For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಬಗ್ಗೆ ನಾನು ಕೆಟ್ಟದ್ದು ಮಾತಾಡಿಲ್ಲ, ಅನ್ ಫಾಲೋ ಮಾಡಿಲ್ಲ

  |
  ದರ್ಶನ್ ಬಗ್ಗೆ ನಾನು ಕೆಟ್ಟದ್ದು ಮಾತಾಡಿಲ್ಲ, ಅನ್ ಫಾಲೋ ಮಾಡಿಲ್ಲ..! | FILMIBEAT KANNADA

  ದರ್ಶನ್ ಮತ್ತು ಸುದೀಪ್ ಒಟ್ಟಿಗೆ ಸಿನಿಮಾ ಮಾಡ್ಬೇಕು, ಒಟ್ಟಿಗೆ ಕಾಣಿಸಿಕೊಳ್ಳಬೇಕು ಎಂಬುದು ಕೋಟ್ಯಾಂತರ ಅಭಿಮಾನಿಗಳ ಆಸೆ. ಬಟ್, ಈ ಆಸೆ ಸದ್ಯಕ್ಕೆ ಈಡೇರುವ ಯಾವ ಲಕ್ಷಣವೂ ಇಲ್ಲ.

  ಯಾಕಂದ್ರೆ, ಇಬ್ಬರಲ್ಲಿ ಮೂಡಿರುವ ಮನಸ್ತಾಪಕ್ಕೆ ಕಾರಣವೇನು ಎಂಬುದು ಸ್ವತಃ ಸುದೀಪ್ ಅವರಿಗೆ ಗೊತ್ತಿಲ್ಲ. ಹೀಗಿದ್ಮೇಲೆ ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳುವುದು ಹೇಗೆ. ಟ್ವಿಟ್ಟರ್ ನಲ್ಲಿ ನಾವಿಬ್ಬರು ಸ್ನೇಹಿತರಲ್ಲ ಎಂದು ಹೇಳಿದ ಮೇಲೆ ಇಬ್ಬರು ಮುಖಾಮುಖಿ ಆಗಿಯೇ ಇಲ್ಲ.

  ದರ್ಶನ್-ಸುದೀಪ್ ವಿಚಾರದಲ್ಲಿ ಹೊಸ ಭರವಸೆ ಮೂಡಿಸಿದ ಜಗ್ಗೇಶ್ ಟ್ವೀಟ್

  ಆದ್ರೂ, ಇಬ್ಬರು ಒಂದಾಗ್ತಾರೆ ಎಂಬ ಆಸೆ ಮಾತ್ರ ಸ್ವಲ್ಪವೂ ಕಮ್ಮಿಯಾಗಿಲ್ಲ. ಈ ಬಗ್ಗೆ ಸಂದರ್ಶನವೊಂದರಲ್ಲಿ ಸುದೀಪ್ ಮಾತನಾಡಿದ್ದು, ''ನಾನು ಅವರ ಬಗ್ಗೆ ಎಲ್ಲಿಯೂ ಕೆಟ್ಟದ್ದು ಮಾತನಾಡಿಲ್ಲ, ಟ್ವಿಟ್ಟರ್ ನಲ್ಲಿ ಅನ್ ಫಾಲೋ ಮಾಡಿಲ್ಲ. ನಾನೆಲ್ಲೂ ಬಿಟ್ಟುಕೊಟ್ಟಿಲ್ಲ'' ಎಂದಿದ್ದಾರೆ. ಇದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ?

  ಸಮಸ್ಯೆ ಏನು ಎಂಬುದು ನನಗೆ ಗೊತ್ತಿಲ್ಲ

  ಸಮಸ್ಯೆ ಏನು ಎಂಬುದು ನನಗೆ ಗೊತ್ತಿಲ್ಲ

  'ದರ್ಶನ್ ವಿಚಾರದಲ್ಲಿ ಇಲ್ಲಿಯವರೆಗೂ ಸಮಸ್ಯೆ ಏನಾಗಿದೆ ಎಂಬುದೇ ನನಗೆ ಗೊತ್ತಿಲ್ಲ'' ಎಂದು ಸುದೀಪ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ದರ್ಶನ್ ಮಾತ್ರ ಟ್ವಿಟ್ಟರ್ ನಲ್ಲಿ 'ನಾವಿಬ್ಬರು ಸ್ನೇಹಿತರಲ್ಲ' ಎಂದಿದ್ದರು. ಬಟ್, ಸುದೀಪ್ ಈ ಬಗ್ಗೆ ಎಲ್ಲಿಯೂ ಮಾತನಾಡಿರಲಿಲ್ಲ.

  ಕಿಚ್ಚ ಸುದೀಪ್ ರವರ 'ಈ' ಮಾತನ್ನ 'ದಾಸ' ದರ್ಶನ್ ಕೇಳ್ತಾರಾ.?

  ನಾನು ಅನ್ ಫಾಲೋ ಮಾಡಿಲ್ಲ

  ನಾನು ಅನ್ ಫಾಲೋ ಮಾಡಿಲ್ಲ

  ''ನಾನು ಅವರ ಬಗ್ಗೆ ಎಲ್ಲಿಯೂ ಕೆಟ್ಟದ್ದು ಮಾತನಾಡಿಲ್ಲ, ಟ್ವಿಟ್ಟರ್ ನಲ್ಲಿ ಅನ್ ಫಾಲೋ ಮಾಡಿಲ್ಲ. ನಾನೆಲ್ಲೂ ಬಿಟ್ಟುಕೊಟ್ಟಿಲ್ಲ. ಏನು ನಡೆದಿದೆ, ಏನಾಗಿದೆ ಎಂಬುದು ಅವರಿಗೆ ಗೊತ್ತು. ನನ್ನ ಕಡೆಯಿಂದ ಏನ್ ಮಾಡ್ಬೇಕು ನಾನು ಅದನ್ನೇ ಮಾಡ್ತಿದ್ದೀನಿ. ನನ್ನ ಸಹ ಕಲಾವಿದರಿಗೆ ಎನ್ ಗೌರವ ಕೊಡಬೇಕೋ ಅದನ್ನ ಕೊಡ್ತಿದ್ದೀನಿ'' '' ಎಂದು ಸುದೀಪ್ ಮತ್ತೊಮ್ಮೆ ಈ ವಿಷ್ಯದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

  ಮಾರ್ಚ್ 5, ದರ್ಶನ್ ಮತ್ತು ಸುದೀಪ್ ಪಾಲಿಗೆ ಕರಾಳ ದಿನ

  ಬಲವಂತ ಆಗಬಾರದು

  ಬಲವಂತ ಆಗಬಾರದು

  ''ಎಲ್ಲಿ ನಿಮಗೆ ಗೌರವ ಸಿಕ್ತಿಲ್ಲ ಅಂದ್ಮೇಲೆ ಆ ಫ್ರೆಂಡ್ ಷಿಪ್ ಗೆ ಗೌರವ ಎಲ್ಲಿದೆ. ಯಾರೋ ಒಬ್ಬರಿಗೆ ಆಗ್ತಿಲ್ಲ ಅಂದಾಗ ಅದು ಬಲವಂತ ಆಗಬಾರದು'' ಎಂದು ಹೇಳುವ ಮೂಲಕ, ನೀವಿಬ್ಬರು ಒಟ್ಟಿಗೆ ಯಾವಾಗ ಸಿನಿಮಾ ಮಾಡ್ತೀರಾ ಎಂದು ಕೇಳುತ್ತಿದ್ದವರಿಗೆ ಉತ್ತರ ನೀಡಿದ್ದಾರೆ.

  ಮೆಜಿಸ್ಟಿಕ್ ಕಾರಣನಾ?

  ಮೆಜಿಸ್ಟಿಕ್ ಕಾರಣನಾ?

  ಈ ಹಿಂದೆ ಸ್ವತಃ ದರ್ಶನ್ ಅವರೇ ಹೇಳಿಕೊಂಡಿರುವ ಪ್ರಕಾರ, ಸುದೀಪ್ ಜೊತೆಗಿನ ಮನಸ್ತಾಪಕ್ಕೆ ಮೆಜಿಸ್ಟಿಕ್ ಚಿತ್ರಕ್ಕೆ ಸಂಬಂಧಪಟ್ಟಂತೆ ಬೆಳವಣಿಗೆಯೇ ಕಾರಣ. ಬಟ್, ನಿಜಕ್ಕೂ ಅದೊಂದೇ ಕಾರಣನಾ ಗೊತ್ತಿಲ್ಲ.

  ಮುಖಾ ಮುಖಿ ಮಾತಾಡಿದ್ರೆ ಕ್ಲಿಯರ್.!

  ಮುಖಾ ಮುಖಿ ಮಾತಾಡಿದ್ರೆ ಕ್ಲಿಯರ್.!

  ಈ ಟ್ವಿಟ್ಟರ್ ಜಗಳ ಆದ್ಮೇಲೆ ಸುದೀಪ್ ಮತ್ತು ದರ್ಶನ್ ಇಬ್ಬರು ಮುಖಾಮುಖಿ ಭೇಟಿ ಅಥವಾ ಮಾತುಕತೆ ಆಗಿಲ್ಲ ಎಂಬುದು ನಿಜ. ಒಮ್ಮೆ ಇವರಿಬ್ಬರು ಭೇಟಿಯಾಗಿ ಈ ಬಗ್ಗೆ ಮಾತಾಡಿಕೊಂಡ್ರೆ ಖಂಡಿತವಾಗಿಯೇ ಈ ಸಮಸ್ಯೆ ಕ್ಲಿಯರ್ ಆಗುತ್ತೆ ಎಂಬುದು ಅಭಿಮಾನಿಗಳ ನಿರೀಕ್ಷೆ.

  English summary
  Kannada actor sudeep recently spoke about his friend darshan in one of the tv interview.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X