For Quick Alerts
  ALLOW NOTIFICATIONS  
  For Daily Alerts

  ಮೇಘಾಲಯದ ಮೋಡಗಳ ಮಧ್ಯೆ 'ಕಿಚ್ಚನ ಮಡದಿ'

  By Pavithra
  |

  ಸ್ಟಾರ್ ಗಳು ಸಿನಿಮಾಗಳಲ್ಲಿ ಅಭಿನಯಿಸುವುದರ ಜೊತೆಯಲ್ಲಿ ಸಾಕಷ್ಟು ಹವ್ಯಾಸಗಳನ್ನು ಇಟ್ಟುಕೊಂಡಿರುತ್ತಾರೆ. ಎಲ್ಲರಿಗೂ ಗೊತ್ತಿರುವಂತೆ ಕಿಚ್ಚ ಸುದೀಪ್ ಅಭಿನಯದ ಜೊತೆಯಲ್ಲಿ ಹಾಡುವುದು, ಗಿಟಾರ್ ಪ್ಲೇ, ಬೈಕ್ ರೈಡ್ ಹೀಗುವುದು ಹೀಗೆ ಸಾಕಷ್ಟು ರೀತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

  ಅದರಂತೆ ಕಿಚ್ಚನ ಮಡದಿ ಕೂಡ ಒಳ್ಳೆಯ ಅಭ್ಯಾಸಗಳನ್ನು ರೂಡಿಸಿಕೊಂಡಿದ್ದಾರೆ. ಪ್ರಿಯಾ ಸುದೀಪ್ ಅವರಿಗೆ ಪ್ರವಾಸ ಮಾಡುವುದೆಂದರೆ ಇಷ್ಟವಿರಬೇಕು. ಅದರಲ್ಲಿಯೂ ಅಡ್ವೆಂಚರಸ್ ಟ್ರಿಪ್ ಗಳನ್ನ ಮಾಡುವುದೆಂದರೆ ಇಷ್ಟ ಪಡುತ್ತಾರೆ ಎನ್ನುವುದನ್ನು ಅವರ ಟ್ವಿಟ್ಟರ್ ಅಪ್ಡೇಟ್ ನೋಡಿದರೆ ತಿಳಿಯುತ್ತೆ.

  ಕಿಚ್ಚನ ಸಿನಿಮಾದಲ್ಲಿ ಸುನೀಲ್ ಶೆಟ್ಟಿ ಕಿಚ್ಚನ ಸಿನಿಮಾದಲ್ಲಿ ಸುನೀಲ್ ಶೆಟ್ಟಿ

  ಇತ್ತೀಚಿಗಷ್ಟೆ ಫ್ಯಾಮಿಲಿ ಸಮೇತರಾಗಿ ಮಲೇಷಿಯಾ ಪ್ರವಾಸ ಮಾಡಿ ಬಂದ ಪ್ರಿಯಾ ಮೇಘಾಲಯದಲ್ಲಿ ಟ್ರಕ್ಕಿಂಗ್ ಮಾಡಿಕೊಂಡು ಬಂದಿದ್ದಾರೆ. ಟ್ರಕ್ಕಿಂಗ್ ಮಾಡಿದ ಅನುಭವ ಹಾಗೂ ಮೇಘಾಲಯದ ಸುಂದರ ತಾಣಗಳ ಬಗ್ಗೆ ಪ್ರಿಯಾ ಸುದೀಪ್ ತಮ್ಮ ಟ್ವಿಟ್ಟರ್ ನಲ್ಲಿ ಬರೆದಿದ್ದಾರೆ.

  ಕೆಲವು ದಿನಗಳ ಹಿಂದೆ ಪ್ರಿಯಾ ಸುದೀಪ್ ಹಾಗೂ ಮಗಳು ಸಾನ್ವಿ ಹಿಮಾಲಯಕ್ಕೆ ಪ್ರವಾಸ ಹೋಗಿ ಬಂದಿದ್ದರು. ಒಟ್ಟಾರೆ ದೇಶ ಸುತ್ತಿ ನೋಡು ಕೋಶ ಓದಿ ನೋಡು ಎನ್ನುತ್ತಾರೆ ಅದರಂತೆ ಪ್ರಿಯಾ ಸುದೀಪ್ ಜಗತ್ತಿನ ಸುಂದರ ತಾಣಗಳನ್ನ ಕಣ್ಣುಗಳಲ್ಲಿ ತುಂಬಿಕೊಳ್ಳುತ್ತಿದ್ದಾರೆ.

  English summary
  Kannada actor Sudeep's wife Priya has gone on a tour of Meghalaya. Priya Uploaded trucking photos in Meghalaya on Twitter

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X