ಕ್ಯಾನ್ಸರ್ ಪೀಡಿತ ಅಭಿಮಾನಿಯ ತಾಯಿಗೆ ಸುದೀಪ್ ಸಹಾಯ : ಇದು ಕಿಚ್ಚನ ದೊಡ್ಡ ಗುಣ

ಇದೇ ಕಾರಣಕ್ಕೆ ನಟ ಕಿಚ್ಚ ಸುದೀಪ್ ಇಷ್ಟ ಆಗುವುದು... ಸುದೀಪ್ ನಟನೆ, ಡ್ರೆಸ್, ಲುಕ್, ಹೈಟ್, ಫೈಟ್ ಹೀಗೆ ಎಲ್ಲವೂ ಅವರ ಅಭಿಮಾನಿಗಳಿಗೆ ಪ್ರಿಯವೇ. ಆದರೆ, ಸುದೀಪ್ ವ್ಯಕ್ತಿತ್ವ ಕೆಲವು ಬಾರಿ ಇವೆಲ್ಲವನ್ನು ಮೀರಿಸಿ ಬಿಡುತ್ತದೆ.

ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವುದಲ್ಲಿ ಸುದೀಪ್ ಎತ್ತಿದ ಕೈ. 'ಮಾಣಿಕ್ಯ' ಸಿನಿಮಾದ ''ಜೀವ ಜೀವ.. ನಮ್ ಜೀವ ನಮ್ ದೈವ ಕಣೋ ಇವನು.. ನಮ್ಮ ಊರ ಕಣ್ಣಾಗೋ ಸರದಾರ ಕಣೋ ಇವನು..'' ಎನ್ನುವ ಹಾಡಿನ ರೀತಿ ಸುದೀಪ್ ಎಷ್ಟೋ ಕುಟುಂಬದ ಕಣ್ಣೀರು ಒರೆಸಿದ್ದಾರೆ.

ಈಗಲೂ ತಮ್ಮ ಒಳ್ಳೆಯ ಕೆಲಸವನ್ನು ಅಭಿನಯ ಚಕ್ರವರ್ತಿ ಮುಂದುವರೆಸುತ್ತಿದ್ದಾರೆ. ತಮ್ಮ ಅಭಿಮಾನಿಯೊಬ್ಬರ ತಾಯಿಗೆ ಕ್ಯಾನ್ಸರ್ ಆಗಿದ್ದು, ಚಿಕಿತ್ಸೆಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಮುಂದೆ ಓದಿ...

ಅಭಿಮಾನಿಯ ಕೋರಿಗೆ

ಅಭಿಮಾನಿಯ ಕೋರಿಗೆ

ಕಿಚ್ಚ ಲಕ್ಷಣ್ ಗೌಡ ಎಂಬ ಸುದೀಪ್ ಅವರ ಅಭಿಮಾನಿಯೊಬ್ಬರು ಟ್ವಿಟ್ಟರ್ ಖಾತೆಯ ಮೂಲಕ ತಮ್ಮ ಕಷ್ಟ ಹೇಳಿಕೊಂಡಿದ್ದರು. ಸುದೀಪ್ ಅವರ ಬಳಿ ಸಹಾಯ ಬೇಡಿದ್ದರು. ಟ್ವಿಟ್ಟರ್ ನಲ್ಲಿ ಅಭಿಮಾನಿಗಳ ಜೊತೆಗೆ ಸದಾ ಸಂಪರ್ಕದಲ್ಲಿ ಇರುವ ಸುದೀಪ್ ಅದಕ್ಕೆ ಸ್ಪಂದಿಸಿ, ಅಭಿಮಾನಿಗೆ ಸಮಾಧಾನ ಹೇಳಿದ್ದಾರೆ.

ಚಿಕಿತ್ಸೆಗೆ ಹಣ ಇಲ್ಲ

''ಕಿಚ್ಚ ಸುದೀಪ್ ಅಣ್ಣ, ನಮ್ಮ ಅಮ್ಮ ಇವರು ಹೆಸರು ಮಂಗಳಮ್ಮ ವಯಸ್ಸು 40 ಇವರು 4 ವರ್ಷಗಳಿಂದ ಬ್ರೆಸ್ಟ್ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಎರಡು ಸಲ ಆಪರೇಷನ್ ಆಗಿದೆ. ಆದರೆ, ಮತ್ತೆ ಕಾಯಿಲೆ ಜಾಸ್ತಿ ಆಗಿದೆ. ಈಗ ಮತ್ತೆ ಆಪರೇಷನ್ ಮಾಡಿಸ್ಬೇಕು. ಆಪರೇಷನ್ ಅಂದ್ರೆ ನಾವು ತುಂಬಾ ತೊಂದ್ರೆಲಿ ಇದೀವಿ. ಅದರಿಂದ ಸಹಾಯ ಅನಿವಾರ್ಯತೆ ಇದೆ pls ಅಣ್ಣ.'' ಎಂದು ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಸುದೀಪ್ ಸ್ಪಂದನೆ

ಸುದೀಪ್ ಸ್ಪಂದನೆ

ಅಭಿಮಾನಿಯ ಮನವಿಗೆ ಸ್ಪಂದಿಸಿರುವ ಸುದೀಪ್ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ''ಗೆಳೆಯ ನಾನು ನನ್ನ ಕೈ ನಲ್ಲಿ ಆದ ಸಹಾಯ ಮಾಡುತ್ತೇನೆ. ನಮ್ಮ ಕಡೆಯವರು ನಿಮ್ಮನ್ನು ಸಂಪರ್ಕ ಮಾಡುತ್ತಾರೆ. ನಿಮ್ಮ ತಾಯಿಯ ಆರೋಗ್ಯಕ್ಕೆ ದೇವರಲ್ಲಿ ನಾನು ಪ್ರಾರ್ಥನೆ ಮಾಡುತ್ತೇನೆ.'' ಎಂದಿದ್ದಾರೆ.

ಇದು ಸುದೀಪ್ ದೊಡ್ಡ ಗುಣ

ಇದು ಸುದೀಪ್ ದೊಡ್ಡ ಗುಣ

ಸುದೀಪ್ ಈ ರೀತಿ ಸಹಾಯ ಮಾಡುತ್ತಿರುವುದು ಇದೇ ಮೊದಲೇ ನಲ್ಲ. ಈ ರೀತಿ ಅನೇಕ ಬಾರಿ ತಮ್ಮ ಅಭಿಮಾನಿಗಳ ಕಷ್ಟಕ್ಕೆ ಅವರ ಕೈ ಜೋಡಿಸಿದ್ದಾರೆ. ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಜೀವಗಳ ಕಣ್ಣೀರು ಒರೆಸಿದ್ದಾರೆ.

More from Filmibeat

English summary
Kannada actor Kiccha Sudeep said he will help his fan. whose mother is suffering from cancer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X