ಎಲ್ಲಿಯವರೆಗೆ ನನ್ನ ನಂಬುವಿರೋ, ಅಲ್ಲಿಯವರೆಗೆ ಈ ಉಸಿರು ನಿಮಗಾಗಿ- ಸುದೀಪ್
ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಟ್ರೈಲರ್ ನಿನ್ನೆ ಬಿಡುಗಡೆಯಾಗಿದೆ. ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ಪೈಲ್ವಾನ್ ಟ್ರೈಲರ್ ಬಂದಿದ್ದು, ಎಲ್ಲ ಭಾಷೆಯಲ್ಲೂ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
ಅಭಿಮಾನಿಗಳು ನೀಡಿದ ಪ್ರತಿಕ್ರಿಯೆ ನೋಡಿ ನಟ ಸುದೀಪ್ ತೀರಾ ಸಂತೋಷವಾಗಿದ್ದಾರೆ. ಜೊತೆಗೆ ಭಾವುಕರಾಗಿದ್ದರೆಂದು ಕೂಡ ಹೇಳಬಹುದು. ಯಾಕಂದ್ರೆ, ಪೈಲ್ವಾನ್ ಟೀಸರ್ ಗೆ ಸಿಕ್ಕ ರೆಸ್ಪಾನ್ಸ್ ನೋಡಿ ಸುದೀಪ್ ಒಂದು ಟ್ವೀಟ್ ಮಾಡಿದ್ದಾರೆ.
Recommended Video
ಅಭಿಮಾನಿಗಳಿಗೆ ಧನ್ಯವಾದ ಹೇಳಿರುವ ಸುದೀಪ್, ಕನ್ನಡದಲ್ಲಿಯೇ ಟ್ವೀಟ್ ಮಾಡಿದ್ದಾರೆ. ಸಹಜವಾಗಿ ಸುದೀಪ್ ಕನ್ನಡದಲ್ಲಿ ಟ್ವೀಟ್ ಮಾಡಿದ್ದು ಬಹಳ ಅಪರೂಪ. ಈಗ, ಕನ್ನಡದಲ್ಲೇ ತಮ್ಮ ಭಾವನೆ ವ್ಯಕ್ತಪಡಿಸಿದ್ದು, ಅಭಿಮಾನಿಗಳ ಮನಸ್ಸು ಮುಟ್ಟುವಂತೆ ಸಂದೇಶ ರವಾನಿಸಿದ್ದಾರೆ.

''As for ally frnzz,,,,,, ಸ್ನೇಹಿತರೆ,, ನಿಮ್ಮ ಸ್ನೇಹಕ್ಕೆ, ಬೆಂಬಲಕ್ಕೆ ಹಾಗೂ ಪ್ರೀತಿಗೆ ಈ ನಿಮ್ಮ ಕಿಚ್ಚ ಸದಾ ಚಿರಋಣಿ. ಪೈಲ್ವಾನ್ ಟ್ರೈಲರ್ ನಿಮಗೆ ಇಷ್ಟವಾಗಿದೆ ಅಂದುಕೊಳುತ್ತೇನೆ. ಎಲ್ಲಿಯವರೆಗೆ ನೀವೆಲ್ಲ ನನ್ನನು ನಂಬುವಿರೋ,, ಅಲ್ಲಿಯವರೆಗೆ ಈ ನನ್ನ ಉಸಿರು,,,,, ನಿಮಗಾಗಿ. Thank u'' ಎಂದು ಹೇಳಿದ್ದಾರೆ.
ಟ್ರೈಲರ್ ಗೆ ಸಂಬಂಧ ಪಟ್ಟಂತೆ ಮಾಡಿರುವ ಟ್ವೀಟ್ ನಲ್ಲಿ ''ಎಲ್ಲಿಯವರೆಗೆ ನೀವೆಲ್ಲ ನನ್ನನು ನಂಬುವಿರೋ,, ಅಲ್ಲಿಯವರೆಗೆ ಈ ನನ್ನ ಉಸಿರು,,,,, ನಿಮಗಾಗಿ'' ಈ ವಾಕ್ಯ ತೀರಾ ವಿಶೇಷವಾಗಿದೆ. ಇಲ್ಲಿ ನಂಬಿಕೆಗೆ ಸಂಬಂಧಪಟ್ಟಂತೆ ವಿಷ್ಯ ಪ್ರಸ್ತಾಪಿಸಿರುವುದು ನಿಜಕ್ಕೂ ಸಂಥಿಂಗ್ ಸ್ಪೆಷಲ್.

ಈ ವಾಕ್ಯದ ಒಳ ಅರ್ಥದ ಬಗ್ಗೆ ಚರ್ಚೆ ಮಾಡುವುದಕ್ಕಿಂತ ಪೈಲ್ವಾನ್ ಟ್ರೈಲರ್ ಗೆ ಸಿಕ್ಕ ಪ್ರತಿಕ್ರಿಯೆ ನೋಡಿ ಖುಷಿ ಪಡುವುದು ಉತ್ತಮ. ಹೆಬ್ಬುಲಿ ನಂತರ ಕೃಷ್ಣ ಅವರು ಪೈಲ್ವಾನ್ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸುನೀಲ್ ಶೆಟ್ಟಿ, ಆಕಾಂಷ ಸಿಂಗ್, ಕಬೀರ್ ದುಹಾನ್ ಸಿಂಗ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.


Click it and Unblock the Notifications











