'ಗಂಡಸು ಎಂದು ಸಾಬೀತು ಮಾಡಲು ಕತ್ತಲಾಗಬೇಕಿಲ್ಲ': ಕಿಚ್ಚನ ಟಾಂಗ್ ಯಾರಿಗೆ?

ಸ್ಯಾಂಡಲ್ ವುಡ್ ನ ಮಾಣಿಕ್ಯ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ ಪೈಲ್ವಾನ್ ಚಿತ್ರದ ರಿಲೀಸ್ ಗೆ ಕಾಯುತ್ತಿದ್ದಾರೆ. ಸುದೀಪ್ ತಮ್ಮ ಸಿನಿಮಾಗಳ ಮಾಹಿತಿಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾರೆ.

ಅಭಿಮಾನಿಗಳ ಪ್ರಶ್ನೆಗೆ, ಅಭಿಮಾನಿಗಳ ಹುಟ್ಟುಹಬ್ಬಕ್ಕೆ ಹೀಗೆ ಪ್ರತಿಯೊಂದಕ್ಕು ಪ್ರತಿಕ್ರಿಯೆ ನೀಡುತ್ತಿರುತ್ತಾರೆ ಸುದೀಪ್.ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟಿವ್ ಆಗಿರುವ ಕಿಚ್ಚ ಇತ್ತೀಚಿಗೆ ಪೋಸ್ಟ್ ಮಾಡಿರುವ ಒಂದು ಟ್ವೀಟ್ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಖಡಕ್ ಆಗಿ ಒಂದು ಸಾಲನ್ನು ಪೋಸ್ಟ್ ಮಾಡುವ ಮೂಲಕ ಯಾರಿಗೋ ಸರಿಯಾಗಿ ಟಾಂಗ್ ಕೊಟ್ಟಹಾಗೆ ಇದೆ. ಸಾಮಾನ್ಯವಾಗಿ ಸಿನಿಮಾಗಳ ವಿಚಾರವಾಗಿ ಮಾತ್ರ ಟ್ವೀಟ್ ಮಾಡುತ್ತಿದ್ದ ಮಾಣಿಕ್ಯ ಈಗ ಮಾಡಿರುವ ಟ್ವೀಟ್ ಅಚ್ಚರಿ ಮೂಡಿಸಿದೆ. ಆದ್ರೆ ಸುದೀಪ್ ಟ್ವೀಟ್ ಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಹರಿದು ಬರುತ್ತಿದೆ.

ಗಂಡಸು ಎನಿಸಿಕೊಳ್ಳಲು ಕತ್ತಲಾಗಬೇಕಿಲ್ಲ

ಗಂಡಸು ಎನಿಸಿಕೊಳ್ಳಲು ಕತ್ತಲಾಗಬೇಕಿಲ್ಲ

ಎಲ್ಲೋ ಓದಿದ ಸುಂದರ ಸಾಲುಗಳು ಅಂತ ಹೇಳುತ್ತ "ಗಂಡಸು ಎನಿಸಿಕೊಳ್ಳಲು ಮದ್ಯಪಾನ ಮಾಡಬೇಕಾಗಿಲ್ಲ ಮತ್ತು ಕತ್ತಲು ಆಗಲಿ ಎಂದು ಕಾಯಬೇಕಾಗಿಲ್ಲ" ಎಂದು ಬರೆದುಕೊಂಡಿದ್ದಾರೆ. ಸುದೀಪ್ ಪೋಸ್ಟ್ ನೋಡಿದ ಅನೇಕರು ಅಚ್ಚರಿ ಪಡುತಿದ್ದಾರೆ.

ಎದುರಾಳಿ ಯೋಗ್ಯನಾಗಿದ್ರೆ ಮಾತ್ರ ಫೈಟ್ ಮಾಡುವೆ

ಎದುರಾಳಿ ಯೋಗ್ಯನಾಗಿದ್ರೆ ಮಾತ್ರ ಫೈಟ್ ಮಾಡುವೆ

ಅಷ್ಟೆಯಲ್ಲ ಇದರ ಜೊತೆಗೆ ಒಂದು ಫೊಟೋವನ್ನು ಶೇರ್ ಮಾಡಿ ಮತ್ತೊಂದು ಸಂದೇಶವನ್ನು ರವಾನಿಸಿದ್ದಾರೆ. "ಕೇವಲ ಏನನ್ನೋ ಸಾಬೀತು ಪಡಿಸಲು ನಾನು ಫೈಟ್ ಮಾಡುವುದಿಲ್ಲ. ನನ್ನ ಎದುರಾಳಿ ಫೈಟ್ ಮಾಡಲು ಯೋಗ್ಯನಾಗಿದ್ದಾಗ ಮಾತ್ರ ನಾನು ಫೈಟ್ ಮಾಡುತ್ತೇನೆ" ಎಂದು ಹೇಳಿದ್ದಾರೆ. ಕಿಚ್ಚ ಯಾರಿಗೆ ಹೀಗೆ ಹೇಳಿದ್ದಾರೆ. ಯಾಕೆ ದಿಢೀರನೆ ಹೀಗೆ ಫೋಸ್ಟ್ ಮಾಡಿದ್ದಾರೆ ಎನ್ನುವುದು ಅಚ್ಚರಿ ಮೂಡಿಸುತ್ತಿದೆ.

ಯಾರಿಗೆ ಸುದೀಪ್ ಟಾಂಗ್?

ಯಾರಿಗೆ ಸುದೀಪ್ ಟಾಂಗ್?

ಸುದೀಪ್ ದಿಢೀರನೆ ಹೀಗೆ ಪೋಸ್ಟ್ ಮಾಡಿರುವುದು ಯಾರಿಗೆ ಎನ್ನುವ ಅನುಮಾನ ಮೂಡುತ್ತಿದೆ. ಸಾಧಾರಣವಾಗಿ ಸುದೀಪ್ ಇಷ್ಟು ಖಡಕ್ ಆದ ಸಾಲುಗಳನ್ನು ಟ್ವೀಟ್ ಮಾಡುವುದು ತುಂಬ ಕಡಿಮೆ. ಕಡಿಮೆ ಎನ್ನುವುದಕ್ಕಿಂತನು ಮಾಡುವುದೆ ಇಲ್ಲ. ಆದ್ರೀಗ ಕಿಚ್ಚನ ಟ್ವೀಟ್ ಎಲ್ಲರ ಗಮನ ಸೆಳೆಯುತ್ತಿದೆ.

ಪೈಲ್ವಾನ್ ರಿಲೀಸ್ ಗೆ ಕಾಯುತ್ತಿದ್ದಾರೆ

ಪೈಲ್ವಾನ್ ರಿಲೀಸ್ ಗೆ ಕಾಯುತ್ತಿದ್ದಾರೆ

ಸುದೀಪ್ ಸದ್ಯ ಬಹು ನಿರೀಕ್ಷೆಯ ಪೈಲ್ವಾನ್ ಚಿತ್ರದ ರಿಲೀಸ್ ಗೆ ಕಾಯುತ್ತಿದ್ದಾರೆ. ಕನ್ನಡ ಮಾತ್ರವಲ್ಲದೆ ಐದು ಭಾಷೆಯಲ್ಲಿ ಪೈಲ್ವಾನ್ ತೆರೆಗೆ ಬರುತ್ತಿದೆ. ಪೈಲ್ವಾನ್ ರಿಲೀಸ್ ನ ತಯಾರಿಯಲ್ಲಿರುವ ಸುದೀಪ್ ದಿಢೀರನೆ ಎಲ್ಲೋ ಓದಿದ ಸುಂದರ ಸಾಲುಗಳು ಅಂತ ಪೋಸ್ಟ್ ಮಾಡಿರುವುದು ಈಗ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

More from Filmibeat

English summary
Kannada actor Sudeep said Real men don't need Alcohol and the sun to set to become a man in witter.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X