»   » 'ಯಾರೋ ಅವನ ತಲೆಗೆ ಏನೋ ತುಂಬಿದ್ದಾರೆ' ಗೆಳೆಯ ದರ್ಶನ್ ಬಗ್ಗೆ ಕಿಚ್ಚನ ನುಡಿ!

'ಯಾರೋ ಅವನ ತಲೆಗೆ ಏನೋ ತುಂಬಿದ್ದಾರೆ' ಗೆಳೆಯ ದರ್ಶನ್ ಬಗ್ಗೆ ಕಿಚ್ಚನ ನುಡಿ!

Posted By:
Subscribe to Filmibeat Kannada
ದರ್ಶನ್ ಬಗ್ಗೆ ಸುದೀಪ್ ಎಂಥ ಸ್ಟೇಟ್ಮೆಂಟ್ ಕೊಟ್ಟಿದಾರೆ ಕೇಳಿ | FIlmibeat Kannada

ಸುದೀಪ್ ಮತ್ತು ದರ್ಶನ್ ಒಂದು ಕಾಲಕ್ಕೆ ಕುಚುಕು ಗೆಳೆಯರಾಗಿದ್ದರು ಆದರೆ ಅದೇನಾಯ್ತೋ ಏನೋ ದರ್ಶನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ''ನಾನು ಮತ್ತು ಸುದೀಪ್ ಇನ್ಮುಂದೆ ಸ್ನೇಹಿತರಲ್ಲ. ನಾವಿಬ್ಬರೂ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿರುವ ಕಲಾವಿದರಷ್ಟೇ'' ಎಂದು ಟ್ವೀಟ್ ಮಾಡಿದ್ದರು. ಇದರ ಬಳಿಕ ಇದುವರೆಗೆ ಈ ಇಬ್ಬರು ನಟರು ಒಟ್ಟಿಗೆ ಕಾಣಿಸಿಕೊಂಡಿಲ್ಲ.

ಸುದೀಪ್ ಎರಡನೇ ಟ್ವೀಟ್: ದರ್ಶನ್ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಕಿಚ್ಚ

ಆದರೆ, ನಟ ಸುದೀಪ್ ಈಗ ಮತ್ತೆ ದರ್ಶನ್ ಬಗ್ಗೆ ಮಾತನಾಡಿದ್ದಾರೆ. ಕೆಲ ದಿನಗಳ ಹಿಂದೆ ಟ್ವಿಟ್ಟರ್ ನಲ್ಲಿ ದರ್ಶನ್ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ್ದ ಸುದೀಪ್ ಈಗ ಮತ್ತೆ ದರ್ಶನ್ ಬಗ್ಗೆ ಒಪನ್ ಆಗಿ ಮಾತನಾಡಿದ್ದಾರೆ. ದಿನ ಪತ್ರಿಕೆವೊಂದರ ವಿಶೇಷ ಸಂದರ್ಶನದಲ್ಲಿ ಸುದೀಪ್ ದರ್ಶನ್ ಬಗ್ಗೆ ಈ ರೀತಿ ಹೇಳಿದ್ದಾರೆ.

ಅಂದಹಾಗೆ, ಸುದೀಪ್ ಅವರ ಸಂಪೂರ್ಣ ಮಾತುಗಳು ಮುಂದಿದೆ ಓದಿ...

ಯಾರೋ ಅವನ ತಲೆಗೆ ಏನೋ ತುಂಬಿದ್ದಾರೆ

''ನನಗೆ ಯಾವ ಬೇಸರವೂ ಇಲ್ಲ.ಯಾರೋ ಅವನ ತಲೆಗೆ ಏನೋ ತುಂಬಿದ್ದಾರೆ. ಅದಕ್ಕೆ ಕೋಪ ಮಾಡಿಕೊಂಡಿದ್ದಾರೆ. ನನಗೆ ಗೊತ್ತಿರೋ ಪ್ರಕಾರ ವನ್ ಸೈಡ್ ಆಫ್ ಹಿಮ್ ಈಸ್ ವೆರಿ ಸ್ವೀಟ್. ನಾನು ಅವನನ್ನು ಚಿಕ್ಕಂದಿನಿಂದಲೂ ನೋಡಿದ್ದೀನಿ. ನನ್ನ ಬಗ್ಗೆ ಅವನು ತುಂಬ ಪೊಸೆಸಿವ್ ಆಗಿದ್ದ.'' - ಸುದೀಪ್, ನಟ

ಎಲ್ಲರೂ ಸಾಧಕರೆ

''ನನ್ನ ಜೀವನದಲ್ಲಿ ನಡೆದ ಕೆಲವು ಘಟನೆಗಳಿಂದ ಅವನಿಗೆ ಬೇಸರ ಆಗಿರಬಹುದು. ಆದರೆ ಅವೆಲ್ಲ ತಮ್ಮ ಪಾಡಿಗೆ ನಡೆದ ಸಂಗತಿಗಳು. ಹಾಗೆ ನೋಡಿದರೆ, ಯಾರ ಮೇಲಾದರೂ ದ್ವೇಷ ಸಾಧಿಸೋದಾದರೂ ಯಾಕೆ?. ಎಲ್ಲರೂ ಸಾಧಕರೆ. ಇವತ್ತು ಶಿವಣ್ಣ ನಾನು ಚೆನ್ನಾಗಿದ್ದೀವಿ ಅಂದರೆ ಅವರ ಮೇಲೆ ಮೊದಲಿಂದಲೂ ಪ್ರೀತಿ ಇತ್ತು. ಮಧ್ಯದಲ್ಲಿ ಹಾಳಾಗಿತ್ತು. ಆದೂ ಸತ್ಯವೇ. ಅದಕ್ಕೂ ಕಾರಣ ಇತ್ತು.'' - ಸುದೀಪ್, ನಟ

ಅದು ಆ ಕ್ಷಣದ ಸಿಟ್ಟು ಮಾತ್ರ

''ನಮ್ಮ ಕೈಗೇನಾದರೂ ನೋವಾಗಿದ್ರೆ, ನಾವು ಕೈ ಕತ್ತರಿಸಿ ಎಸೀತೀವಾ ಉಳಿಸಿಕೊಳ್ಳೋದಕ್ಕೆ ಪ್ರಯತ್ನ ಪಡೋದಿಲ್ವಾ? ಯಾಕಂದ್ರೆ, ನಮ್ಮ ದೇಹದ ಭಾಗ ಅಲ್ವಾ. ನಾವು ಫೆಂಡ್ಸ್ ಅಲ್ಲ ಎಂದು ಅವನು ಟ್ವೀಟ್ ಮಾಡಿರೋದು ಆ ಕ್ಷಣದ ಸಿಟ್ಟು ಮಾತ್ರ. ಅದರಿಂದ ಅವನು ಕೆಟ್ಟವನಾಗೋಲ್ಲ. ಅವನು ಚೆನ್ನಾಗಿದ್ದಾನೆ. ಒಳ್ಳೆ ವ್ಯಕ್ತಿ.'' - ಸುದೀಪ್, ನಟ

ದರ್ಶನ್ ಯಾವತ್ತು ನನ್ನ ಫ್ರೆಂಡ್

''ಫ್ರೆಂಡ್ ಆಗಿರೋದಕ್ಕೆ ದಿನವೂ ಬೇಟಿ ಆಗಲೇಬೇಕು ಅಂತೇನಿಲ್ಲ. ಗೆಳೆಯನಿಗೆ ಒಳ್ಳೆದಾಗ್ಲಿ ಅನ್ನೋ ಹಾರೈಕೆ ಮನದಲ್ಲಿದ್ದರೆ ಸಕಲ್ವಾ ಅದು ಯಾವತ್ತು ಇರುತ್ತದೆ. ಫ್ರೆಂಡ್ ಅಂದ್ರೆ ಯಾವಾಗಲೂ ಒಳ್ಳೆಯದನ್ನು ಬಯಸುವವನು. ದರ್ಶನ್ ಯಾವತ್ತು ನನ್ನ ಫ್ರೆಂಡ್. ಫ್ರೆಂಡ್ ಶಿಪ್ ನಲ್ಲಿ ಅಜೆಂಡಾ ಇರಬಾರದು. ಬದುಕಿನ ತುಂಬಾ ಪ್ಲಾನ್ ಗಳಿರಬಾರದು.'' - ಸುದೀಪ್, ನಟ

ದರ್ಶನ್ ಫ್ಯಾನ್ ಪ್ರಶ್ನೆಗೆ ಕಿಚ್ಚ ಕೊಟ್ಟಿದ್ದ ಉತ್ತರ

ಈ ಹೇಳಿಕೆಯ ಜೊತೆಗೆ ಸುದೀಪ್ ಇತ್ತೀಚಿಗಷ್ಟೆ ದರ್ಶನ್ ಅಭಿಮಾನಿಯ ಪ್ರಶ್ನೆಗೆ ಉತ್ತರ ನೀಡಿದ್ದರು. ''ನಮ್ಮ ದರ್ಶನ್ ಬಾಸ್ ಜೊತೆ ನೀವು ಯಾವಾಗ ಸಿನಿಮಾ ಮಾಡ್ತೀರಾ ಸುದೀಪ್ ಸರ್. ಈ ಸಿನಿಮಾ ಬಂದ್ರೆ ಖಂಡಿತಾ ಬಾಕ್ಸ್ ಆಫೀಸ್ ಚಿಂದಿ ಆಗುತ್ತೆ'' ಎಂಬ ದರ್ಶನ್ ಅಭಿಮಾನಿಯ ಪ್ರಶ್ನೆಗೆ ಸುದೀಪ್ ''ದರ್ಶನ್ ಜೊತೆ ಸಿನಿಮಾವನ್ನ ಯಾವಾಗ ಬೇಕಾದರೂ ಮಾಡಬಹುದು. ಒಟ್ಟಿಗೆ ಸಿನಿಮಾ ಮಾಡಲು ಒಳ್ಳೆಯ ಸ್ಕ್ರಿಪ್ಟ್ ಬೇಕು'' ಎಂದು ಹೇಳಿದ್ದರು.

ದರ್ಶನ್ ಮಾಡಿದ್ದ ಟ್ವೀಟ್ ಇದು

ಮಾರ್ಚ್ 5, 2017 ರಂದು ದರ್ಶನ್ ಅವರು ಸುದೀಪ್ ಬಗ್ಗೆ ಟ್ವೀಟ್ ಮಾಡಿದ್ದರು. ''ನಾನು ಮತ್ತು ಸುದೀಪ್ ಇನ್ಮುಂದೆ ಸ್ನೇಹಿತರಲ್ಲ. ನಾವಿಬ್ಬರೂ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿರುವ ಕಲಾವಿದರಷ್ಟೇ''. ಅಲ್ಲಿಂದ ಇದುವರೆಗೂ ಇಬ್ಬರು ಎಲ್ಲಿಯೂ ಒಬ್ಬರ ಹೆಸರು ಮತ್ತೊಬ್ಬರು ಹೇಳಿಲ್ಲ.

English summary
Kannada actor Sudeep spoke about Darshan and his friendship in an interview.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X