ಕಾಲಿವುಡ್ ನಲ್ಲೇ ಸೆಟ್ಲ್ ಆಗ್ತಾರಾ ಕಿಚ್ಚ ಸುದೀಪ್
ಸ್ಯಾಂಡಲ್ ವುಡ್ ನಲ್ಲಿರುವಷ್ಟೇ ಬೇಡಿಕೆಯನ್ನ ಪರಭಾಷೆಯಲ್ಲೂ ಹೊಂದಿರುವ ನಟ ಕಿಚ್ಚ ಸುದೀಪ್. ಬಾಲಿವುಡ್ ಮತ್ತು ಟಾಲಿವುಡ್ ನಲ್ಲಿ ಹಿಟ್ಸ್ ಕೊಟ್ಟು, ಇದೀಗತಾನೆ ಕಾಲಿವುಡ್ ಗೆ ಹಾರಿರುವ ಸುದೀಪ್, ಅಲ್ಲೇ ನೆಲೆಯೂರುವ ಸಾಧ್ಯತೆಗಳೂ ಹೆಚ್ಚಾಗಿದೆ.
ಇಳಯದಳಪತಿ ವಿಜಯ್ ಜೊತೆ ತಮಿಳು ಚಿತ್ರದಲ್ಲಿ ನಟಿಸುತ್ತಿರುವ ನಲ್ಲ ಸುದೀಪ್, ಅದಾಗಲೇ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಅದು 'ಲಿಂಗಾ' ಚಿತ್ರವನ್ನು ನಿರ್ದೇಶಿಸಿರುವ ಕೆ.ಎಸ್.ರವಿಕುಮಾರ್ ಚಿತ್ರಕ್ಕೆ ಅನ್ನುವುದು ಬಿಗ್ ನ್ಯೂಸ್. [ಸುದೀಪ್ ಅನುಭವಿಸುತ್ತಿರುವ 'ನೋವು' ನಿಮಗ್ಗೊತ್ತಾ?]

ಎಲ್ಲವೂ ಪ್ಲಾನ್ ಪ್ರಕಾರ ನಡೆದಿದ್ದರೆ, ಇಷ್ಟೊತ್ತಾಗಲೇ ಕಿಚ್ಚ ಸುದೀಪ್ ಗೆ ಕೆ.ಎಸ್.ರವಿಕುಮಾರ್ ಆಕ್ಷನ್ ಕಟ್ ಹೇಳ್ಬೇಕಿತ್ತು. ಆದರೆ, ರಜನಿಗೋಸ್ಕರ ಕೆ.ಎಸ್.ರವಿಕುಮಾರ್ 'ಲಿಂಗಾ' ಚಿತ್ರವನ್ನ ಮೊದಲು ಮಾಡಿದ್ದರಿಂದ ಸುದೀಪ್ ಪ್ರಾಜೆಕ್ಟ್ ಮುಂದಕ್ಕೆ ಹೋಯ್ತು.
ಇದೀಗ 'ಲಿಂಗಾ' ಸಿನಿಮಾ ತೆರೆಕಾಣುವುದಕ್ಕೆ ಸಿದ್ಧವಾಗಿರುವುದರಿಂದ ರವಿಕುಮಾರ್ ತಮ್ಮ ಹೊಸ ಚಿತ್ರದ ಬಗ್ಗೆ ಗಮನಹರಿಸುತ್ತಿದ್ದಾರಂತೆ. 'ಲಿಂಗಾ' ಚಿತ್ರದ ಆಡಿಯೋ ರಿಲೀಸ್ ವೇಳೆ ಸುದೀಪ್ ಜೊತೆ ಚರ್ಚಿಸಿರುವ ರವಿಕುಮಾರ್ ಅದಾಗ್ಲೇ ಕಾಲ್ ಶೀಟ್ ಕೂಡ ಬುಕ್ ಮಾಡಿದ್ದಾರೆ. [ಕಿಚ್ಚ ಪರಭಾಷೆಗೆ ಹೋಗಿ ಒದೆ ತಿನ್ಬೇಡಿ!]
ತಮಿಳು, ತೆಲುಗು ಮತ್ತು ಕನ್ನಡದಲ್ಲಿ ಈ ಸಿನಿಮಾ ತಯಾರಾಗಲಿದ್ದು, 'ಈಗ' ಚಿತ್ರದಂತೆ ಥ್ರಿಲ್ಲರ್ ಮೂವಿಯಾಗಿರಲಿದ್ಯಂತೆ. ಅಲ್ಲಿಗೆ ಸದ್ದಿಲ್ಲದೇ ಕಾಲಿವುಡ್ ನಲ್ಲಿ ಎರಡು ಬಿಗ್ ಸಿನಿಮಾಗಳನ್ನ ಒಪ್ಪಿಕೊಂಡಿರುವ ಸುದೀಪ್, ಅಲ್ಲೇ ಬಿಜಿಯಾದರೂ ಅಚ್ಚರಿ ಪಡಬೇಕಿಲ್ಲ. (ಏಜೆನ್ಸೀಸ್)


Click it and Unblock the Notifications











