ಶಿವಣ್ಣನ ಜೊತೆಗಿದ್ದ ಮನಸ್ತಾಪದ ಬಗ್ಗೆ ಓಪನ್ ಆಗಿ ಮಾತನಾಡಿದ ಸುದೀಪ್!
Recommended Video

ನಟ ಶಿವರಾಜ್ ಕುಮಾರ್ ಮತ್ತು ಸುದೀಪ್ ಈಗ ಒಟ್ಟಿಗೆ 'ದಿ ವಿಲನ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗ ಅವರಿಬ್ಬರ ಮಧ್ಯೆ ಸ್ನೇಹ ಇದೆ. ಆದರೆ ಈ ಹಿಂದೆ ಶಿವಣ್ಣ ಮತ್ತು ಸುದೀಪ್ ನಡುವೆ ಅಷ್ಟಕಷ್ಟೆ ಎನ್ನುವ ಸುದ್ದಿ ಇತ್ತು. 'ರಾಜ್ ಕಪ್ ಕ್ರಿಕೆಟ್' ಸಮಯದಲ್ಲಿ ನಡೆದ ಘಟನೆಯ ನಂತರ ಶಿವಣ್ಣ ಸುದೀಪ್ ನಡುವೆ ಮನಸ್ತಾಪ ಇದೆ ಎಂಬ ಅನೇಕ ವದಂತಿ ಇತ್ತು.
ಆದರೆ ಈಗ ಆ ವಿಷಯದ ಬಗ್ಗೆ ಮತ್ತೆ ಸುದೀಪ್ ಮಾತನಾಡಿದ್ದಾರೆ. ಪತ್ರಕರ್ತ ಹಾಗೂ ಲೇಖಕ ಜೋಗಿ ಬರೆದಿರುವ 'ನಾನು ಪಾರ್ವತಿ' ಎಂಬ ಹೊಸ ಪುಸ್ತಕ ಇತ್ತೀಚಿಗಷ್ಟೆ ಬಿಡುಗಡೆಯಾಗಿದೆ. ಪಾರ್ವತಮ್ಮ ರಾಜ್ ಕುಮಾರ್ ಅವರ ಬಗ್ಗೆ ಬರೆದ ಪುಸ್ತಕ ಇದಾಗಿದ್ದು, ಈ ಕಾರ್ಯಕ್ರಮಕ್ಕೆ ಸುದೀಪ್ ಅತಿಥಿ ಆಗಿದ್ದರು. ಈ ವೇಳೆ ಪುಸ್ತಕದ ಬಗ್ಗೆ ಮಾತು ಶುರು ಮಾಡಿದ ಸುದೀಪ್ ''ನಾನು ಓಪನ್ ಆಗಿ ಮಾತಾಡ್ಲಾ'' ಎಂದು ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ..

ಓಪನ್ ಆಗಿ ಮಾತಾಡ್ಲಾ..
''ಎಲ್ಲರಿಗೂ ನಮಸ್ಕಾರ.. ನಾನು ಓಪನ್ ಆಗಿ ಮಾತಾಡ್ಲಾ... ಮೊದಲಿನಿಂದಲು ನಮಗೂ ಮತ್ತು ಅವರಿಗೂ (ರಾಜ್ ಕುಟುಂಬ) ಆಗಿ ಬರುವುದಿಲ್ಲ ಅಂತ ಎಲ್ಲರೂ ಬರೆಯುತ್ತಿದ್ದರು. ನಾವು ಚಿತ್ರರಂಗಕ್ಕೆ ಬರುವಾಗ ಖಾಲಿ ಕಂಪ್ಯೂಟರ್ ತರ ಬರುತ್ತೇವೆ. ಆದರೆ ಆಮೇಲೆ ನಮಗೆ ಏನೇನೋ ತುಂಬುತ್ತಾರೆ.'' ಎಂದು ಸುದೀಪ್ ಹಳೆಯ ಘಟನೆ ಬಗ್ಗೆ ಮಾತನಾಡಿದರು.

ಬೇರೆಯವರ ಮಾತುಗಳಿಂದ
''ಇತರರ ಹೇಳಿದ ಅಂತಹ ಮಾತುಗಳಿಂದ ಶಿವಣ್ಣ ಮತ್ತು ರಾಘಣ್ಣ ನಮಗೆ ಹೇಗೋ ಕಾಣೋದಕ್ಕೆ ಶುರು ಆದರು. ನಾವು ಅವರಿಗೆ ಯಾವ ರೀತಿ ಕಾಣೋಕ್ಕೆ ಶುರು ಆದ್ವಿ ಅಂತ ಗೊತ್ತಿಲ್ಲ. ನನ್ನನ್ನು ಕರೆಸಿ ಬುಕ್ ರಿಲೀಸ್ ಮಾಡಿಸುವ ಅಗತ್ಯ ಏನು ಇರಲಿಲ್ಲ. ಅವರ ಮನೆಯಲ್ಲಿಯೇ ದೊಡ್ಡ ನಟ ಶಿವಣ್ಣ ಅವರೆ ಇದ್ದಾರೆ.'' - ಸುದೀಪ್, ನಟ

ನಾನು ತುಂಬ ಚಿಕ್ಕವನು
''ಅವರ (ಪಾರ್ವತಮ್ಮ ರಾಜ್ ಕುಮಾರ್) ಸಾಧನೆ ಮುಂದೆ ನಾನು ತುಂಬ ಚಿಕ್ಕವನು. ಈ ಬುಕ್ ಕೈ ನಲ್ಲಿ ಹಿಡಿಯುವ ತನಕ ಅದರ ತೂಕ ನನಗೆ ಗೊತ್ತಾಗಿರಲಿಲ್ಲ. ಈ ಬುಕ್ ನಲ್ಲಿರುವ ವಿಷಯವನ್ನು ಜೀವನದಲ್ಲಿ ಅಳವಡಿಸಿ ಕೊಂಡ ಮೇಲೆ ಅದರ ಬಗ್ಗೆ ಮಾತನಾಡುವುದಕ್ಕೆ ನಾನು ಅರ್ಹನಾಗುತ್ತೇನೆ.'' - ಸುದೀಪ್, ನಟ

ಚಿತ್ರರಂಗ ಎನ್ನುವುದು ಪ್ರೀತಿಯ ವಾತಾವರಣ
''ಈ ಕಾರ್ಯಕ್ರಮಕ್ಕೆ ಕರೆದಿದಕ್ಕೆ ಖುಷಿ ಆಯ್ತು. ಚಿಕ್ಕವನಾಗಿ ಚಿತ್ರರಂಗಕ್ಕೆ ಬಂದೆ. ಇನ್ನೂ ಚಿಕ್ಕವನಾಗಿಯೇ ಇದ್ದೇನೆ. ಸ್ಟಾರ್ ಡಮ್ ಎಲ್ಲವನ್ನು ಸೈಡ್ ಗೆ ಇಟ್ಟು ನೋಡಿದಾಗ ಚಿತ್ರರಂಗ ಬಹಳ ಪ್ರೀತಿಯ ವಾತಾವರಣ. ಅದರಲ್ಲಿ ನಾನು ಇದ್ದೇನೆ. ನನ್ನನ್ನು ಕಾಪಾಡಲು ಹಿರಿಯರು ಇದ್ದಾರೆ.'' - ಸುದೀಪ್, ನಟ

ಈ ಪುಸ್ತಕ ಓದುತ್ತೇನೆ
''ನಾನು ಇದುವರೆಗೆ ಯಾವ ಬುಕ್ ಓದಿಲ್ಲ. ಆದರೆ ಈ ಬುಕ್ ಖಂಡಿತ ಓದುತ್ತೇನೆ.'' - ಸುದೀಪ್, ನಟ

'ದಿ ವಿಲನ್' ಸಿನಿಮಾ
ಸದ್ಯ ಶಿವರಾಜ್ ಕುಮಾರ್ ಮತ್ತು ಸುದೀಪ್ ಒಟ್ಟಿಗೆ 'ದಿ ವಿಲನ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











