ಉಪೇಂದ್ರ 'ಪ್ರಜಾಕೀಯ'ದ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು?
ರಿಯಲ್ ಸ್ಟಾರ್ ಉಪೇಂದ್ರ, ಪ್ರಜಾಕೀಯದ ಮೂಲಕ ರಾಜಕೀಯ ಪ್ರವೇಶ ಮಾಡಿದಾಗ, ಚಿತ್ರರಂಗದಿಂದ ಅವರಿಗೆ ಅಭೂತಪೂರ್ವ ಬೆಂಬಲ ಸಿಕ್ಕಿತ್ತು. ಇದೀಗ, ವೈಯಕ್ತಿಕವಾಗಿ ಕಿಚ್ಚ ಸುದೀಪ್ ಅವರು ಉಪ್ಪಿಯ ಪ್ರಜಾಕೀಯ ಕಲ್ಪನೆಯನ್ನ ಮೆಚ್ಚಿಕೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕಿಚ್ಚ ಸುದೀಪ್ ಅವರು ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಎಂಬ ಸುದ್ಧಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು. ಆದ್ರೆ, ಸ್ವತಃ ಸುದೀಪ್ ಇದನ್ನ ನಿರಾಕರಿಸಿದ್ದರು. ಆದ್ರೀಗ, ಉಪ್ಪಿಯ ಪ್ರಜಾಕೀಯದ ಬಗ್ಗೆ ಸುದೀಪ್ ಅವರು ಮಾತನಾಡಿದ್ದಾರೆ.

''ಉಪೇಂದ್ರ ಅವರ ಆಲೋಚನೆಗಳು ಕಾರ್ಯರೂಪಕ್ಕೆ ಬರುತ್ತಿರುವುದು ಬಹಳ ಖುಷಿ ಆಗ್ತಿದೆ. ಅವರು ಅಂದುಕೊಂಡಿದ್ದನ್ನ ಮಾಡುವ ಉತ್ಸಾಹದಲ್ಲಿದ್ದಾರೆ. ಅವರಿಗೆ ನಮ್ಮ ಶುಭಾಶಯ ಇದ್ದೇ ಇರುತ್ತೆ. ಆದ್ರೆ, ಪ್ರಚಾರ ಮಾಡುವುದು ನನ್ನ ವ್ಯಾಪ್ತಿಗೆ ಬರುವುದಿಲ್ಲ. ಯಾಕಂದ್ರೆ, ನನಗೆ ಗೊತ್ತಿಲ್ಲದರ ಬಗ್ಗೆ ನಾನು ಯಾವುತ್ತು ಪ್ರಾಮೀಸ್ ಮಾಡಲ್ಲ'' ಎಂದು ಉಪ್ಪಿಯ ಹೊಸ ಹೆಜ್ಜೆಗೆ ವಿಶ್ ಮಾಡಿದ್ದಾರೆ.
More from Filmibeat
English summary
Kannada Actor, Kiccha Sudeep Speaks About Upendra's Prajakiya.


Click it and Unblock the Notifications











