ಕಿಚ್ಚ ಸುದೀಪ್ ಗೆ ಇಂದು ವಿಶೇಷವಾದ ದಿನ: ಯಾಕೆ?
''ಸಿಂಹನ ಫೋಟೋದಲ್ಲಿ ನೋಡಿರ್ತೀಯಾ...ಸಿನಿಮಾದಲ್ಲಿ ನೋಡಿರ್ತೀಯಾ... ಟಿವಿಯಲ್ಲಿ ನೋಡಿರ್ತೀಯಾ...ಅಷ್ಟೆ ಯಾಕೆ ಝೂನಲ್ಲಿ ನೋಡಿರ್ತೀಯಾ...ರಾಜ ಗಾಂಭೀರ್ಯದಿಂದ ಯಾವತ್ತಾದರೂ ಕಾಡಲ್ಲಿ ಓಡಾಡುವುದನ್ನ ನೋಡಿದ್ಯಾ.? ಒಂಟಿಯಾಗಿ ರೋಷದಿಂದ ಯಾವತ್ತಾದರೂ ಬೇಟೆ ಆಡುವುದನ್ನ ನೋಡಿದ್ಯಾ.? ಹೀಗೆ ರೋಷದಿಂದ ಹುರಿಗಟ್ಟಿದ ಮೀಸೆಯನ್ನು ಸವರುತ್ತಾ ಸುದೀಪ್ ಹೊಡೆದ ಡೈಲಾಗ್ ಮರೆಯಲು ಸಾಧ್ಯವಿಲ್ಲ.
ಅಬಿಮಾನಿಗಳು ಹುಚ್ಚೆದ್ದು ಕುಮಿಯುವಂತೆ ಮಾಡಿದ್ದ ಈ ಡೈಲಾಗ್ ಕೆಂಪೇಗೌಡ ಸಿನಿಮಾದ್ದು. ಈಗ್ಯಾಕೆ ಈ ಡೈಲಾಗ್ ನೆನಪಿಸುತ್ತಿದ್ದೀವಿ ಅಂದರೆ ಈ ಸೂಪರ್ ಹಿಟ್ ಸಿನಿಮಾಗೆ ಈಗ 9 ವರ್ಷದ ಸಂಭ್ರಮ. ಮಾರ್ಚ್ 10, 2011ರಲ್ಲಿ ತೆರೆಗೆ ಬಂದ ಕೆಂಪೇಗೌಡ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು.

ವೈರಲ್ ಆಗಿತ್ತು ಸುದೀಪ್ ಲುಕ್
ಸುದೀಪ್ ಖಾಕಿ ಖದರ್, ಉದ್ದನೆಯ ದಪ್ಪ ಮೀಸೆ ಅಭಿಮಾನಿಗಳ ಮನ ಸೆಳೆದಿತ್ತು. ಕೆಂಪೇಗೌಡ ಲುಕ್ ಸಖತ್ ವೈರಲ್ ಆಗಿತ್ತು. ಸಾಕಷ್ಟು ಮಂದಿ ಸುದೀಪ್ ಸ್ಟೈಲ್ ನಲ್ಲಿ ಮೀಸೆ ಬಿಟ್ಟಿದ್ದರು. ಈ ಸೂಪರ್ ಹಿಟ್ ಸಿನಿಮಾಗೆ ಈಗ 9ನೇ ವರ್ಷದ ಸಂಭ್ರಮ. ಈ ಸಿನಿಮಾಗೆ ಕಿಚ್ಚ ಸುದೀಪ್ ಅವರೆ ನಿರ್ದೇಶನ ಮಾಡಿದ್ದರು.

ಆರ್ಮುಗಂ ಆಗಿ ರವಿಶಂಕರ್ ಅಬ್ಬರ
ವಿಶೇಷ ಅಂದರೆ ಚಿತ್ರದ ಮೂಲಕ ರವಿಶಂಕರ್ ಕನ್ನಡ ಚಿತ್ರಪ್ರಿಯರಿಗೆ ಪರಿಚಿತರಾದರು. ಆರ್ಮುಗಂ ಪಾತ್ರದ ಮೂಲಕ ಚಿತ್ರದಲ್ಲಿ ಘರ್ಜಿಸಿದ್ದ ರವಿಶಂಕರ್ ಪಾತ್ರ ಕೂಡ ಸೂಪರ್ ಹಿಟ್ ಆಗಿತ್ತು. ಅರ್ಜುನ್ ಜನ್ಯ ಸಂಗೀತ ನೋಡುಗರನ್ನು ಮತ್ತಷ್ಟು ಸೆಳೆದಿತ್ತು.

ಸಿಂಗಂ ಸಿನಿಮಾದ ರಿಮೇಕ್
ಕೆಂಪೇಗೌಡ ತಮಿಳಿನ ಸಿಂಗಂ ಸಿನಿಮಾದ ರಿಮೇಕ್. ತಮಿಳಿನಲ್ಲಿ ನಟ ಸೂರ್ಯ ನಾಯನಾಗಿ ಮಿಂಚಿದ್ದರು. 2010ರಲ್ಲಿ ತೆರೆಗೆ ಬಂದ ಸಿಂಗಂ ತಮಿಳಿನಲ್ಲಿ ಸೂಪರ್ ಹಿಟ್ ಆಗಿತ್ತು. ಮಾರನೆ ವರ್ಷವೆ ಸುದೀಪ್ ಕನ್ನಡದಲ್ಲಿ ರಿಮೇಕ್ ಮಾಡಿ ರಿಲೀಸ್ ಮಾಡಿದರು. ಕನ್ನಡದ ಕೆಂಪೇಗೌಡ ಸಹ ಸೂಪರ್ ಹಿಟ್ ಆಯಿತು. ಈ ಬ್ಲಾಕ್ ಬಸ್ಟರ್ ಸಿನಿಮಾವೀಗ 9ನೇ ವರ್ಷದ ಸಂಭ್ರಮವನ್ನು ಆಚರಿಸುತ್ತಿದೆ.

ಫ್ಯಾಂಟಮ್ ಸಿನಿಮಾದಲ್ಲಿ ಸುದೀಪ್
ಸುದೀಪ್ ಸದ್ಯ ಫ್ಯಾಂಟಮ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ನಿರ್ದೇಶಕ ಅನೂಪ್ ಭಂಡಾರಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾವಿದು. ಮೊದಲ ಬಾರಿಗೆ ಅನೂಪ್ ಮತ್ತು ಸುದೀಪ್ ಕಾಂಬಿನೇಷನ್ ನಲ್ಲಿ ಬರುತ್ತಿರುವ ಕಾರಣ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಇನ್ನು ಸುದೀಪ್ ಅಭಿನಯದ ಕೋಟಿಗೊಬ್ಬ-3 ಸಿನಿಮಾ ರಿಲೀಸ್ ಗೆ ತಯಾರಿ ನಡೆಯುತ್ತಿದೆ. ವಿಶೇಷ ಅಂದರೆ ಚಿತ್ರದ ಮೂಲಕ ರವಿಶಂಕರ್ ಕನ್ನಡ ಚಿತ್ರಪ್ರಿಯರಿಗೆ ಪರಿಚಿತರಾದರು. ಆರ್ಮುಗಂ ಪಾತ್ರದ ಮೂಲಕ ಚಿತ್ರದಲ್ಲಿ ಘರ್ಜಿಸಿದ್ದ ರವಿಶಂಕರ್ ಪಾತ್ರ ಕೂಡ ಸೂಪರ್ ಹಿಟ್ ಆಗಿತ್ತು. ಅರ್ಜುನ್ ಜನ್ಯ ಸಂಗೀತ ನೋಡುಗರನ್ನು ಮತ್ತಷ್ಟು ಸೆಳೆದಿತ್ತು.


Click it and Unblock the Notifications











