ನಿರ್ದೇಶಕ ರಘುರಾಮ್ ಮಗಳಿಗೆ ಸರ್ಪ್ರೈಸ್ ನೀಡಿದ ಕಿಚ್ಚ ಸುದೀಪ್
ಆತ್ಮೀಯ ವ್ಯಕ್ತಿಗಳ ದುಃಖ ಹಾಗೂ ಸಂತೋಷದಲ್ಲಿ ಭಾಗಿಯಾಗುವ ನಟ ಸುದೀಪ್. ತಮ್ಮ ಜೊತೆಯಲ್ಲಿರುವ ನಟ, ನಿರ್ದೇಶಕ, ಸ್ನೇಹಿತರ ಕುಟುಂಬವನ್ನು ತನ್ನ ಕುಟುಂಬವೆಂಬಂತೆ ಕಾಣುವ ಮನೋಭಾವ ಹೊಂದಿರುವ ಕಲಾವಿದ. ಇದಕ್ಕೆ ತಾಜಾ ಉದಾಹರಣೆ ನಿರ್ದೇಶಕ ರಘುರಾಮ್ ಅವರ ಮಗಳು ಹುಟ್ಟುಹಬ್ಬ.
ನಿರ್ದೇಶಕ ರಘುರಾಮ್ ಅವರ ಮಗಳು ನನಸು ನಿನ್ನೆಯಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 'ನನಸು' ಅವರ ಬರ್ತಡೇಗೆ ಸಾಕಷ್ಟು ಅಭಿಮಾನಿಗಳು, ನೆಟ್ಟಿಗರು ಹಾಗೂ ಚಿತ್ರರಂಗದವರು ಸಹ ಶುಭಕೋರಿದ್ದಾರೆ. ಇದರ ಜೊತೆ ಕಿಚ್ಚ ಸುದೀಪ್ ಸಹ ನನಸುಗೆ ಸರ್ಪ್ರೈಸ್ ನೀಡಿದ್ದಾರೆ. ಮುಂದೆ ಓದಿ....

ನನಸು ಬರ್ತಡೇಗೆ ಸುದೀಪ್ ವಿಶ್
ನಿರ್ದೇಶಕ ರಘುರಾಮ್ ಅವರ ಮಗಳು ನನಸು ಹುಟ್ಟುಹಬ್ಬಕ್ಕೆ ಕಿಚ್ಚ ಸುದೀಪ್ ಫೋನ್ ಮಾಡುವ ಮೂಲಕ ಸರ್ಪ್ರೈಸ್ ನೀಡಿದ್ದಾರೆ. ಫೋನ್ ಮೂಲಕ ನನಸುಗೆ ಶುಭಕೋರಿದ್ದು, ಈ ವಿಡಿಯೋವನ್ನು ರಘುರಾಮ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ''ನನಸುಗೆ ಈ ವರ್ಷದ ಬರ್ತಡೇ ಸರ್ಪ್ರೈಸ್ ಅವಳ ಮೆಚ್ಚಿನ ಸುದೀಪ್ ಸರ್‌ರಿಂದ ಅವಳಿಗೆ ಅರಿವೇ ಆಗದಂತೆ ಶುಭಾಶಯಗಳು ಬಂದಾಗ ಅವಳ Real Reaction..'' ಎಂದು ವಿಡಿಯೋ ಶೇರ್ ಮಾಡಿದ್ದಾರೆ.

ಖುಷಿಯಾದ ನನಸು
ಒಂದು ಕ್ಷಣ ನನಸುಗೆ ಫೋನ್‌ನಲ್ಲಿ ಮಾತನಾಡುತ್ತಿರುವುದು ಯಾರು ಎಂದು ಗೊತ್ತೇ ಆಗಲಿಲ್ಲ. ನಂತರ ಅದು ಕಿಚ್ಚ ಸುದೀಪ್ ಎಂದು ತಿಳಿದ ಮೇಲೆ ಬಹಳ ಖುಷಿ ಪಟ್ಟರು. ''ನನ್ನ ಬರ್ತಡೇ ಇದು ದೊಡ್ಡ ಸರ್ಪ್ರೈಸ್, ವಿಶ್ ಮಾಡಿದ್ದಕ್ಕೆ ಥ್ಯಾಂಕ್ ಯೂ ಸೋ ಮಚ್ ಅಂಕಲ್'' ಎಂದು ಸಂಭ್ರಮಿಸಿದರು.

ನನಸು ಕಂಡ ಕನಸುಗಳೆಲ್ಲಾ...ಯಶಸ್ಸಾಗಲಿ
ರಘುರಾಮ್ ಅವರ ಮಗಳ ಜನುಮದಿನಕ್ಕೆ ನಿರ್ದೇಶಕ ಸಿಂಪಲ್ ಸುನಿ ಸಹ ಟ್ವಿಟ್ಟರ್ ಮೂಲಕ ಶುಭಾಶಯ ಕೋರಿದ್ದಾರೆ. ''ಹುಟ್ಟುಹಬ್ಬದ ಶುಭಾಶಯಗಳು ...ನನಸು ಕಂಡ ಕನಸುಗಳೆಲ್ಲಾ...ಯಶಸ್ಸಾಗಲಿ'' ಎಂದು ಹಾರೈಸಿದ್ದಾರೆ. ಸುನಿ ಅವರ ಶುಭಾಶಯಕ್ಕೆ ರಘುರಾಮ್ ಹೃದಯಪೂರ್ವಕ ಧನ್ಯವಾದ ತಿಳಿಸಿದ್ದಾರೆ.
Recommended Video

ಎಸ್‌ಎಸ್‌ಎಲ್‌ಸಿಯಲ್ಲಿ ಟಾಪ್
ಕಳೆದ ವರ್ಷ ಎಸ್ಎಸ್ಎಲ್‌ಸಿ ಪರೀಕ್ಷೆ ಬರೆದಿದ್ದ ನಿರ್ದೇಶಕ ರಾಘುರಾಮ್ ಪುತ್ರಿ ನನಸು 92% ಅಂಕ ಪಡೆದುಕೊಂಡಿದ್ದಾರೆ. ಮಗಳ ಸಾಧನೆಗೆ ರಘುರಾಮ್ ಅವರು ಖುಷಿ ಮತ್ತು ಹೆಮ್ಮೆಪಟ್ಟಿದ್ದರು.


Click it and Unblock the Notifications











