ಅಂಬಿ ಜೊತೆಗಿನ ಫೋಟೋ ಶೇರ್ ಮಾಡಿ ಹಳೆ ದಿನಗಳನ್ನು ನೆನೆದ ಸುದೀಪ್
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ರೆಬೆಲ್ ಸ್ಟಾರ್ ಅಂಬರೀಶ್ ನಡುವೆ ಉತ್ತಮ ಬಾಂಧವ್ಯವಿತ್ತು. ವೀರ ಪರಂಪರೆ, ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾಗಳಲ್ಲಿ ಇಬ್ಬರು ಒಟ್ಟಿಗೆ ಕೆಲಸ ಮಾಡಿದ್ದಾರೆ. ತೆರೆ ಮೇಲೆ ಮಾತ್ರವಲ್ಲದೆ ತೆರೆ ಹಿಂದೆಯೂ ಇಬ್ಬರ ನಡುವೆ ಉತ್ತಮ ಸ್ನೇಹ ಸಂಬಂಧವಿತ್ತು.
ಅಂಬಿ ಈಗ ಇಲ್ಲದಿದ್ದರು ಅವರ ನೆನೆಪು ಮಾತ್ರ ಕಾಡುತ್ತಿರುತ್ತೆ. ಅವರ ಜೊತೆ ಕಳೆದ ಸಮಯವನ್ನು ಕಿಚ್ಚ ಆಗಾಗ ಮೆಲುಕು ಹಾಕುತ್ತಿರುತ್ತಾರೆ. ಅಂಬಿ ನೆನಪನ್ನು ನೆನೆದು ಭಾವನಾತ್ಮಕ ಪೋಸ್ಟ್ ಹಾಕುತ್ತಿರುತ್ತಾರೆ. ಇತ್ತೀಚಿಗೆ ಸುದೀಪ್, ಅಂಬಿ ಜೊತೆ ಇರುವ ಮತ್ತೊಂದು ಫೋಟೋವನ್ನು ಹಂಚಿಕೊಂಡಿದ್ದಾರೆ.

ಅಂಬರೀಶ್ ಕ್ರೂಸ್ ಬೈಕ್ ಓಡಿಸುತ್ತಿದ್ದರೆ ಸುದೀಪ್ ಹಿಂದೆ ಬೈಕ್ ಹತ್ತುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋ ನೋಡಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಫೋಟೋ ಜೊತೆಗೆ ಕ್ಯಾಪ್ಷನ್ ಕೂಡ ಹಾಕಿದ್ದಾರೆ.
"ನನ್ನ ಗ್ಯಾಲರಿಯಲ್ಲಿನ ಹಳೆಯ ಫೋಟೋಗಳನ್ನು ನೋಡುವಾಗ, ಈ ಅದ್ಭುತ ಫೋಟೋ ಕಣ್ಮುಂದೆ ಬಂತು. ಅವರ ತೋರುತ್ತಿದ್ದ ಪ್ರೀತಿಗೆ ಹಂಬಲಿಸುತ್ತಿದ್ದೇನೆ" ಎಂದು ಅಂಬಿ ಬಗ್ಗೆ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಸುದೀಪ್ ಕೊನೆಯದಾಗಿ ಅಂಬರೀಶ್ ಜೊತೆ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.


Click it and Unblock the Notifications











