twitter
    For Quick Alerts
    ALLOW NOTIFICATIONS  
    For Daily Alerts

    ಇದೇ ಕಾರಣಕ್ಕೆ 'ಹುಚ್ಚ' ಚಿತ್ರವನ್ನು ಬೇರೆ ನಟರು ಬಿಟ್ರು, ಸುದೀಪ್ ಒಪ್ಪಿಕೊಂಡ್ರು

    |

    Recommended Video

    ಈ ಒಂದು ಕಾರಣಕ್ಕೆ ಯಾವ ನಟರೂ 'ಹುಚ್ಚ' ಸಿನಿಮಾವನ್ನು ಒಪ್ಪಿಕೊಳ್ಳಲಿಲ್ಲ | FILMIBEAT KANNADA

    'ಹುಚ್ಚ' ಸುದೀಪ್ ಸಿನಿ ಕೆರಿಯರ್ ಅನ್ನು ಬದಲು ಮಾಡಿದ್ದ ಸಿನಿಮಾ. ಓಂ ಪ್ರಕಾಶ್ ರಾವ್ ನಿರ್ದೇಶಕನ ಮಾಡಿದ್ದ ಈ ಸಿನಿಮಾ ಕಿಚ್ಚನಿಗೆ ಅದೃಷ್ಟ ತಂದುಕೊಟ್ಟಿತ್ತು.

    'ಹುಚ್ಚ' ಸಿನಿಮಾ ಸುದೀಪ್ ಕೈಗೆ ಹೇಗೆ ಬಂತು ಎನ್ನುವ ಸಂಗತಿಯನ್ನು ಅವರೇ ಇದೀಗ ಹೇಳಿಕೊಂಡಿದ್ದಾರೆ. 'ದಬಾಂಗ್ 3' ಸಿನಿಮಾದ ವಿಶೇಷವಾಗಿ ಬಾಲಿವುಡ್ ಸಂದರ್ಶನದಲ್ಲಿ ಮಾತನಾಡುವ ವೇಳೆ ತಮ್ಮ ಸಿನಿಮಾ ಪ್ರಾರಂಭದ ದಿನಗಳನ್ನು ನೆನೆದಿದ್ದಾರೆ. ಈ ಸಮಯದಲ್ಲಿ 'ಹುಚ್ಚ' ಚಿತ್ರದ ಕುತೂಹಲಕಾರಿ ಘಟನೆಯನ್ನು ಪ್ರೇಕ್ಷಕರ ಮುಂದೆ ಬಿಟ್ಟಿದ್ದಾರೆ.

    ಬಾಲಿವುಡ್ ಸಂದರ್ಶನದಲ್ಲಿ 'ಹುಚ್ಚ' ಸಿನಿಮಾ ನೆನೆದ ಸುದೀಪ್ಬಾಲಿವುಡ್ ಸಂದರ್ಶನದಲ್ಲಿ 'ಹುಚ್ಚ' ಸಿನಿಮಾ ನೆನೆದ ಸುದೀಪ್

    'ಹುಚ್ಚ' ಸಿನಿಮಾ ಸಿಕ್ಕದ್ದು, ಬಿಡುಗಡೆ ದಿನ ನಡೆದ ಘಟನೆ, ಕಿಚ್ಚ ಹೆಸರು ಬಂದಿದ್ದು, ಸುದೀಪ್ ಕಣ್ಣೀರು ಹಾಕಿದ್ದು ಈ ಘಟನೆಗಳನ್ನು ಮುಕ್ತವಾಗಿ ವಿವರಿಸಿದ್ದಾರೆ.

    ಯಾವ ಸಿನಿಮಾಗಳು ಬಿಡುಗಡೆ ಆಗುತ್ತಿರಲಿಲ್ಲ

    ಯಾವ ಸಿನಿಮಾಗಳು ಬಿಡುಗಡೆ ಆಗುತ್ತಿರಲಿಲ್ಲ

    ಪ್ರಾರಂಭದಲ್ಲಿ ಸುದೀಪ್ ನಟನೆಯ ಯಾವ ಸಿನಿಮಾಗಳು ಬಿಡುಗಡೆ ಆಗುತ್ತಿರಲಿಲ್ಲ. ಕೆಲವು ಸಿನಿಮಾಗಳು ಅರ್ಧದಲ್ಲಿಯೇ ನಿಂತು ಹೋಗುತ್ತಿದ್ದವು. ಹೀಗಾಗಿ ಅವರನ್ನು 'ಐರಾನ್ ಲೆಗ್' ಎಂದು ಟೀಕಿಸುತ್ತಿದ್ದರು. ಆದರೆ, ಮೊದಲ ಬಾರಿಗೆ ಸುದೀಪ್ ನಟನೆಯ ಒಂದು ಸಿನಿಮಾ ಬಿಡುಗಡೆಯಾಯ್ತು. ಚಿತ್ರಮಂದಿರಕ್ಕೆ ಸುದೀಪ್ ಹೋದ್ರೆ, ಕೇವಲ ಐದು ಜನ ಸಿನಿಮಾ ನೋಡುತ್ತಿದ್ದರು. ಇದರಿಂದ ಸುದೀಪ್ ತುಂಬ ಬೇಸರಗೊಂಡರು.

    ತಲೆ ಬೋಳಿಸಿಕೊಳ್ಳಬೇಕು.. ರೆಡಿನಾ..?

    ತಲೆ ಬೋಳಿಸಿಕೊಳ್ಳಬೇಕು.. ರೆಡಿನಾ..?

    'ಹುಚ್ಚ' ಸಿನಿಮಾ ತಮಿಳಿನ 'ಸೇತು' ಸಿನಿಮಾದ ರಿಮೇಕ್. ಈ ಚಿತ್ರದ ಆಫರ್ ಮೊದಲು ಕನ್ನಡದ ಬೇರೆ ಬೇರೆ ನಟರಿಗೆ ಹೋಗಿತ್ತು. ಸಿನಿಮಾದ ಕೊನೆಯಲ್ಲಿ ನಾಯಕ ತಲೆ ಬೋಳಿಸಿಕೊಳ್ಳಬೇಕಾಗಿತ್ತು. ಇದೇ ಕಾರಣಕ್ಕೆ ಯಾವ ನಟರೂ ಈ ಸಿನಿಮಾ ಒಪ್ಪಿಕೊಳ್ಳಲಿಲ್ಲ. ನಂತರ ಸುದೀಪ್ ಬಳಿ ಪ್ರಾಜೆಕ್ಟ್ ಬಂತು. ನಿರ್ಮಾಪಕರು ನೀವು ತಲೆ ಬೋಳಿಸಿಕೊಳ್ಳಬೇಕು.. ರೆಡಿನಾ..? ಎಂದರು. ಆಗ ಸುದೀಪ್ ನನಗೆ ಸಿನಿಮಾ ನೀಡಿ... ಅದಕ್ಕಾಗಿ ಏನನ್ನು ಬೇಕಾದರು ಬೊಳಿಸಿಕೊಳ್ಳುತ್ತೇನೆ ಎಂದರಂತೆ.

    ಮೂರನೇ ಮಹಡಿಯಿಂದ ಬಿದ್ದ ಸುದೀಪ್

    ಮೂರನೇ ಮಹಡಿಯಿಂದ ಬಿದ್ದ ಸುದೀಪ್

    ಸಿನಿಮಾದ ಏಳನೇ ದಿನದ ಚಿತ್ರೀಕರಣ ನಡೆಯುತ್ತಿತ್ತು. ಆಗ ಮೂರನೇ ಮಹಡಿಯಿಂದ ಸುದೀಪ್ ಬಿದ್ದು ಬಿಟ್ಟರು. ಮೂಳೆಗೆ ಬಲವಾದ ಪೆಟ್ಟಾಗಿತ್ತು. ಕಾಲು ಗಾಯ ಆಗಿತ್ತು. ಇದೆಲ್ಲ ಇದ್ದರೂ ಸಹಿಸಿಕೊಂಡು ಸುದೀಪ್ ಸಿನಿಮಾ ಮಾಡಿದರು. ಅಂತು ಸಿನಿಮಾ ಮುಗಿದು, ಬಿಡುಗಡೆಯಾಯ್ತು. ಒಂದು ಸಣ್ಣ ಚಿತ್ರಮಂದಿರ ಸಿನಿಮಾದ ಮೈನ್ ಥಿಯೇಟರ್ ಆಗಿ ಸಿಕ್ಕಿತ್ತು.

    ಕಣ್ಣೀರು ಹಾಕಿದ ಸುದೀಪ್

    ಕಣ್ಣೀರು ಹಾಕಿದ ಸುದೀಪ್

    'ಹುಚ್ಚ' ಸಿನಿಮಾ ಬಿಡುಗಡೆಯಾದ ದಿನ ಬೆಳಗ್ಗೆ 8 ಗಂಟೆ.. ಮತ್ತೆ ನಾಲ್ಕೇ ಜನರು ನಿಂತಿದ್ದರು. ಚಿತ್ರಮಂದಿರದ ಒಳಗೆ ಹೋದ ಸುದೀಪ್ ಗೆ ಥಿಯೇಟರ್ ಮ್ಯಾನೆಜರ್ ಸಿಕ್ಕರು. ಏಕೆ ಬೇಸರ ಮಾಡಿಕೊಂಡಿದ್ದೀರಿ..? ಎಂದರು. ಆಗ ಇದ್ದೇನೂ ಜನರೇ ಇಲ್ಲವಲ್ಲ ಎಂದು ಬೇಸರಗೊಂಡರು. ಹೀಗೆ ಹೇಳಿದ್ದೇ ತಡ, ಅಯ್ಯೋ ಸಿನಿಮಾ ಹೌಸ್ ಫುಲ್ ಆಗಿದೆ. ಎಲ್ಲರೂ ಟಿಕೆಟ್ ತೆಗೆದುಕೊಂಡು ಹೋಗಿದ್ದಾರೆ. ಶೋಗೆ ಸಮಯ ಇರುವ ಕಾರಣಸ ಜನ ಬಂದಿಲ್ಲ. ಸಂಜೆ ಶೋಗೂ ಟಿಕೆಟ್ ಸೇಲ್ ಆಗಿದೆ ಎಂದರಂತೆ. ಈ ಮಾತು ಕೇಳಿ ಸುದೀಪ್ ಕಣ್ಣೀರು ಹಾಕಿದರು.

    ಜನ ಸಾಗರದ ನಡುವೆ ಕಿಚ್ಚ

    ಜನ ಸಾಗರದ ನಡುವೆ ಕಿಚ್ಚ

    ಥಿಯೇಟರ್ ಮುಂದೆ ಸಿಕ್ಕಾಪಟ್ಟೆ ಜನ ಸೇರಿದರು. ಸಿನಿಮಾ ನೋಡಿ ಖುಷಿಯಾದ ಅವರು ಸುದೀಪ್ ರನ್ನು ಎತ್ತಿಕೊಂಡರು. ಸುದೀಪ್ ಹೆಸರು ತಿಳಿಯದ ಜನ ಚಿತ್ರದ ಪಾತ್ರದ ಹೆಸರು 'ಕಿಚ್ಚ' ಎಂದು ಕೂಗಿದರು. ಜೈ ಕಾರ ಹಾಕಿದರು. ಆ ದಿನ ಸುದೀಪ್ ನಾನು ಏನೋ ಸಾಧಿಸಿದೆ ಎಂದುಕೊಂಡರು. ಜನರು ನೀಡಿದ ಕಿಚ್ಚ ಎನ್ನುವ ಹೆಸರನ್ನು ಹಾಗೆಯೇ ಉಳಿಸಿಕೊಂಡರು. ಇಂದಿಗೂ ಆ ಹೆಸರು ಅಭಿಮಾನಿಗಳ ಪ್ರೀತಿ ಅವರ ಜೊತೆಗೆ ಇದೆ.

    English summary
    Actor Sudeep spoke about huccha movie in his bollywood interview.
    Sunday, December 8, 2019, 15:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X