Don't Miss!
- News ಕ್ವಿಟ್ ಎನ್ಡಿಎ ಮತ್ತು ಸೇವ್ ಇಂಡಿಯಾ: ಪ್ರೊ. ಮಹೇಶ್ಚಂದ್ರಗುರು
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇಂದು ಕನ್ನಡದ ಸಿನಿಮಾ ಅಭಿಮಾನಿಗಳಿಗೆ 'ಕಿಚ್ಚ' ಸಿಕ್ಕಿದ ದಿನ
'ತಾಯವ್ವ' ಚಿತ್ರದ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟ ಕಿಚ್ಚ ಸುದೀಪ್, ನಂತರ ರಮೇಶ್ ಅರವಿಂದ್ ನಟನೆಯ 'ಪ್ರತ್ಯಾರ್ಥ' ಚಿತ್ರದಲ್ಲಿ ಪೋಷಕ ನಟನಾಗಿ ಕಾಣಿಸಿಕೊಂಡರು. ಇದಾದ ಬಳಿಕವೆ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ 'ಸ್ಪರ್ಶ' ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾಗಿದ್ದು.
Recommended Video
ಕಿಚ್ಚ ಸುದೀಪ್, ಅಧಿಕೃತವಾಗಿ ಸ್ಪರ್ಶ ಸಿನಿಮಾ ಮೂಲಕ ನಾಯಕನಾಗಿ ಸ್ಯಾಂಡಲ್ ವುಡ್ ಪ್ರವೇಶ ಮಾಡಿದರು. ಲವರ್ ಬಾಯ್ ಇಮೇಜ್ ಮೂಲಕ ಮೊದಲ ಸಿನಿಮಾದಲ್ಲಿ ಗಮನ ಸೆಳೆದ ಸುದೀಪ್ ಗೆ ಈ ಸಿನಿಮಾ ನೇಮೂ ಫೇಮೂ ತಂದುಕೊಡ್ತಾದರೂ, ದೊಡ್ಡ ಅವಕಾಶ ಅಥವಾ ಸ್ಟಾರ್ ಮಾಡಲಿಲ್ಲ.
ಆದ್ರೆ, ಜುಲೈ 6, 2001 ರಂದು ಬಿಡುಗಡೆಯಾದ ಹುಚ್ಚ ಸಿನಿಮಾ ಸುದೀಪ್ ಲೈಫ್ ಬದಲಾಯಿತು. ಈ ದಿನದಿಂದ ಇಂಡಸ್ಟ್ರಿಯಲ್ಲಿ ಹೊಸ ಹೆಜ್ಜೆ ಇಟ್ಟರು. ಇಲ್ಲಿಂದ ಸುದೀಪ್ ಮತ್ತೆ ತಿರುಗಿ ನೋಡಲೇ ಇಲ್ಲ. ಇಂದು ಕಿಚ್ಚ ಸುದೀಪ್ ಅಭಿನಯದ ಹುಚ್ಚ ಸಿನಿಮಾ ರಿಲೀಸ್ ಆದ ದಿನ. ಮುಂದೆ ಓದಿ...
ಶಿವರಾಜ್ ಕುಮಾರ್ ಜನ್ಮದಿನ ಮಹೋತ್ಸವಕ್ಕೆ ಚಾಲನೆ ನೀಡಿದ ಸುದೀಪ್
ಹುಚ್ಚ ಸಿನಿಮಾಗೆ 19 ವರ್ಷದ ಸಂಭ್ರಮ
ಕಿಚ್ಚ ಸುದೀಪ್ ನಟನೆಯ ಸೂಪರ್ ಹಿಟ್ ಹುಚ್ಚ ಸಿನಿಮಾ ತೆರೆಕಂಡ ದಿನ. ಜುಲೈ 6, 2001 ರಲ್ಲಿ ಹುಚ್ಚ ಚಿತ್ರ ಬಿಡುಗಡೆಯಾಗಿತ್ತು. 2020, ಜುಲೈ 6 ಅಂದರೆ ಇವತ್ತಿಗೆ ಹುಚ್ಚ ಸಿನಿಮಾ ಬಂದು 19 ವರ್ಷ ತುಂಬಿದೆ. ಹುಚ್ಚ ಸಿನಿಮಾದಲ್ಲಿ ಸುದೀಪ್ ಮಾಡಿದ ಕಿಚ್ಚ ಪಾತ್ರ ಇಂದಿಗೂ ಯಾರೂ ಮರೆಯಲ್ಲ. ಇಲ್ಲಿಂದಲೇ ಬರಿ ಸುದೀಪ್ ಆಗಿದ್ದವ್ರು ಕಿಚ್ಚ ಸುದೀಪ್ ಆಗಿ ಖ್ಯಾತಿ ಗಳಿಸಿದ್ರು.
ತಮಿಳು ರಿಮೇಕ್ ಸಿನಿಮಾ
ಓಂ ಪ್ರಕಾಶ್ ರಾವ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದರು. ಅಂದಿನ ಸಮಯದಲ್ಲಿ ಓಂ ಪ್ರಕಾಶ್ ರಾವ್ ಸ್ಟಾರ್ ಡೈರೆಕ್ಟರ್. ಲಾಕಪ್ ಡೆತ್, ಸಿಂಹದ ಮರಿ, ಎಕೆ 47 ಅಂತಹ ಬ್ಲಾಕ್ ಬಸ್ಟರ್ ಸಿನಿಮಾ ನೀಡಿದ್ದರು. ತಮಿಳಿನಲ್ಲಿ ತೆರೆಕಂಡಿದ್ದ ಸೂಪರ್ ಹಿಟ್ 'ಸೇತು' ಚಿತ್ರವನ್ನ ಕನ್ನಡದಲ್ಲಿ ಹುಚ್ಚ ಹೆಸರಿನಲ್ಲಿ ರೀಮೇಕ್ ಮಾಡಿದ್ದರು. ಸುದೀಪ್ ಮ್ಯಾನರಿಸಂಗೆ ತಕ್ಕ ಸಿನಿಮಾ ಮಾಡಿ ಸಕ್ಸಸ್ ತಂದರು.
ಕಷ್ಟದಲ್ಲಿದ್ದ ಕುಟುಂಬಕ್ಕೆ ನೆರವಾದ ಸುದೀಪ್: ಆಟೋ ಚಾಲಕನ ತಂಗಿ ಮದುವೆಗೆ ಕಿಚ್ಚನ ಸಹಾಯ
ಹಾಡುಗಳು ಸೂಪರ್ ಹಿಟ್
ರಾಜೇಶ್ ರಾಮನಾಥ್ ಸಂಗೀತ ನಿರ್ದೇಶನ ಮಾಡಿದ್ದ ಈ ಚಿತ್ರದ ಎಲ್ಲಾ ಹಾಡುಗಳು ಸೂಪರ್ ಹಿಟ್. ಈಗಲೂ ಹುಚ್ಚ ಸಿನಿಮಾದ ಹಾಡುಗಳನ್ನ ಗುನುಗುವ ಅಭಿಮಾನಿಗಳಿದ್ದಾರೆ. ಉಸಿರೇ ಉಸಿರೇ....ಹುಡುಗಿರೋ ಹುಡುಗಿರೋ....ಹಾಡುಗಳಂತೂ ಆಲ್ ಟೈಂ ಹಿಟ್ ಗೀತೆಗಳಾಗಿವೆ.
ಅತ್ಯುತ್ತಮ ನಟ ಪ್ರಶಸ್ತಿ
ಸೌತ್ ಫಿಲ್ಮ್ ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಹುಚ್ಚ ಚಿತ್ರದ ನಟನೆಗಾಗಿ ಸುದೀಪ್ ಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ. ಇದಷ್ಟೇ ಅಲ್ಲದೇ ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟಿ ಹಾಗೂ ಅತ್ಯುತ್ತಮ ಸಂಗೀತ ನಿರ್ದೇಶಕ ವಿಭಾಗಗಳಲ್ಲಿ ಈ ಸಿನಿಮಾ ನಾಮಿನೇಟ್ ಆಗಿತ್ತು.
ನಟಿ ರೇಖಾಗೆ ಬ್ರೇಕ್ ಕೊಟ್ಟ ಸಿನಿಮಾ
ಹುಚ್ಚ ಸಿನಿಮಾದ ನಾಯಕಿ ರೇಖಾಗೂ ಇದು ಬ್ರೇಕ್ ಕೊಡ್ತು. ಹುಚ್ಚ ಸಿನಿಮಾ ಮಾಡುವುದಕ್ಕೆ ಮುಂಚೆ ಚಿತ್ರ ಎಂಬ ಕನ್ನಡ ಸಿನಿಮಾ ಹಾಗೂ ಆನಂದಂ ಎಂಬ ತೆಲುಗು ಸಿನಿಮಾ ಮಾಡಿದ್ದರು ರೇಖಾ. ಆದರೆ, ಹುಚ್ಚ ಸಕ್ಸಸ್ ಬಳಿಕ ಕನ್ನಡ, ತೆಲುಗು ಇಂಡಸ್ಟ್ರಿಯಲ್ಲಿ ಹೆಚ್ಚು ಅವಕಾಶ ಗಳಿಸಿಕೊಂಡರು.
ಈಗ ಸಿನಿಮಾ ರಿಲೀಸ್ ಆಗಿದ್ದು ಇದೇ ದಿನ
ಜುಲೈ 6 ರಂದು ಸುದೀಪ್ ಪಾಲಿಗೆ ಇನ್ನೊಂದು ವಿಶೇಷ. ಟಾಲಿವುಡ್ ನಲ್ಲಿ ಸುದೀಪ್ ಪ್ರಖ್ಯಾತಿ ಗಳಿಸಲು ಕಾರಣವಾದ 'ಈಗ' ಸಿನಿಮಾ ಕೂಡ 2012 ಜುಲೈ 6 ರಂದೇ ತೆರೆಕಂಡಿತ್ತು. ಈ ಚಿತ್ರದ ಮೂಲಕ ಸುದೀಪ್ ಟಾಲಿವುಡ್ ನಲ್ಲಿಯ ಸ್ಟಾರ್ ನಟರಾಗಿ ಗುರುತಿಸಿಕೊಂಡರು.