ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಪತ್ನಿ ಪ್ರಿಯಾ ಬಗ್ಗೆ ಸುದೀಪ್ ಹೇಳಿದ್ದೇನು?
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಪತ್ನಿ ಪ್ರಿಯಾ ದಂಪತಿ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಸುದೀಪ್, ಪ್ರಿಯಾ ಕೈ ಹಿಡಿದು 19ವರ್ಷ ತುಂಬಿದೆ. ಈ ದಿನವನ್ನು ಸುದೀಪ್ ದಂಪತಿ ವಿಶೇಷವಾಗಿ ಆಚರಣೆ ಮಾಡುತ್ತಿದ್ದಾರೆ.
ಸ್ಯಾಂಡಲ್ ವುಡ್ ನ ಮುದ್ದಿನ ಜೋಡಿ ಸುದೀಪ್ ಮತ್ತು ಪ್ರಿಯಾಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೆ ಹರಿದು ಬರುತ್ತಿದೆ. ಅಲ್ಲದೆ ಅಭಿಮಾನಿಗಳು ಕಿಚ್ಚ ದಂಪತಿಯ ಸುಂದರ ಫೋಟೋಗಳನ್ನು ಶೇರ್ ಮಾಡಿ ತರಹೇವಾರಿ ರೀತಿಯಲ್ಲಿ ವಿಶ್ ಮಾಡುತ್ತಿದ್ದಾರೆ. ಸಿನಿ ಗಣ್ಯರು ಸಹ ಶುಭಕೋರುತ್ತಿದ್ದಾರೆ.
ಈ ವಿಶೇಷ ಸಂದರ್ಭದಲ್ಲಿ ಸುದೀಪ್, ಪತ್ನಿ ಪ್ರಿಯಾಗೆ ಪ್ರೀತಿಯ ಸಂದೇಶ ಕಳುಹಿಸಿದ್ದಾರೆ. ಮಡದಿಯ ಬಗ್ಗೆ ಸುದೀಪ್ ಟ್ವಿಟ್ಟರ್ ನಲ್ಲಿ 'ನನ್ನ ಜೀವನದ ಅರ್ಧಕ್ಕಿಂತ ಹೆಚ್ಚು ಎಂದು ನಾನು ನಿಮ್ಮನ್ನು ತಿಳಿದಿರುವೆ ಪ್ರಿಯಾ. ಈ 19ನೇ ವಾರ್ಷಿಕೋತ್ಸವದಂದು, ನಾನು ನನ್ನ ಸ್ನೇಹಿತೆ ನಿಮಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಿಜವಾದ ಸ್ನೇಹ ಕಂಡುಹಿಡಿಯುವುದು ಕಷ್ಟ. ಅಸಾಧಾರಣ ಹೆಂಡತಿಯಾಗಿದ್ದಕ್ಕಾಗಿ ಧನ್ಯವಾದಗಳು. ಯಾವಾಗಲು ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ. ಮಚ್ ಲವ್. ಪ್ರಿ ಹಗ್ಗಿಂಗ್' ಎಂದು ಪತ್ನಿಯ ಬಗ್ಗೆ ಬರೆದುಕೊಂಡಿದ್ದಾರೆ.

ಸುದೀಪ್ ಮಾತಿಗೆ ಪ್ರಿಯಾ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. 'ನಮ್ಮನ್ನು ಸಂತೋಷವಾಗಿಡಲು ನೀವು ನಿಮ್ಮ ಸಾಮರ್ಥ್ಯ ಮೀರಿ ಎಲ್ಲವನ್ನು ಮಾಡಿದ್ದಕ್ಕಾಗಿ ಧನ್ಯವಾದಗಳು ಡಾರ್ಲಿಂಗ್. ಯಾವಾಗಲು ಪ್ರೀತಿಸುತ್ತೇನೆ. ಈ 19ನೇ ವರ್ಷದ ವಾರ್ಷಿಕೋತ್ಸವಕ್ಕೆ ನಮಗೆ ಶುಭಾಶಯಗಳು' ಎಂದು ಪ್ರೀತಿಯ ಪತಿಯ ಬಗ್ಗೆ ಪ್ರೀತಿಯ ಮಾತುಗಳನ್ನು ಆಡಿದ್ದಾರೆ.
2001 ಅಕ್ಟೋಬರ್ 18ರಂದು ಸುದೀಪ್ ಮತ್ತು ಪ್ರಿಯಾ ಇಬ್ಬರು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. 2004ರಲ್ಲಿ ಮೊದಲ ಮಗುವಿನ ತಂದೆ-ತಾಯಿ ಆಗಿದ್ದಾರೆ. ಸುದೀಪ್ ಮತ್ತು ಪ್ರಿಯಾ ದಂಪತಿಗೆ ಸಾನ್ವಿ ಎನ್ನುವ ಮಗಳಿದ್ದಾರೆ. ಪ್ರಿಯ ಸದ್ಯ ಅವರದೇ ಅದ ಈವೆಂಟ್ ಮ್ಯಾನೆಜ್ ಮೆಂಟ್ ಕಂಪನಿಯನ್ನು ನೋಡಿಕೊಳ್ಳುತ್ತಿದ್ದಾರೆ.
ಸುದೀಪ್ ಸದ್ಯ ಫ್ಯಾಂಟಮ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಫ್ಯಾಂಟಮ್ ಸಿನಿಮಾದ ಚಿತ್ರೀಕರಣ ಹೈದರಾಬಾದ್ ನಲ್ಲಿ ನಡೆಯುತ್ತಿದೆ. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಫ್ಯಾಂಟಮ್ ಸಿನಿಮಾ ಅದ್ದೂರಿ ಸೆಟ್, ಫಸ್ಟ್ ಲುಕ್ ಮತ್ತು ಪಾತ್ರವರ್ಗಗಳ ಮೂಲಕ ಗಮನ ಸೆಳೆಯುತ್ತಿದೆ. ಈ ಸಿನಿಮಾ ಜೊತೆಗೆ ಸುದೀಪ್ ಅಭಿನಯದ ಕೋಟಿಗೊಬ್ಬ-3 ಸಿನಿಮಾ ರಿಲೀಸ್ ಗೆ ರೆಡಿಯಾಗಿದ್ದಾರೆ.


Click it and Unblock the Notifications











