»   » 'ರಾಗ' ಟ್ರೈಲರ್ ಗೆ ದನಿ ನೀಡಿದ ಕಿಚ್ಚ ಸುದೀಪ್.!

'ರಾಗ' ಟ್ರೈಲರ್ ಗೆ ದನಿ ನೀಡಿದ ಕಿಚ್ಚ ಸುದೀಪ್.!

Posted By:
Subscribe to Filmibeat Kannada
ಅಂಧರ ಮೇಲೆ ಅಪಾರ ಅಭಿಮಾನ ಹೊಂದಿರುವ ಕಿಚ್ಚ ಸುದೀಪ್, ಅಂಧರ ಕುರಿತು ತಯಾರಾಗುತ್ತಿರುವ 'ರಾಗ' ಚಿತ್ರದ ಟ್ರೈಲರ್ ಗೆ ದನಿ ನೀಡಿದ್ದಾರೆ. ಇತ್ತೀಚೆಗಷ್ಟೇ ಅದರ ರೆಕಾರ್ಡಿಂಗ್ ಕೂಡ ಮುಗಿದಿದೆ.

ಮಿತ್ರ ಎಂಟರ್ ಟ್ರೈನರ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಹಾಸ್ಯ ನಟ ಮಿತ್ರ ನಿರ್ಮಾಣ ಮಾಡುತ್ತಿರುವ ಸಿನಿಮಾ 'ರಾಗ'. ಈ ಚಿತ್ರಕ್ಕೆ ಪಿ.ಸಿ.ಶೇಖರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.[ಕಿಚ್ಚ ಸುದೀಪ್ ಕಂಠಸಿರಿಯಲ್ಲಿ 'ರಾಗ' ಚಿತ್ರದ ಟ್ರೈಲರ್]

Sudeep's voice over of 'Raaga' trailer

ಮಿತ್ರ, ಭಾಮಾ, ಅವಿನಾಶ್, ಜೈಜಗದೀಶ್, ರಮೇಶ್ ಭಟ್, ಸಿಹಿ ಕಹಿ ಚಂದ್ರು ರಂತಹ ದೊಡ್ಡ ತಾರಾಬಳಗ ಇರುವ 'ರಾಗ' ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಮಿತ್ರ ಹಾಗೂ ಭಾಮಾ ಅಂಧರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಮನ ಮುಟ್ಟುವ ಕಥಾಹಂದರ ಇರುವ 'ರಾಗ' ಟ್ರೈಲರ್ ಸುದೀಪ್ ಕಂಠಸಿರಿಯಲ್ಲಿ ಮೂಡಿಬರಲಿದೆ. ಸದ್ಯದಲ್ಲಿಯೇ 'ರಾಗ' ಟ್ರೈಲರ್ ಬಿಡುಗಡೆ ಆಗಲಿದೆ. ನಿರೀಕ್ಷಿಸಿ....

English summary
Kannada Actor Kiccha Sudeep has given Voice Over for the trailer of Kannada Movie 'Raaga'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada