For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಖಾನ್ ಬೇರ್ ಬಾಡಿ ನೋಡಿ ಸುದೀಪ್ ಹೇಳಿದ್ದೇನು?

  |

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ ಬಾಲಿವುಡ್ ನ ದಬಾಂಗ್-3 ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ಸ್ಯಾಂಡಸ್ ವುಡ್ ನಲ್ಲಿ ಕಿಚ್ಚ ಅಬಿನಯದ ಪೈಲ್ವಾನ್ ಚಿತ್ರದ ರಿಲೀಸ್ ಗೆ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದೆ. ಈ ಎರಡು ಸಿನಿಮಾಗಳ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ.

  'ಪೈಲ್ವಾನ್' ನಲ್ಲಿ ಸುದೀಪ್ ಮೊದಲ ಬಾರಿಗೆ ಸಿಕ್ಸ್ ಪ್ಯಾಕ್ ಮಾಡಿ ಕುಸ್ತಿ ಅಖಾಡದಲ್ಲಿ ಅಬ್ಬರಿಸಿದ್ದಾರೆ. ಚಿತ್ರಕ್ಕಾಗಿ ಸುದೀಪ್ ಮೊದಲ ಬಾರಿಗೆ ಸಿಕ್ಕಾಪಟ್ಟೆ ವರ್ಕೌಟ್ ಮಾಡಿದ್ದಾರೆ. ದೇಹ ದಂಡಿಸಲು ಜಿಮ್ ನಲ್ಲಿ ಬೆವರಿಳಿಸಿದ್ದಾರೆ. ಕಟ್ಟುಮಸ್ತಾದ ದೇಹದೊಂದಿಗೆ ಮಾಣಿಕ್ಯ 'ಪೈಲ್ವಾನ್' ನಲ್ಲಿ ಅಬ್ಬರಿಸಿದ್ದಾರೆ.

  ಸರ್ಕಾರ್ ಲುಕ್ ನಲ್ಲಿ ಸೆಡ್ಡು ಹೊಡೆದ ಸುನೀಲ್ ಶೆಟ್ಟಿ

  ಇದೆ ಫಿಟ್ ಆದ ಬಾಡಿಯೊಂದಿಗೆ 'ದಬಾಂಗ್-3' ಚಿತ್ರದಲ್ಲೂ ಸಲ್ಮಾನ್ ಖಾನ್ ವಿರುದ್ಧ ತೊಡೆ ತಟ್ಟಿನಿಂತಿದ್ದಾರೆ. ಅಚ್ಚರಿ ಅಂದ್ರೆ ಸುದೀಪ್ ಗೆ ಫಿಟ್ ನೆಸ್ ಬಗ್ಗೆ ಕಾಳಜಿ ಹೆಚ್ಚಾಗಲು ಕಾರಣವಾಗಿದ್ದೆ ಸಲ್ಮಾನ್ ಖಾನ್ ಅಂತೆ. ಹಾಗಂತ ಸ್ವತಹ ಕಿಚ್ಚ ಸುದೀಪ್ ಹೇಳಿಕೊಂಡಿದ್ದಾರೆ.

  ಇತ್ತೀಚಿಗೆ ಸಲ್ಮಾನ್ ಖಾನ್ ಕಟ್ಟು ಮಸ್ತಾದ ಬೇರ್ ಬಾಡಿಯ ಫೋಟೋ ಒಂದನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದರು. ಸಲ್ಲು ಸಿಕ್ಸ್ ಪ್ಯಾಕ್ ದೇಹ ನೋಡಿ ಅನೇಕರು ಅಚ್ಚರಿ ಪಟ್ಟಿದ್ದರು. ಈ ಫೋಟೋ ನೋಡಿ ಕಿಚ್ಚ ಸುದೀಪ್ ಕೂಡ ಫಿದಾ ಆಗಿದ್ದಾರೆ. ಸಲ್ಲು ಫೋಟೋಗೆ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ.

  "ಸರ್, ನಾನು ಇನ್ನು ಹೆಚ್ಚು ಜಿಮ್ ಮಾಡಬೇಕೆಂದು ಎನಿಸುತ್ತಿದೆ" ಎಂದು ಹೇಳಿದ್ದಾರೆ.

  ಇತ್ತೀಚಿಗಷ್ಟೆ 'ದಬಾಂಗ್-3' ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯದ ಚಿತ್ರೀಕರಣ ಮಾಡಿ ಮುಗಿಸಿದ್ದಾರೆ. ಒತ್ತಡದ ಚಿತ್ರೀಕರಣದ ಬಗ್ಗೆ ಸುದೀಪ್ ಈ ಮೊದಲೆ ಹೇಳಿಕೊಂಡಿದ್ದರು. ಚಿತ್ರದಲ್ಲಿ ಸಾಕಷ್ಟು ಸಾಹಸ ದೃಶ್ಯಗಳಿದ್ದು ಮುಂಬೈನಲ್ಲಿ ಸೆರೆ ಹಿಡಿಯಲಾಗಿದೆ. ಮೊದಲ ಬಾರಿಗೆ ಸಲ್ಲು ವಿರುದ್ಧ ಅಖಾಡಕ್ಕೆ ಇಳಿದಿರುವ ಕಿಚ್ಚನನ್ನು ನೋಡಲು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.

  English summary
  Sudeep has said that he should more work out in the gym after he looked to Salman Khan bare body.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X