35 ವರ್ಷದ ಹಿಂದಿನ ಫೋಟೋ ಜೊತೆ ನೋವು ಹೇಳಿಕೊಂಡ ಸುದೀಪ್

ನಟ ಅಂಬರೀಶ್ ಅವರನ್ನು ಬಹಳ ಹಚ್ಚಿಕೊಂಡಿದ್ದ ಕಲಾವಿದರಲ್ಲಿ ಸುದೀಪ್ ಕೂಡ ಒಬ್ಬರು. ಅಂಬರೀಶ್ ಈಗ ಇಲ್ಲ ಎನ್ನುವುದನ್ನು ಇನ್ನೂ ಅರಗಿಸಿಕೊಳ್ಳಲು ಕಿಚ್ಚನ ಕೈನಲ್ಲಿ ಆಗುತ್ತಿಲ್ಲ. ಈ ನೋವನ್ನು ಅವರು ತಮ್ಮ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ.

ತಮ್ಮ ಟ್ವಿಟ್ಟರ್ ಖಾತೆಯಲ್ಲಿ 35 ವರ್ಷದ ಹಿಂದಿನ ಫೋಟೋ ಜೊತೆಗೆ ತಮ್ಮ ನೆನಪುವನ್ನು ಹೇಳಿಕೊಂಡಿದ್ದಾರೆ. ಸುದೀಪ್ ಅವರ ತಂದೆ ಹಾಗೂ ಅಂಬರೀಶ್ ಆ ಕಾಲದಲ್ಲಿ ತೆಗೆಸಿಕೊಂಡ ಫೋಟೋ ಇದಾಗಿದೆ. ಆ ಸಮಯದಲ್ಲಿ ಅಂಬರೀಶ್ 31 ವರ್ಷದ ಯುವಕನಾಗಿದ್ದರಂತೆ.

sudeep shred ambareeshs 35 years old picture

''ಇದು ಮಾಮ ಮತ್ತು ಅಪ್ಪನ 35 ವರ್ಷದ ಹಿಂದಿನ ಫೋಟೋ. ಆಗ ಮಾಮನಿಗೆ 31 ವರ್ಷ ಇರಬಹುದು. ನಾವು ಜೀವನದಲ್ಲಿ ತುಂಬ ಸಮಯ ಇದೆ ಎಂದು ಭಾವಿಸುತ್ತೇವೆ. ಆದರೆ, ಎಷ್ಟು ಬೇಗ ಮಾಮನಿಗೆ 66 ವರ್ಷವಾಯ್ತು, ಎಷ್ಟು ಬೇಗ ನಮ್ಮನ್ನು ಬಿಟ್ಟು ಅವರು ಹೋದರು. ಅವರ ಅಗಲಿಕೆ ನಂಬಲು ಸಾಧ್ಯ ಆಗುತ್ತಿಲ್ಲ.'' ಎಂದು ಟ್ವೀಟ್ ಮಾಡಿದ್ದಾರೆ.

ಅಂಬರೀಶ್ ಅಂತ್ಯಕ್ರಿಯೆಯಲ್ಲಿ ಭಾಗಯಾಗಿದ್ದ ಸುದೀಪ್ ಅವರ ಪಾರ್ಥಿವ ಶರೀರದ ಮುಂದೆ ಕಣ್ಣೀರು ಹಾಕಿದರು. ಸಣ್ಣ ಮಗುವಿನ ರೀತಿ ಬಿಕ್ಕಿ ಬಿಕ್ಕಿ ಅತ್ತಿದ್ದರು.

More from Filmibeat

English summary
Actor Sudeep shared Ambareesh's 35 years old picture. Actor Ambareesh (66) passed away on November 24th in Bengaluru.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X