'ಮಾಣಿಕ್ಯ'ದ ಮಧುರ ನೆನಪುಗಳನ್ನು ಹಂಚಿಕೊಂಡ ಕಿಚ್ಚ ಸುದೀಪ್

By Harshitha

Recommended Video

ಸುದೀಪ್ ಮಾಣಿಕ್ಯ ಆದ ಕಥೆಯೇ ಬಲು ರೋಚಕ | Filmibeat Kannada

ಮಾಣಿಕ್ಯ... 2014 ರಲ್ಲಿ ಬಿಡುಗಡೆ ಆದ ಸಿನಿಮಾ. ಕ್ರೇಜಿ ಸ್ಟಾರ್ ರವಿಚಂದ್ರನ್, ವರಲಕ್ಷ್ಮಿ ಶರತ್ ಕುಮಾರ್, ರನ್ಯ ರಾವ್ ಅಭಿನಯದ ಕಿಚ್ಚ ಸುದೀಪ್ ನಟಿಸಿ, ನಿರ್ದೇಶನದ 'ಮಾಣಿಕ್ಯ' ಸಿನಿಮಾ ಅಂದು ಸೂಪರ್ ಡ್ಯೂಪರ್ ಹಿಟ್ ಆಗಿತ್ತು.

ತೆಲುಗಿನ 'ಮಿರ್ಚಿ' ಚಿತ್ರದ ರೀಮೇಕ್ ಆಗಿರುವ 'ಮಾಣಿಕ್ಯ' ಕಲೆಕ್ಷನ್ ವಿಚಾರದಲ್ಲಿ ದಾಖಲೆ ಬರೆದಿತ್ತು. ವಿಮರ್ಶಕರಿಂದಲೂ ಮೆಚ್ಚುಗೆ ಪಡೆದ 'ಮಾಣಿಕ್ಯ' ಬಗ್ಗೆ ಇಂದು ನಾವು ನೆನಪು ಮಾಡಿಕೊಳ್ಳಲು ಒಂದು ಕಾರಣ ಇದೆ.

ಇಂದಿಗೆ (ಮೇ 1) ಸರಿಯಾಗಿ ನಾಲ್ಕು ವರ್ಷಗಳ ಹಿಂದೆ 'ಮಾಣಿಕ್ಯ' ಚಿತ್ರ ತೆರೆಕಂಡಿತ್ತು. ಇದೇ ಖುಷಿಯಲ್ಲಿ 'ಮಾಣಿಕ್ಯ' ಚಿತ್ರದ ಮಧುರ ನೆನಪುಗಳನ್ನು ಕಿಚ್ಚ ಸುದೀಪ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಮುಂದೆ ಓದಿರಿ...

ಆ ದಿನ ಮರೆಯಲಾರೆ...

ಆ ದಿನ ಮರೆಯಲಾರೆ...

''ನಮ್ಮನ್ನೆಲ್ಲ ಒಟ್ಟಿಗೆ ಸೇರಿಸಿದ ಕೆಲ ಕ್ಷಣಗಳು, ವ್ಯಕ್ತಿಗಳು ಹಾಗೂ ಸನ್ನಿವೇಶಗಳನ್ನು ಮತ್ಯಾವುದರಿಂದಲೂ ತುಂಬಲು ಸಾಧ್ಯವಿಲ್ಲ. ತಾಂತ್ರಿಕ ಬ್ರಹ್ಮ ರವಿಚಂದ್ರನ್ ಅವರಿಗೆ 'ಅಕ್ಷನ್' ಎಂದು ಹೇಳಿದ ಆ ದಿನವನ್ನು ನಾನು ಮರೆಯಲಾರೆ'' ಎಂದು ಕಿಚ್ಚ ಸುದೀಪ್ ಬರೆದುಕೊಂಡಿದ್ದಾರೆ.

ಸವಾಲಿನ ಕೆಲಸ

ಸವಾಲಿನ ಕೆಲಸ

''ಮಾನವೀಯತೆ ಹಾಗೂ ಸಂಬಂಧಗಳ ಮೌಲ್ಯಗಳನ್ನು ಸಾರುವ 'ಮಾಣಿಕ್ಯ' ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇತ್ತು. ಮಿತವಾದ ಬಜೆಟ್ ನಲ್ಲಿ ಅದ್ಭುತವಾದ ಸೆಟ್ ಹಾಕಿ ಚಿತ್ರೀಕರಣ ಮಾಡುವುದು ನಿಜಕ್ಕೂ ಸವಾಲಿನ ಕೆಲಸ. ಆ ಸವಾಲನ್ನ ನಾನು ಸ್ವೀಕರಿಸಿ, ಜಯಿಸಿದೆ'' - ಕಿಚ್ಚ ಸುದೀಪ್

ಸಾರ್ಥಕ ಭಾವ ಮೂಡಿತು

ಸಾರ್ಥಕ ಭಾವ ಮೂಡಿತು

''ಸಿನಿಮಾದ ಪ್ರೀ-ಪ್ರೊಡಕ್ಷನ್, ಮೇಕಿಂಗ್ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸವೇ ಒಂದು ಅತ್ಯದ್ಭುತ ಅನುಭವ ನೀಡಿತು. ಚಿತ್ರದ ಮೊದಲ ಪ್ರತಿ ನಾನು ನೋಡಲಾದಿದ್ದರೂ, ಬಿಡುಗಡೆಯಾದ ಮೊದಲ ದಿನ ಅಭಿಮಾನಿಗಳ ಜೊತೆ 'ಮಾಣಿಕ್ಯ' ನೋಡಿದ್ದು ಖುಷಿ ತಂತು. ಸಿನಿಮಾ ನೋಡಿದ ಅಭಿಮಾನಿಗಳ ಮೊಗದಲ್ಲಿ ಮಂದಹಾಸ ಕಂಡು ಸಾರ್ಥಕ ಭಾವ ಮೂಡಿತು'' - ಕಿಚ್ಚ ಸುದೀಪ್

ಸ್ಫೂರ್ತಿ ನೀಡುತ್ತವೆ

ಸ್ಫೂರ್ತಿ ನೀಡುತ್ತವೆ

''ಮಾಣಿಕ್ಯ ಸಿನಿಮಾ ನನಗೆ ಒಳ್ಳೆಯ ನೆನಪುಗಳನ್ನು ನೀಡಿವೆ. ಆ ನೆನಪುಗಳೇ ಪ್ರತಿ ದಿನ ನನ್ನನ್ನ ಎಚ್ಚರಗೊಳಸಿ, ಮತ್ತಷ್ಟು ಒಳ್ಳೆ ಸಿನಿಮಾಗಳನ್ನು ಮಾಡಲು ಸ್ಫೂರ್ತಿ ನೀಡುತ್ತವೆ'' - ಕಿಚ್ಚ ಸುದೀಪ್

More from Filmibeat

English summary
4 years ago, on this day (May 1st, 2014) Sudeep directorial Kannada Movie 'Manikya' was released. On this occasion, Sudeep shares his memories on 'Manikya'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X