'ಕಿಚ್ಚ' ಸುದೀಪ್ ಪಾಲಿಗೆ 'ಜುಲೈ 6' ತುಂಬಾ ಮಹತ್ವದ ದಿನ: ಯಾಕೆ?

'ತಾಯವ್ವ' ಚಿತ್ರದ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟ ಕಿಚ್ಚ ಸುದೀಪ್, ನಂತರ ರಮೇಶ್ ಅರವಿಂದ್ ನಟನೆಯ 'ಪ್ರತ್ಯಾರ್ಥ' ಚಿತ್ರದಲ್ಲಿ ಪೋಷಕ ನಟನಾಗಿ ಕಾಣಿಸಿಕೊಂಡರು. ಬಳಿಕ ಬಳಿಕವೇ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ 'ಸ್ಪರ್ಶ' ಚಿತ್ರಕ್ಕೆ ಸುದೀಪ್ ನಾಯಕನಾಗಿ ಆಯ್ಕೆಯಾಗಿದ್ದು.

ಕಿಚ್ಚ ಸುದೀಪ್, ಅಧಿಕೃತವಾಗಿ ಸ್ಪರ್ಶ ಸಿನಿಮಾ ಮೂಲಕ ನಾಯಕನಾಗಿ ಸ್ಯಾಂಡಲ್ ವುಡ್ ಪ್ರವೇಶ ಮಾಡಿದರು. ಲವರ್ ಬಾಯ್ ಇಮೇಜ್ ಮೂಲಕ ಮೊದಲ ಸಿನಿಮಾದಲ್ಲಿ ಗಮನ ಸೆಳೆದ ಸುದೀಪ್ ಗೆ ಈ ಸಿನಿಮಾ ದೊಡ್ಡ ಅವಕಾಶ ಅಥವಾ ಸ್ಟಾರ್ ಮಾಡಲಿಲ್ಲ.

ಆದ್ರೆ, ಜುಲೈ 6, 2001 ರಂದು ಬಿಡುಗಡೆಯಾದ 'ಹುಚ್ಚ' ಸಿನಿಮಾ ಸುದೀಪ್ ಸಿನಿ ಜೀವನವನ್ನೇ ಬದಲಾಯಿಸಿತು. ಈ ದಿನದಿಂದ ಇಂಡಸ್ಟ್ರಿಯಲ್ಲಿ ಹೊಸ ಹೆಜ್ಜೆ ಇಟ್ಟರು. ಇಲ್ಲಿಂದ ಸುದೀಪ್ ಮತ್ತೆ ತಿರುಗಿ ನೋಡಲೇ ಇಲ್ಲ. ಇಂದು ಕಿಚ್ಚ ಸುದೀಪ್ ಅಭಿನಯದ ಹುಚ್ಚ ಸಿನಿಮಾ ರಿಲೀಸ್ ಆದ ದಿನ. ಮುಂದೆ ಓದಿ...

ಹುಚ್ಚ ಸಿನಿಮಾಗೆ 20 ವರ್ಷದ ಸಂಭ್ರಮ

ಹುಚ್ಚ ಸಿನಿಮಾಗೆ 20 ವರ್ಷದ ಸಂಭ್ರಮ

ಇಂದು ಕಿಚ್ಚ ಸುದೀಪ್ ನಟನೆಯ ಹಿಟ್ 'ಹುಚ್ಚ' ಸಿನಿಮಾ ತೆರೆಕಂಡ ದಿನ. ಜುಲೈ 6, 2001 ರಲ್ಲಿ ಹುಚ್ಚ ಚಿತ್ರ ಬಿಡುಗಡೆಯಾಗಿತ್ತು. 2021, ಜುಲೈ 6 ಅಂದರೆ ಇವತ್ತಿಗೆ ಹುಚ್ಚ ಸಿನಿಮಾ ಬಂದು 20 ವರ್ಷಗಳು ತುಂಬಿದೆ. ಹುಚ್ಚ ಸಿನಿಮಾದಲ್ಲಿ ಸುದೀಪ್ ಮಾಡಿದ ಕಿಚ್ಚ ಪಾತ್ರ ಇಂದಿಗೂ ಯಾರೂ ಮರೆಯಲ್ಲ. ಬರಿ ಸುದೀಪ್ ಆಗಿದ್ದವರು ಹುಚ್ಚ ಸಿನಿಮಾ ಬಳಿಕ 'ಕಿಚ್ಚ' ಸುದೀಪ್ ಆಗಿ ಖ್ಯಾತಿ ಗಳಿಸಿದ್ರು.

ರಿಮೇಕ್ ಸಿನಿಮಾ

ರಿಮೇಕ್ ಸಿನಿಮಾ

ಓಂ ಪ್ರಕಾಶ್ ರಾವ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದರು. ಅಂದಿನ ಸಮಯದಲ್ಲಿ ಓಂ ಪ್ರಕಾಶ್ ರಾವ್ ಸ್ಟಾರ್ ಡೈರೆಕ್ಟರ್. ಲಾಕಪ್ ಡೆತ್, ಸಿಂಹದ ಮರಿ, ಎಕೆ 47 ಅಂತಹ ಬ್ಲಾಕ್ ಬಸ್ಟರ್ ಸಿನಿಮಾ ನೀಡಿದ್ದರು. ತಮಿಳಿನಲ್ಲಿ ತೆರೆಕಂಡಿದ್ದ ಸೂಪರ್ ಹಿಟ್ 'ಸೇತು' ಚಿತ್ರವನ್ನ ಕನ್ನಡದಲ್ಲಿ ಹುಚ್ಚ ಹೆಸರಿನಲ್ಲಿ ರೀಮೇಕ್ ಮಾಡಿದ್ದರು. ಸುದೀಪ್ ಮ್ಯಾನರಿಸಂಗೆ ತಕ್ಕ ಸಿನಿಮಾ ಮಾಡಿ ಸಕ್ಸಸ್ ತಂದರು.

ರಾಜೇಶ್ ರಾಮನಾಥ್ ಸಂಗೀತ

ರಾಜೇಶ್ ರಾಮನಾಥ್ ಸಂಗೀತ

ರಾಜೇಶ್ ರಾಮನಾಥ್ ಸಂಗೀತ ನಿರ್ದೇಶನ ಮಾಡಿದ್ದ ಈ ಚಿತ್ರದ ಎಲ್ಲಾ ಹಾಡುಗಳು ಸೂಪರ್ ಹಿಟ್. ಈಗಲೂ ಹುಚ್ಚ ಸಿನಿಮಾದ ಹಾಡುಗಳನ್ನ ಗುನುಗುವ ಅಭಿಮಾನಿಗಳಿದ್ದಾರೆ. ಉಸಿರೇ ಉಸಿರೇ....ಹುಡುಗಿರೋ ಹುಡುಗಿರೋ....ಹಾಡುಗಳಂತೂ ಆಲ್ ಟೈಂ ಹಿಟ್ ಗೀತೆಗಳಾಗಿವೆ.

ಫಿಲ್ಮ್ ಫೇರ್ ಪ್ರಶಸ್ತಿ ತಂದುಕೊಟ್ಟ ಸಿನಿಮಾ

ಫಿಲ್ಮ್ ಫೇರ್ ಪ್ರಶಸ್ತಿ ತಂದುಕೊಟ್ಟ ಸಿನಿಮಾ

ಸೌತ್ ಫಿಲ್ಮ್ ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಹುಚ್ಚ ಚಿತ್ರದ ನಟನೆಗಾಗಿ ಸುದೀಪ್ ಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ. ಇದಷ್ಟೇ ಅಲ್ಲದೇ ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟಿ ಹಾಗೂ ಅತ್ಯುತ್ತಮ ಸಂಗೀತ ನಿರ್ದೇಶಕ ವಿಭಾಗಗಳಲ್ಲಿ ಈ ಸಿನಿಮಾ ನಾಮಿನೇಟ್ ಆಗಿತ್ತು.

ನಟಿ ರೇಖಾಗೆ ಬ್ರೇಕ್ ನೀಡಿದ ಸಿನಿಮಾ

ನಟಿ ರೇಖಾಗೆ ಬ್ರೇಕ್ ನೀಡಿದ ಸಿನಿಮಾ

'ಹುಚ್ಚ' ಸಿನಿಮಾದ ನಾಯಕಿ ರೇಖಾಗೂ ಇದು ಬ್ರೇಕ್ ಕೊಡ್ತು. ಹುಚ್ಚ ಸಿನಿಮಾ ಮಾಡುವುದಕ್ಕೆ ಮುಂಚೆ ಚಿತ್ರ ಎಂಬ ಕನ್ನಡ ಸಿನಿಮಾ ಹಾಗೂ ಆನಂದಂ ಎಂಬ ತೆಲುಗು ಸಿನಿಮಾ ಮಾಡಿದ್ದರು ರೇಖಾ. ಆದರೆ, ಹುಚ್ಚ ಸಕ್ಸಸ್ ಬಳಿಕ ಕನ್ನಡ, ತೆಲುಗು ಇಂಡಸ್ಟ್ರಿಯಲ್ಲಿ ಹೆಚ್ಚು ಅವಕಾಶ ಗಳಿಸಿಕೊಂಡರು.

Recommended Video

ಶಿವರಾಜ್ ಕುಮಾರ್ ಹುಟ್ಟಿದ ದಿನ ಅಣ್ಣಾವ್ರು ಏನ್ ಮಾಡಿದ್ರು ಗೊತ್ತಾ? | Filmibeat Kannada
'ಈಗ' ಸಿನಿಮಾ ರಿಲೀಸ್ ಆಗಿದ್ದು ಇದೇ ದಿನ

'ಈಗ' ಸಿನಿಮಾ ರಿಲೀಸ್ ಆಗಿದ್ದು ಇದೇ ದಿನ

ಜುಲೈ 6 ರಂದು ಸುದೀಪ್ ಪಾಲಿಗೆ ಇನ್ನೊಂದು ವಿಶೇಷ. ಟಾಲಿವುಡ್ ನಲ್ಲಿ ಸುದೀಪ್ ಪ್ರಖ್ಯಾತಿ ಗಳಿಸಲು ಕಾರಣವಾದ 'ಈಗ' ಸಿನಿಮಾ ಕೂಡ 2012 ಜುಲೈ 6 ರಂದೇ ತೆರೆಕಂಡಿತ್ತು. ಈ ಚಿತ್ರದ ಮೂಲಕ ಸುದೀಪ್ ಟಾಲಿವುಡ್ ನಲ್ಲಿಯ ಸ್ಟಾರ್ ನಟರಾಗಿ ಗುರುತಿಸಿಕೊಂಡರು.

More from Filmibeat

English summary
Kannada Actor Sudeep starrer Huccha movie completes 20 years.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X