ಫಸ್ಟ್ ಡೇ 'A' ಸಿನಿಮಾ ನೋಡಿದ್ದ ಸುದೀಪ್ ಏನ್ ಹೇಳಿದ್ರು ಕೇಳಿ !

By Naveen

Recommended Video

ಉಪ್ಪಿಯ 'ಎ' ಸಿನಿಮಾವನ್ನು ಸುದೀಪ್ ಮೊದಲ ದಿನ ನೋಡಿ ,ಏನ್ ಹೇಳಿದ್ರು ಗೊತ್ತಾ ? | Filmibeat Kannada

ಚಿತ್ರರಂಗದ ಹಲವು ವಿಷಯಗಳು ಸಿಕ್ಕಾಪಟ್ಟೆ ಸ್ವಾರಸ್ಯವಾಗಿರುತ್ತದೆ. ಒಂದು ಸಿನಿಮಾ ಎಷ್ಟೇ ಹಳೆಯದಾದರೂ ಕೂಡ ಆ ಸಿನಿಮಾದ ಕೆಲವು ರೋಚಕ ಘಟನೆಗಳು ಅನೇಕರಿಗೆ ತಿಳಿದಿರುವುದಿಲ್ಲ. ಅದೇ ರೀತಿಯ ಒಂದು ಕುತೂಹಲಕಾರಿ ವಿಷಯವನ್ನು ನಾವು ನಿಮಗೆ ಹೇಳುತ್ತೇವೆ.

'ಎ' ಸಿನಿಮಾವನ್ನು ಬಹುತೇಕ ಎಲ್ಲರೂ ನೋಡಿರುತ್ತಾರೆ. ಕೆಲವರಿಗೆ ಈ ಸಿನಿಮಾ ಅರ್ಥ ಆದರೆ ಇನ್ನೂ ಕೆಲವರಿಗೆ ಈ ಸಿನಿಮಾ ಇದುವರೆಗೂ ಅರ್ಥ ಆಗಿಲ್ಲ. 'ಎ' ರಿಲೀಸ್ ಆದ ದಿನ ಬೆಳ್ಳಗೆ ಚಿತ್ರಮಂದಿರದಲ್ಲಿ ದೊಡ್ಡ ಮಟ್ಟದ ರೆಸ್ಪಾನ್ಸ್ ಸಿಕ್ಕಿರಲಿಲ್ಲ. ಆದರೆ ಸಂಜೆ ವೇಳೆಗೆ ಹೌಸ್ ಫುಲ್ ಆಗಿ ಟಿಕೆಟ್ ಗಾಗಿ ಜನ ಕಾಯುತ್ತಿದ್ದರು. ಇನ್ನು ನಟ ಸುದೀಪ್ 'ಎ' ಸಿನಿಮಾವನ್ನು ಮೊದಲ ದಿನವೇ ನೋಡಿದ್ದರು. ಆ ವೇಳೆ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ಸುದೀಪ್ ಆಪ್ತ ಗೆಳೆಯರಾಗಿದ್ದರು. ಸಿನಿಮಾ ನೋಡಿ ಬಂದು ಗುರುಕಿರಣ್ ಜೊತೆಗೆ ಸುದೀಪ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಮುಂದೆ ಓದಿ..

ಇನ್ನು ಚಿತ್ರರಂಗಕ್ಕೆ ಬಂದಿರಲಿಲ್ಲ

ಇನ್ನು ಚಿತ್ರರಂಗಕ್ಕೆ ಬಂದಿರಲಿಲ್ಲ

ಸುದೀಪ್ 'ಎ' ಸಿನಿಮಾ ನೋಡಿದ ಟೈಂ ನಲ್ಲಿ ಅವರು ಇನ್ನು ಚಿತ್ರರಂಗಕ್ಕೆ ಬಂದಿರಲಿಲ್ಲ. ಒಳ್ಳೆಯ ಪಾತ್ರದ ಅವಕಾಶಕ್ಕಾಗಿ ಅನೇಕ ನಿರ್ಮಾಪಕ, ನಿರ್ದೇಶಕ ಹತ್ತಿರ ಸುತ್ತುತ್ತಿದ್ದರು. ಈ ವೇಳೆ ಗುರುಕಿರಣ್ ಕೂಡ ಹೀರೋ ಆಗಬೇಕು ಅಂತ ಅಲೆದಾಡುತ್ತಿದ್ದರು.

ಸಂಜೆ ಶೋ

ಸಂಜೆ ಶೋ

ಆ ವೇಳೆಗಾಗಲೇ ಸುದೀಪ್ ಮತ್ತು ಗುರುಕಿರಣ್ ಸ್ನೇಹಿತರಾಗಿರುವ ಕಾರಣ ಉಪೇಂದ್ರ ಪರಿಚಯ ಕೂಡ ಸುದೀಪ್ ಅವರಿಗೆ ಇತ್ತು. ಅದೇ ಕಾರಣಕ್ಕೆ 'ಎ' ರಿಲೀಸ್ ಆದ ಮೊದಲ ದಿನದ ಸಂಜೆ ಶೋ ಸುದೀಪ್, ಗುರುಕಿರಣ್ ಜೊತೆಗೆ ಸಿನಿಮಾ ನೋಡಿದ್ದರು.

ಸಿಕ್ಕಾಪಟ್ಟೆ ಖುಷಿ

ಸಿಕ್ಕಾಪಟ್ಟೆ ಖುಷಿ

ಸಿನಿಮಾ ನೋಡಿ ಆಚೆ ಬಂದ ತಕ್ಷಣ ಸುದೀಪ್ ಸಿಕ್ಕಾಪಟ್ಟೆ ಖುಷಿ ಆಗಿದ್ದರಂತೆ. ಅದೇ ರೀತಿ ಈ ಸಿನಿಮಾವನ್ನು ನೋಡಿ ಏನು ಹೇಳಬೇಕೋ ತಿಳಿಯದೆ ನಿಂತುಬಿಟ್ಟರಂತೆ. ಅದರಲ್ಲಿಯೂ ಗುರುಕಿರಣ್ ಅವರ ಹಾಡುಗಳನ್ನು ಕೇಳಿ ''ಗುರು ನೀನು ನಿಂತು ಕೊಂಡೆ'' ಎಂದು ಅಂದೇ ಹೇಳಿದ್ದರಂತೆ.

ಮುಕುಂದ ಮುರಾರಿ

ಮುಕುಂದ ಮುರಾರಿ

'ಎ' ಸಿನಿಮಾಕ್ಕೂ ಮುಂಚೆಯಿಂದ ಸ್ನೇಹ ಹೊಂದಿದ್ದ ಉಪೇಂದ್ರ ಮತ್ತು ಸುದೀಪ್ ಇಬ್ಬರು ಸದ್ಯ ಸ್ಟಾಂಡಲ್ ವುಡ್ ಸ್ಟಾರ್ ನಟರಾಗಿದ್ದಾರೆ. 'ಮುಕುಂದ ಮುರಾರಿ' ಸಿನಿಮಾದಲ್ಲಿ ಮೊದಲ ಬಾರಿಗೆ ಇವರಿಬ್ಬರು ಒಟ್ಟಿಗೆ ನಟಿಸಿದ್ದಾರೆ.

ನನ್ನ ಮೊದಲ ಸಿನಿಮಾ

ನನ್ನ ಮೊದಲ ಸಿನಿಮಾ

'ಎ' ಸಿನಿಮಾದ ಬಗ್ಗೆ ಈ ರೀತಿಯ ಅನೇಕ ಕುತೂಹಲಕಾರಿ ಮತ್ತು ಎಲ್ಲಿಯೂ ರಿವೀಲ್ ಆಗಾದ ಅನೇಕ ವಿಷಯಗಳನ್ನು ಗುರುಕಿರಣ್ 'ಫಿಲ್ಮಿಬೀಟ್ ಕನ್ನಡ'ದ ಸರಣಿ ಲೇಖನ 'ನನ್ನ ಮೊದಲ ಸಿನಿಮಾ'ದಲ್ಲಿ ಹಂಚಿಕೊಂಡಿದ್ದಾರೆ. ಗುರುಕಿರಣ್ ಅವರ 'ನನ್ನ ಮೊದಲ ಸಿನಿಮಾ'ದ ಸಂಪೂರ್ಣ ಸಂದರ್ಶನವನ್ನು ಓದಲು ಈ ಲಿಂಕ್ ಕ್ಲಿಕ್ಕಿಸಿ.

ನನ್ನ ಮೊದಲ ಸಿನಿಮಾ : ಎಲ್ಲೂ ರಿವೀಲ್ ಆಗದ 'A' ಚಿತ್ರದ ರೋಚಕ ಕತೆ

More from Filmibeat

English summary
Kannada actor Sudeep spoke about Upendra's 'A' kannada movie. 'A' is a psychological romance film written and directed by Upendra.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X