For Quick Alerts
  ALLOW NOTIFICATIONS  
  For Daily Alerts

  'ಮತ್ತೆ ನಿರ್ದೇಶನ ಯಾವಾಗ..?' ಅಂತ ಕೇಳಿದಕ್ಕೆ ಸುದೀಪ್ ಕೊಟ್ಟ ಉತ್ತರ ಇದು

  By Naveen
  |
  sudeep spoke about his direction | Filmibeat Kannada

  ನಟ ಸುದೀಪ್ ಸದ್ಯ ಸಿನಿಮಾ ಹಾಗೂ 'ಬಿಗ್ ಬಾಸ್' ಕಾರ್ಯಕ್ರಮಗಳಲ್ಲಿ ಬಿಜಿ ಇದ್ದಾರೆ. ಆದರೆ ನಟನೆಯ ಜೊತೆಗೆ ಸುದೀಪ್ ಯಾವಾಗ ಮತ್ತೆ ನಿರ್ದೇಶನ ಮಾಡುತ್ತಾರೆ ಎನ್ನುವುದು ಅನೇಕರಿಗೆ ಇದ್ದ ಪ್ರಶ್ನೆ. ಇಂತಹ ಪ್ರಶ್ನೆಗೆ ಸದ್ಯ ಸುದೀಪ್ ಅವರೇ ಉತ್ತರ ನೀಡಿದ್ದಾರೆ.

  ಇತ್ತೀಚಿನ ಸಂದರ್ಶನವೊಂದರಲ್ಲಿ ಸುದೀಪ್ ನಿರ್ದೇಶನದ ಬಗ್ಗೆ ಮಾತನಾಡಿದ್ದಾರೆ. ''ನನ್ನ ಜೊತೆ ಸೇರಿಕೊಂಡು ಒಂದಷ್ಟು ಕನಸುಗಳನ್ನು ನನಸು ಮಾಡಿಕೊಳ್ಳುವ ಆಸೆಯಿಂದ ಸುಮಾರು ಜನ ಪ್ರತಿಭೆಗಳು ಕಾಯುತ್ತಿದ್ದಾರೆ. ಒಂದು ಸಿನಿಮಾ ಸೋತಾಗ ಕಲಾವಿದ ಸಾಯುವುದಿಲ್ಲ. ಅವನಿಗೋಸ್ಕರ ಒಂದು ಪಾತ್ರವನ್ನು ಯಾರು ಬರೆಯುವುದಿಲ್ಲ ಎಂದಾಗ ಅವನು ಸಾಯುತ್ತಾನೆ. ನನಗೆ ನಿರ್ದೇಶನ ಮಾಡಬೇಕು ಎನ್ನಿಸಿದಾಗ ಖಂಡಿತ ಮಾಡುತ್ತೇನೆ ಎಂದಿದ್ದಾರೆ.'' ಎಂದು ಉತ್ತರ ನೀಡಿದ್ದಾರೆ.

  ಅಂದಹಾಗೆ, ಸುದೀಪ್ 'ಮೈ ಆಟೋಗ್ರಾಫ್' ಚಿತ್ರ ಮೂಲಕ ನಿರ್ದೇಶನ ಶುರು ಮಾಡಿ ನಂತರ 'ನಂ73 ಶಾಂತಿನಿವಾಸ', 'ಜಸ್ಟ್ ಮಾತ್ ಮಾತಲ್ಲಿ', 'ವೀರ ಮದಕರಿ', 'ಕೆಂಪೇಗೌಡ' ಹಾಗೂ 'ಮಾಣಿಕ್ಯ' ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. 2014ರಲ್ಲಿ 'ಮಾಣಿಕ್ಯ' ಚಿತ್ರದ ಬಳಿಕ ಸುದೀಪ್ ನಟನೆಯಲ್ಲಿ ಮಾತ್ರ ಬಿಜಿ ಇದ್ದಾರೆ.

  English summary
  Actor kiccha Sudeep spoke about direction in his latest interview.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X