ಶಿವಣ್ಣನ ನಾಯಕಿ ಮೆಹ್ರಿನ್‌ಗೆ ಸುದೀಪ್ ಪಾಠ

ಶಿವರಾಜ್ ಕುಮಾರ್‌ ನಟಿಸುತ್ತಿರುವ 'ನೀ ಸಿಗೋವರೆಗೆ' ಸಿನಿಮಾದ ಮುಹೂರ್ತ ನಿನ್ನೆಯಷ್ಟೆ ನೆರವೇರಿತು. ಸಿನಿಮಾಕ್ಕೆ ನಟ ಸುದೀಪ್ ಕ್ಲ್ಯಾಪ್ ಮಾಡಿ ಶುಭ ಹಾರೈಸಿದ್ದಾರೆ.

Recommended Video

ಇದು ತವರಿಗೆ ಬಾ ತಂಗಿ ಅಲ್ಲಮ್ಮ ಎಂದು ಶಿವಣ್ಣನ ಕಾಲೆಳೆದ ಕಿಚ್ಚ

ಸಿನಿಮಾದ ಮುಹೂರ್ತ ಪೂಜೆ ಬಳಿಕ ಚಿತ್ರತಂಡವು ಸಣ್ಣ ಸುದ್ದಿಗೋಷ್ಠಿಯನ್ನು ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ನಟ ಸುದೀಪ್, ನಟ ಶಿವರಾಜ್ ಕುಮಾರ್, ಸಿನಿಮಾದ ನಾಯಕಿ ಮೆಹ್ರಿನ್, ನಿರ್ದೇಶಕ ರವಿ ಧುಲಿಪುಡಿ, ನಿರ್ಮಾಪಕರುಗಳು, ಸಂಗೀತ ನಿರ್ದೇಶಕ ಚರಣ್ ರಾಜ್ ಇನ್ನೂ ಹಲವರು ಮಾತನಾಡಿದರು.

ನಟ ಸುದೀಪ್ ವೇದಿಕೆ ಮೇಲಿದ್ದರೆ ಸಿನಿಮಾದ ಬಗ್ಗೆ, ಪ್ರಸ್ತುತ ಸನ್ನಿವೇಶದ ಬಗ್ಗೆ, ಚಿತ್ರರಂಗ ಸಾಗುತ್ತಿರುವ ಬಗ್ಗೆ ಇನ್ನೂ ಕೆಲವು ವಿಷಯಗಳ ಬಗ್ಗೆ ಮಾಹಿತಿ ಪೂರ್ಣ ಮಾತುಗಳ ಜೊತೆಗೆ ತುಸು ಹಾಸ್ಯದ ಮಾತುಗಳು ಸಹ ಸಾಮಾನ್ಯವೇ. 'ನೀ ಸಿಗೋವರೆಗೆ' ಸಿನಿಮಾದ ಪ್ರೆಸ್‌ಮೀಟ್‌ನಲ್ಲಿಯೂ ಹೀಗೆಯೇ ಆಯಿತು.

ಆರಂಭದಲ್ಲಿಯೇ ನಟ ಸುದೀಪ್ ಮಾತನಾಡಿ, ಸಿನಿಮಾಕ್ಕೆ ಶುಭಾಶಯ ಹೇಳಿದರು. ಶಿವರಾಜ್ ಕುಮಾರ್, ತಮ್ಮ ಆರಂಭದ ಸಿನಿಮಾಗಳಿಗೆ ಕ್ಲ್ಯಾಪ್ ಮಾಡಿದ್ದನ್ನು ನೆನಪಿಸಿಕೊಂಡು, ನನ್ನ ಬೆಳವಣಿಗೆಯಲ್ಲಿ ಶಿವಣ್ಣನ ಪಾತ್ರವೂ ಇದೆ ಎಂದರು. ಕೊರೊನಾದ ಈ ಸಂಕಷ್ಟದ ಸಮಯದಲ್ಲಿ ಸಿನಿಮಾ ನಿರ್ಮಾಣಕ್ಕೆ ಮುಂದಾಗಿರುವ ನಿರ್ಮಾಪಕ ತಂಡಕ್ಕೆ ಧನ್ಯವಾದ ಅರ್ಪಿಸಿದರು.

ಶಿವಣ್ಣನಿಗೆ ಧನ್ಯವಾದ: ಮೆಹ್ರಿನ್

ಶಿವಣ್ಣನಿಗೆ ಧನ್ಯವಾದ: ಮೆಹ್ರಿನ್

ಆ ನಂತರ ಮಾತನಾಡಿದ ನಟಿ ಮೆಹ್ರಿನ್, ಇದು ನನ್ನ ಮೊದಲ ಕನ್ನಡ ಸಿನಿಮಾ, ಕನ್ನಡ ಸಿನಿಮಾದಲ್ಲಿ ನಟಿಸುವ ಆಸೆಯಿತ್ತು ಅದು ಈಗ ಈಡೇರುತ್ತಿದೆ. ಮೊದಲ ಸಿನಿಮಾದಲ್ಲಿಯೇ ಶಿವಣ್ಣನ ಜೊತೆಗೆ ನಟಿಸುತ್ತಿರುವುದು ಬಹಳ ಖುಷಿ ತಂದಿದೆ ಎಂದರು. ಮೆಹ್ರಿನ್ ಮಾತು ಮುಗಿಸುತ್ತಿದ್ದಂತೆ ಸುದೀಪ್ ಮೆಹ್ರಿನ್‌ಗೆ ಏನೋ ಹೇಳಿದರು, ಅದಕ್ಕೆ ಶಿವಣ್ಣ ನಗುತ್ತಾ ಸುದೀಪ್‌ಗೆ ತಮಾಷೆಯಾಗಿ ಹೊಡೆದರು.

ಮೆಹ್ರಿನ್ ಶಿವಣ್ಣನನ್ನು ಡಾರ್ಲಿಂಗ್ ಎನ್ನಬೇಕು: ಸುದೀಪ್

ಮೆಹ್ರಿನ್ ಶಿವಣ್ಣನನ್ನು ಡಾರ್ಲಿಂಗ್ ಎನ್ನಬೇಕು: ಸುದೀಪ್

ಕೊನೆಗೆ ಶಿವಣ್ಣ ಮಾತನಾಡಲು ಎದ್ದಾಗ, ಸುದೀಪ್ ಸಹ ಮೈಕ್ ಪಡೆದುಕೊಂಡು, ''ಮೆಹ್ರಿನ್ ಸಿನಿಮಾದ ನಾಯಕಿ ಆದರೆ ಶಿವರಾಜ್ ಕುಮಾರ್ ಅವರನ್ನು ಶಿವಣ್ಣ ಎಂದು ಬಿಟ್ಟರು. ಅದಕ್ಕೆ ನಾನು ಹೇಳುತ್ತಿದ್ದ ಶಿವಣ್ಣ ಎಂದರೆ ಬ್ರದರ್ ಎಂದರ್ಥ, ಸಿನಿಮಾದ ನಾಯಕಿ ನೀವು ಬ್ರದರ್ ಎಂದು ಕರೆಯಬೇಡಿ, ತವರಿಗೆ ಬಾ ತಂಗಿ ಅಲ್ಲ ಲವ್ ಸ್ಟೋರಿ ಸಿನಿಮಾ ಅದಕ್ಕೆ ಬದಲಾಗಿ ಡಾರ್ಲಿಂಗ್ ಎಂದು ಕರೆಯಿರಿ. ಸಿನಿಮಾ ಮುಗಿಯುವವರೆಗೆ ಶಿವಣ್ಣನನ್ನು ನೀವು ಡಾರ್ಲಿಂಗ್ ಎಂದೇ ಕರೆಯಿರಿ ಎನ್ನುತ್ತಿದ್ದೇನೆ. ನಾನು ಹೇಳಿದ್ದು ತಪ್ಪೇ ನೀವೆ ಹೇಳಿ'' ಎಂದು ನೆರೆದಿದ್ದವರನ್ನು ಪ್ರಶ್ನೆ ಮಾಡಿದರು ಸುದೀಪ್.

ಕತೆಯನ್ನು ಕೊಂಡಾಡಿದ ಶಿವಣ್ಣ

ಕತೆಯನ್ನು ಕೊಂಡಾಡಿದ ಶಿವಣ್ಣ

ಇದಕ್ಕೆ ನಗುವಿನ ಪ್ರತಿಕ್ರಿಯೆ ನೀಡಿದ ಶಿವಣ್ಣ, ನೀನು ಸುಮ್ಮನಿರಪ್ಪ ಎಂಬಂತೆ ತಮಾಷೆಯಾಗಿ ಸಂಜ್ಞೆ ಮಾಡಿ ಹಣೆ ಚಚ್ಚಿಕೊಂಡರು. ನಟಿ ಮೆಹ್ರಿನ್ ಸಹ ನಗುತ್ತಾ ಸಮ್ಮತಿ ಸೂಚಿಸಿದರು. ನಂತರ ಮಾತನಾಡಿದ ಶಿವಣ್ಣ ಸಿನಿಮಾದ ಕತೆ ಸರಳವಾಗಿದ್ದರೂ ಕನೆಕ್ಟ್ ಆಗುವ ರೀತಿ. ಬಹಳ ದಿನಗಳ ನಂತರ ಲವ್ ಸ್ಟೋರಿ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ನಾನು ಹೀಗೆಯೇ ಕಾಣಬೇಕು ಎಂದು ಬಹಳಷ್ಟು ಲುಕ್‌ಗಳನ್ನು ಪ್ರಯೋಗ ಮಾಡಿ ನೋಡಿದ್ದಾರೆ ಸಿನಿಮಾ ಚೆನ್ನಾಗಿ ಬರುವ ಎಲ್ಲ ವಿಶ್ವಾಸವಿದೆ'' ಎಂದರು ಶಿವರಾಜ್ ಕುಮಾರ್.

ಸುದೀಪ್-ಶಿವಣ್ಣ ಆತ್ಮೀಯ ಗೆಳೆಯರು

ಸುದೀಪ್-ಶಿವಣ್ಣ ಆತ್ಮೀಯ ಗೆಳೆಯರು

ನಟ ಸುದೀಪ್ ಹಾಗೂ ಶಿವಣ್ಣ ಬಹಳ ಆತ್ಮೀಯ ಗೆಳೆಯರು. ಹಿಂದೊಮ್ಮೆ ಬೇರೊಬ್ಬರ ಕಾರಣಕ್ಕೆ ಇಬ್ಬರ ನಡುವೆ ಸಣ್ಣ ಮನಸ್ತಾಪವಾಗಿತ್ತಾದರೂ ಶಿವಣ್ಣ, ರಾಘಣ್ಣ ಮುಂದೆ ನಿಂತು ಮನಸ್ತಾಪವನ್ನು ಸರಿ ಮಾಡಿದರು. ಇಬ್ಬರೂ ಜೊತೆಯಾಗಿ 'ದಿ ವಿಲನ್' ಸಿನಿಮಾದಲ್ಲಿ ನಟಿಸಿದ್ದಾರೆ. ಸುದೀಪ್ ನಟನೆಯ 'ಕೋಟಿಗೊಬ್ಬ 3' ಬಿಡುಗಡೆಗೆ ರೆಡಿಯಾಗಿದೆ. ನಂತರ 'ವಿಕ್ರಾಂತ್ ರೋಣ' ಸಹ ತಯಾರಾಗಿದ್ದು ಅದು ಸಹ ಬಿಡುಗಡೆಗೆ ಕಾಯುತ್ತಿದೆ. ಇನ್ನು ಶಿವಣ್ಣ ಅಭಿನಯದ 'ಭಜರಂಗಿ 2' ಬಿಡುಗಡೆಗೆ ರೆಡಿಯಾಗಿದೆ. ಅದರ ಬಳಿಕ 'ಭೈರವ' ಸಹ ಚಿತ್ರೀಕರಣ ಮುಗಿದಿದೆ. ಇದೀಗ 'ನೀ ಸಿಗೋವರೆಗೆ' ಸಿನಿಮಾ ಚಿತ್ರೀಕರಣ ಪ್ರಾರಂಭವಾಗಿದ್ದು, ಅದರ ಬಳಿಕ ಇನ್ನೂ ಹಲವು ಸಿನಿಮಾಗಳು ಶಿವಣ್ಣನ ಕೈಯಲ್ಲಿವೆ.

More from Filmibeat

English summary
Sudeep said actress Mehreen Pirzada to call Shiva Rajkumar darling instead calling him Shivanna.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X