For Quick Alerts
  ALLOW NOTIFICATIONS  
  For Daily Alerts

  ಸಂಕ್ರಾಂತಿಗೆ ಬರ್ತಿದೆ ಸುದೀಪ್ ಅಭಿನಯದ ಎರಡು ಸಿನಿಮಾಗಳ ಟೀಸರ್

  |
  Sudeep's 2 new teasers are being released for Sankranthi | SUDEEP | KOTIGOBBA 3 | FILMIBEAT KANNADA

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಈ ಬಾರಿಯ ಸಂಕ್ರಾಂತಿ ಹಬ್ಬ ಮತ್ತಷ್ಟು ವಿಶೇಷವಾಗಿರಲಿದೆ. ನೆಚ್ಚಿನ ನಟನ ಎರಡು ಸಿನಿಮಾಗಳ ಟೀಸರ್ ರಿಲೀಸ್ ಆಗುತ್ತಿದೆ. ಅಂದ್ಮೇಲೆ ಕಿಚ್ಚನ ಕಡೆಯಿಂದ ಅಭಿಮಾನಿಗಳಿಗೆ ಸಂಕ್ರಾಂತಿ ಸಂಭ್ರಮ ಜೋರಾಗಿರಲಿದೆ.

  ಅಂದ್ಹಾಗೆ ಸುದೀಪ್ ಅಭಿನಯದ ಕೋಟಿಗೊಬ್ಬ-3 ಸಿನಿಮಾದಿಂದ ವಿಶೇಷ ಉಡುಗೊರೆ ಸಿಗಲಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಮತ್ತೊಂದು ಸಿನಿಮಾ ಯಾವುದು ಎಂದು ಯೋಚಿಸುತ್ತಿದ್ದೀರಾ. ಕಿಚ್ಚ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ರವಿ ಬೋಪಣ್ಣ ಸಿನಿಮಾದ ಟೀಸರ್ ಕೂಡ ಸಂಕ್ರಾಂತಿಗೆ ಬಿಡುಗಡೆಯಾಗುತ್ತಿದೆ.

  ಸಂಕ್ರಾಂತಿಗೆ ಬರ್ತಿವೆ ಸ್ಟಾರ್ ನಟರ ಚಿತ್ರಗಳ ಪೋಸ್ಟರ್: ಅಭಿಮಾನಿಗಳಲ್ಲಿ ಸಂಭ್ರಮಸಂಕ್ರಾಂತಿಗೆ ಬರ್ತಿವೆ ಸ್ಟಾರ್ ನಟರ ಚಿತ್ರಗಳ ಪೋಸ್ಟರ್: ಅಭಿಮಾನಿಗಳಲ್ಲಿ ಸಂಭ್ರಮ

  ಕ್ರೇಜಿ ಸ್ಟಾರ್ ರವಿ ಚಂದ್ರನ್ ಅಭಿನಯದ ಮತ್ತು ನಿರ್ದೇಶನದ ರವಿ ಬೋಪಣ್ಣ ಸಿನಿಮಾದಲ್ಲಿ ಸುದೀಪ್ ವಕೀಲನಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೆ ಚಿತ್ರದ ಡಬ್ಬಿಂಗ್ ಮುಗಿಸಿರುವ ಸುದೀಪ್ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಸದ್ಯ ಹಬ್ಬದ ಪ್ರಯುಕ್ತ ನಾಳೆ ಬೆಳಗ್ಗೆ ಚಿತ್ರದ ಪುಟ್ಟ ಟೀಸರ್ ರಿಲೀಸ್ ಮಾಡುತ್ತಿದೆ ಚಿತ್ರತಂಡ.

  ಇನ್ನು ಸುದೀಪ್ ಅಭಿನಯದ ಬಹುನಿರೀಕ್ಷೆಯ ಕೋಟಿಗೊಬ್ಬ-3 ಸಿನಿಮಾದ ಮೋಷನ್ ಪೋಸ್ಟರ್ ಇಂದು ರಿಲೀಸ್ ಆಗುತ್ತಿದೆ. ಶಿವಕಾರ್ತಿಕ್ ನಿರ್ದೇಶನದ ಚಿತ್ರಕ್ಕೆ ಸೂರಪ್ಪ ಬಾಬು ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ಸುದೀಪ್ ಗೆ ನಾಯಕಿಯಾಗಿ ಮಲಯಾಳಂ ಬೆಡಗಿ ಮಡೊನ್ನಾ ಸೆಬಾಸ್ಟಿಯನ್ ಕಾಣಿಸಿಕೊಂಡಿದ್ದಾರೆ.

  English summary
  Kiccha Sudeep starrer Kotigobba-3 and Ravi Bopanna movie teaser will release for Sankranthi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X