ ಸುದೀಪ್ ಗೆ ಮಾರ್ಕೆಟ್ ಇದೆ. ವಿದೇಶದಲ್ಲೂ ಸುದೀಪ್ ಗೆ ಫ್ಯಾನ್ಸ್ ಇದ್ದಾರೆ. ಇಂತಿಪ್ಪ ಸುದೀಪ್ ಅಭಿನಯಿಸುವ ಸಿನಿಮಾ ಲೋ ಬಜೆಟ್ ಆಗಿರುವುದಕ್ಕೆ ಸಾಧ್ಯವೇ ಇಲ್ಲ. ಗಡಿ ದಾಟಿ ಬೇಡಿಕೆ ಗಿಟ್ಟಿಸಿಕೊಂಡಿರುವ ನಟ ಸುದೀಪ್ ಸಂಭಾವನೆ ಕೋಟಿ ದಾಟಿ ವರ್ಷಗಳೇ ಉರುಳಿವೆ. ಇಂದು ಗಾಂಧಿನಗರದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪೈಕಿ ಸುದೀಪ್ ಕೂಡ ಒಬ್ಬರು. [ಕನ್ನಡ ತಮಿಳು ತೆಲುಗಿನಲ್ಲಿ ಕಿಚ್ಚ ಮಿಂಚಿಂಗೋ ಮಿಂಚಿಂಗು]

  'ರನ್ನ' ಚಿತ್ರಕ್ಕೆ ಸಂಭಾವನೆ ಪಡೆದಿಲ್ಲ??

  'ರನ್ನ' ಚಿತ್ರಕ್ಕೆ ಸಂಭಾವನೆ ಪಡೆದಿಲ್ಲ??

  ನಂಬಿದ್ರೆ ನಂಬಿ, ಕಿಚ್ಚ ಸುದೀಪ್ ಅಭಿನಯದ ಲೇಟೆಸ್ಟ್ ಸಿನಿಮಾ 'ರನ್ನ' ಇತ್ತೀಚೆಗಷ್ಟೇ ರಿಲೀಸ್ ಆಯ್ತು. ಎಲ್ಲೆಡೆ ಸಿಕ್ಕಾಪಟ್ಟೆ ಕಲೆಕ್ಷನ್ ಮಾಡುತ್ತಿರುವ 'ರನ್ನ' ಚಿತ್ರಕ್ಕಾಗಿ ಸುದೀಪ್ ಮೊದಲು ಸಂಭಾವನೆ ಬಗ್ಗೆ ಮಾತನಾಡಲಿಲ್ಲವಂತೆ. ['ರನ್ನ'ನ ಅಬ್ಬರಕ್ಕೆ ಬಾಕ್ಸ್ ಆಫೀಸ್ ಚಿಂದಿ ಚಿತ್ರಾನ್ನ!]

  'ರನ್ನ' ರಿಲೀಸ್ ಆಗುತ್ತಿರಲಿಲ್ಲ!

  'ರನ್ನ' ರಿಲೀಸ್ ಆಗುತ್ತಿರಲಿಲ್ಲ!

  'ರನ್ನ' ಚಿತ್ರ ಶುರುವಾದಾಗಿನಿಂದಲೂ ಒಂದಲ್ಲಾ ಒಂದು ತಂಟೆ ತಕರಾರು ಎದುರಾಗುತ್ತಲೇ ಇತ್ತು. ವಿತರಕರ ಸಮಸ್ಯೆ ಎದುರಿಸಿದ 'ರನ್ನ' ಬಿಡುಗಡೆಗೂ ಹಿಂದಿನ ದಿನದವರೆಗೂ ಕೋರ್ಟ್ ಆವರಣದಲ್ಲೇ ಇತ್ತು. ಎಲ್ಲಾ ಕೇಸ್ ಕ್ಲಿಯರ್ ಆಗುವುದರ ಹಿಂದೆ ಸುದೀಪ್ ನಿರ್ವಹಿಸಿದ ಪಾತ್ರ ಮಹತ್ವದ್ದು. ನಿರ್ಮಾಪಕರಿಗೆ ಧೈರ್ಯ ತುಂಬಿ ಸುದೀಪ್ ಮುನ್ನುಗ್ಗದೇ ಇದ್ದಿದ್ದರೆ 'ರನ್ನ' ರಿಲೀಸ್ ಆಗುತ್ತಿರಲಿಲ್ಲ. [ಇಬ್ಬರ ನಡುವಿನ ಕಿತ್ತಾಟದಲ್ಲಿ 'ರನ್ನ' ಚಿತ್ರಕ್ಕೆ ಬಿತ್ತು ಬ್ರೇಕ್ !]

  'ಲಾಭ ಬಂದರೆ ನೋಡೋಣ'

  'ಲಾಭ ಬಂದರೆ ನೋಡೋಣ'

  ಕೋರ್ಟ್ ಕೇಸ್ ಮತ್ತು ಇನ್ನಿತರ ವಿವಾದಗಳಿಗಾಗೇ ಸಾಕಷ್ಟು ದುಡ್ಡು ಸುರಿದಿದ್ದ ನಿರ್ಮಾಪಕ ಚಂದ್ರಶೇಖರ್, ಸುದೀಪ್ ಅವರಿಗೆ ನೀಡಬೇಕಾಗಿದ್ದ ಸಂಭಾವನೆ ಕ್ಲಿಯರ್ ಮಾಡಿರಲಿಲ್ಲ. ಆದ್ರೂ, ''ಸಿನಿಮಾ ಮುಖ್ಯ. ಚಿತ್ರವನ್ನ ಮೊದಲು ಕಂಪ್ಲೀಟ್ ಮಾಡಿ. ಲಾಭ ಬಂದರೆ ಸಂಭಾವನೆ ಆಮೇಲೆ ನೋಡೋಣ'' ಅಂತ ಪೇಮೆಂಟ್ ತೆಗೆದುಕೊಳ್ಳದೇ ಸಿನಿಮಾ ಕಂಪ್ಲೀಟ್ ಮಾಡಿಕೊಟ್ಟವರು ಅಭಿಮಾನಿಗಳ ಪ್ರೀತಿಯ 'ನಲ್ಲ' ಸುದೀಪ್.

  'ಪಾರ್ಥ' ಚಿತ್ರದಲ್ಲೂ ಆಗಿದ್ದು ಇದೇ.!

  'ಪಾರ್ಥ' ಚಿತ್ರದಲ್ಲೂ ಆಗಿದ್ದು ಇದೇ.!

  ಸುದೀಪ್ ಅಭಿನಯದ 2003 ರಲ್ಲಿ ತೆರೆಕಂಡ 'ಪಾರ್ಥ' ಚಿತ್ರದ ಸಂದರ್ಭದಲ್ಲೂ ಸಂಭಾವನೆ ಪಡೆಯದೇ ಚಿತ್ರವನ್ನ ಮುಗಿಸಿಕೊಟ್ಟಿದ್ದರು ಸುದೀಪ್.

  'ವೀರ ಮದಕರಿ', 'ಕೆಂಪೇಗೌಡ' ನಲ್ಲೂ ರಿಪೀಟ್

  'ವೀರ ಮದಕರಿ', 'ಕೆಂಪೇಗೌಡ' ನಲ್ಲೂ ರಿಪೀಟ್

  ನಿರ್ಮಾಪಕರಿಗೆ ಸಹಾಯ ಆಗಲಿ ಅಂತ ರೀಮೇಕ್ ಚಿತ್ರಗಳನ್ನ ಒಪ್ಪಿಕೊಂಡ ಸುದೀಪ್ ಖಾಲಿ ಕೈಯಲ್ಲೇ ಸಿನಿಮಾ ಮಾಡಿದ್ದು ಯಾರಿಗೂ ಗೊತ್ತಿಲ್ಲ. 'ವೀರ ಮದಕರಿ' ಮತ್ತು 'ಕೆಂಪೇಗೌಡ' ಚಿತ್ರ ಮಾಡುವಾಗ ನಿರ್ಮಾಪಕರು ಸಂಕಷ್ಟದಲ್ಲಿದ್ದರು. ಆಗ, ಸಂಭಾವನೆ ಪಡೆಯದೇ ಸುದೀಪ್ ಚಿತ್ರಗಳನ್ನ ಮುಗಿಸಿಕೊಟ್ಟರು. [ಸುದೀಪ್ ರೀಮೇಕ್ ಚಿತ್ರಗಳ ಚಿದಂಬರ ರಹಸ್ಯ ಬಯಲು]

  'ಚಿತ್ರ ಮುಖ್ಯ'

  'ಚಿತ್ರ ಮುಖ್ಯ'

  ''ಸಿನಿಮಾ ಮಾಡುವಾಗ ಕಷ್ಟಗಳು ಎದುರಾಗ್ತವೆ. ನಾನೊಬ್ಬ ಹಿಂದೆ ನಿಂತರೆ, ಸಿನಿಮಾಗಾಗಿ ದುಡಿಯುವ ಕಾರ್ಮಿಕರು ಮತ್ತು ಹಲವಾರು ಜನರಿಗೆ ದುಡ್ಡು ಸಿಕ್ಕಲ್ಲ. ಇದನ್ನೇ ನಂಬಿರುವವರು ತುಂಬಾ ಜನ ಇದ್ದಾರೆ. ಎಲ್ಲರ ಮುಖವನ್ನ ನೋಡಿ, ನಾನು ಮುಂದೆ ಬರುತ್ತಿದ್ದೆ'' ಅಂತ ಟಿವಿ9 ವಾಹಿನಿಗೆ ಸುದೀಪ್ ಹೇಳಿದ್ದಾರೆ.

  ಎಲ್ಲಾ ನಿರ್ಮಾಪಕರಿಗೂ 'ಚಿನ್ನ'

  ಎಲ್ಲಾ ನಿರ್ಮಾಪಕರಿಗೂ 'ಚಿನ್ನ'

  ಸಿನಿಮಾದಿಂದ ಲಾಭ ಬಂದಮೇಲೆ ಸುದೀಪ್ ಸಂಭಾವನೆಯನ್ನ ಪಡೆದಿರಬಹುದು. ಆದ್ರೆ, ಕಷ್ಟದಲ್ಲಿದ್ದಾಗ ನಿರ್ಮಾಪಕರಿಗೆ ಕೈಹಿಡಿಯುವ ಸುದೀಪ್ ಎಲ್ಲರ ಪಾಲಿಗೂ 'ಚಿನ್ನ'.

  ನಂದಕಿಶೋರ್ ಮತ್ತು ತರುಣ್ ಗೆ ಪ್ರೀತಿಯ 'ಅಣ್ಣ'

  ನಂದಕಿಶೋರ್ ಮತ್ತು ತರುಣ್ ಗೆ ಪ್ರೀತಿಯ 'ಅಣ್ಣ'

  ದಿ.ಸುಧೀರ್ ಪುತ್ರರಾದ ನಂದಕಿಶೋರ್ ಮತ್ತು ತರುಣ್ ಸುಧೀರ್ ಇಂದು ಗಾಂಧಿನಗರದಲ್ಲಿ ಬಹುಬೇಡಿಕೆ ಗಿಟ್ಟಿಸಿಕೊಂಡಿದ್ದಾರೆ ಅಂದ್ರೆ ಅದಕ್ಕೆ ಕಾರಣ ಕಿಚ್ಚ ಸುದೀಪ್. ಚಿತ್ರರಂಗದಲ್ಲಿ ಅವರಿಗೆ ಯಾರೂ ಸಹಾಯ ಮಾಡದೇ ಇದ್ದಾಗ, ಅಣ್ಣ-ತಮ್ಮನಿಗೆ ಆಸರೆಯಾಗಿದ್ದು ಇದೇ ಸುದೀಪ್.

  ಜೆ.ಕೆ ಮತ್ತು ರಾಹುಲ್ ಎಂಟ್ರಿ

  ಜೆ.ಕೆ ಮತ್ತು ರಾಹುಲ್ ಎಂಟ್ರಿ

  ಕಿರುತೆರೆಯಲ್ಲಿ ಜೆ.ಕೆ ಸೂಪರ್ ಸ್ಟಾರ್ ಆಗಿ ಬೆಳೆದಿರುವ ಹಿಂದೆ ಸುದೀಪ್ ಕೃಪಾಕಟಾಕ್ಷ ಇದೆ. ಇನ್ನೂ ಯುವ ಪ್ರತಿಭೆ ರಾಹುಲ್, ಸುದೀಪ್ ಬ್ಯಾನರ್ ನಿಂದಲೇ ಹೀರೋ ಆಗಿ ಎಂಟ್ರಿಕೊಡುತ್ತಿರುವುದು ಈಗಿನ ಅಪ್ ಡೇಟ್. [ಸೈಲೆಂಟಾಗಿ ಮುಹೂರ್ತ ಮುಗಿಸಿದ ಸುದೀಪ್ 3 ಚಿತ್ರಗಳು!]

  ಸುದೀಪ್ ಸ್ವಾರ್ಥಿ ಅಲ್ಲ..!

  ಸುದೀಪ್ ಸ್ವಾರ್ಥಿ ಅಲ್ಲ..!

  ತಾನೊಬ್ಬ ಮಾತ್ರ ಎತ್ತರಕ್ಕೆ ಏರಬೇಕು ಅಂತ ಅಹಂ ಇಲ್ಲದೇ, ತನ್ನೊಂದಿಗೆ ಇರುವ ಎಲ್ಲರನ್ನೂ ಬೆಳೆಸುವ ವಿಶಾಲ ಹೃದಯಿ ಸುದೀಪ್. ಇಂತಹ ಕಿಚ್ಚನ ಮನಸ್ಸು ಅರ್ಥ ಮಾಡಿಕೊಳ್ಳದೇ ಮಾತನಾಡುವವರು ಸಾಕಷ್ಟು ಮಂದಿ ಇದ್ದಾರೆ. ಆದ್ರೆ, ಸುದೀಪ್ ಬಲ್ಲವರು ಮಾತ್ರ ಅವರಿಗೆ ಸಲಾಂ ಹೊಡೆಯೋದು ಈ ಎಲ್ಲಾ ಕಾರಣಗಳಿಗೆ. (Source - TV9 Kannada)

  English summary
  Kiccha Sudeep is always soft cornered towards Kannada Film Producers. Read the article to know how Sudeep was a backbone to few Kannada producers.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X