For Quick Alerts
  ALLOW NOTIFICATIONS  
  For Daily Alerts

  ಸುದೀಪ್ 'ಕೋಟಿಗೊಬ್ಬ-3' ಸಿನಿಮಾ ಈ ವಿಶೇಷ ದಿನಕ್ಕೆ ಬಿಡುಗಡೆ?

  |

  ಕೊರೊನಾ 2ನೇ ಅಲೆಯ ಭೀಕರತೆ ಕಡಿಮೆ ಆಗುತ್ತಿದ್ದಂತೆ ಕರ್ನಾಟಕದಲ್ಲಿ ಲಾಕ್ ಡೌನ್ ಕೂಡ ಸಡಿಲಿಕೆಯಾಗಿದೆ. ಚಿತ್ರಮಂದಿರಗಳಲ್ಲೂ ಸಹ ಶೇ. 50ರಷ್ಟು ಭರ್ತಿಗೆ ಅವಕಾಶ ನೀಡಲಾಗಿದೆ. ಇದು ಚಿತ್ರರಂಗ ಮತ್ತು ಚಿತ್ರಾಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಅನೇಕ ಚಿತ್ರತಂಡ ಸಿನಿಮಾ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡುತ್ತಿದ್ದಾರೆ.

  ಇತ್ತೀಚಿಗಷ್ಟೆ ಶಿವರಾಜ್ ಕುಮಾರ್ ನಟನೆಯ 'ಭಜರಂಗಿ-2', 'ಸಗಲ', 'ಬಡವ ರಾಸ್ಕಲ್' ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಮಾಡುವ ಮೂಲಕ ಚಿತ್ರಾಭಿಮಾನಿಗಳ ಸಂತಸ ಹೆಚ್ಚಿಸಿದ್ದಾರೆ. ಇದೀಗ ಮತ್ತೊಂದು ಬಹುನಿರೀಕ್ಷೆಯ ಸಿನಿಮಾದ ಬಿಡುಗಡೆ ದಿನಾಂಕದ ಬಗ್ಗೆ ಚರ್ಚೆ ನಡೆಯುತ್ತಿದೆ.

  ಕಿಚ್ಚ ಸುದೀಪ್ ನಟನೆಯ 'ಕೋಟಿಗೊಬ್ಬ-3' ಬಿಡುಗಡೆ ಯಾವಾಗ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿರುವಾಗಲೇ ಹೊಸ ಸುದ್ದಿ ಸದ್ದು ಮಾಡುತ್ತಿದೆ. 'ಕೋಟಿಗೊಬ್ಬ-3' ವಿಶೇಷ ದಿನದಂದು ಅಭಿಮಾನಿಗಳ ಮುಂದೆ ಬರಲು ಸಜ್ಜಾಗುತ್ತಿದೆ ಎನ್ನುವ ಮಾತು ಜೋರಾಗಿ ಕೇಳಿಬರುತ್ತಿದೆ. ಆ ವಿಶೇಷ ದಿನ ಮತ್ಯಾವುದು ಅಲ್ಲ ಸೆಪ್ಟಂಬರ್ 2. ಮುಂದೆ ಓದಿ...

  ಸುದೀಪ್ ಹುಟ್ಟುಹಬ್ಬಕ್ಕೆ 'ಕೋಟಿಗೊಬ್ಬ-3'?

  ಸುದೀಪ್ ಹುಟ್ಟುಹಬ್ಬಕ್ಕೆ 'ಕೋಟಿಗೊಬ್ಬ-3'?

  ಸೆಪ್ಟಂಬರ್ ಎರಡು ಕಿಚ್ಚನ ಅಭಿಮಾನಿಗಳಿಗೆ ಹಬ್ಬದ ದಿನ. ಅಂದರೆ ಸುದೀಪ್ ಹುಟ್ಟಿದ ದಿನ. ಹಾಗಾಗಿ ಜನ್ಮದಿನದ ವಿಶೇಷವಾಗಿ 'ಕೋಟಿಗೊಬ್ಬ-3' ತೆರೆಗೆ ಬರಲಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಸದ್ಯದಲ್ಲೇ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ.

  ಡಬ್ಬಿಂಗ್ ಮುಗಿಸಿರುವ ಸುದೀಪ್

  ಡಬ್ಬಿಂಗ್ ಮುಗಿಸಿರುವ ಸುದೀಪ್

  ಅಂದಹಾಗೆ ಇತ್ತೀಚಿಗಷ್ಟೆ ಕಿಚ್ಚ ಸುದೀಪ್ ಚಿತ್ರದ ಡಬ್ಬಿಂಗ್ ಮುಗಿಸಿದ್ದರು. ತನ್ನ ಡಬ್ಬಿಂಗ್ ಮುಗಿಸುವ ಮೂಲಕ 'ಕೋಟಿಗೊಬ್ಬ-3' ಚಿತ್ರದ ಕೆಲಸ ಸಂಪೂರ್ಣವಾಗಿ ಮುಕ್ತಾಯವಾಗಿದೆ ಎಂದು ಕಿಚ್ಚ ಹೇಳಿದ್ದರು. ಜೊತೆಗೆ ಶೀಘ್ರದಲ್ಲೇ ಬಿಡುಗಡೆ ದಿನಾಂಕ ಅನೌನ್ಸ್ ಮಾಡುವುದಾಗಿ ಸುದೀಪ್ ಬಹಿರಂಗ ಪಡಿಸಿದ್ದರು. ಹಾಗಾಗಿ ಸಿನಿಮಾ ಸುದೀಪ್ ಹುಟ್ಟುಹಬ್ಬದ ದಿನವೇ ಬರಲಿದೆ ಎನ್ನವ ಮಾತು ಕೇಳಿಬರುತ್ತಿದೆ.

  'ವಿಕ್ರಾಂತಿ ರೋಣ' ಬಿಡುಗಡೆಗೆ ಸಿದ್ಧವಾಗುತ್ತಿದೆ

  'ವಿಕ್ರಾಂತಿ ರೋಣ' ಬಿಡುಗಡೆಗೆ ಸಿದ್ಧವಾಗುತ್ತಿದೆ

  ಅಂದಹಾಗೆ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ಕೂಡ ಚಿತ್ರೀಕರಣ ಮುಗಿಸಿ ಪ್ರಿ-ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಹಾಗಾಗಿ 'ವಿಕ್ರಾಂತ್ ರೋಣ'ಕಿಂತ ಮುಂಚಿತವಾಗಿ 'ಕೋಟಿಗೊಬ್ಬ-3' ಚಿತ್ರಮಂದಿರಕ್ಕೆ ಎಂಟ್ರಿ ಕೊಡಲು ಸಜ್ಜಾಗಿದೆ. ಒಂದು ವೇಳೆ ಕಿಚ್ಚನ ಹುಟ್ಟುಹಬ್ಬದ ದಿನವೇ 'ಕೋಟಿಗೊಬ್ಬ-3' ಬಿಡುಗಡೆಯಾದರೆ ಕಿಚ್ಚನ ಅಭಿಮಾನಿಗಳಿಗೆ ಡಬಲ್ ಸಂಭ್ರಮವಾಗಲಿದೆ.

  ಹುಡುಗರನ್ನ ಹೊಗಳಿರೋ ಸಾಂಗ್ ನ ಇದುವರೆಗೂ ಯಾರು ಮಾಡಿಲ್ಲ
  ಕೋಟಿಗೊಬ್ಬ-3 ಬಗ್ಗೆ

  ಕೋಟಿಗೊಬ್ಬ-3 ಬಗ್ಗೆ

  ಅಂದಹಾಗೆ 'ಕೋಟಿಗೊಬ್ಬ-3' ಶಿವ ಕಾರ್ತಿಕ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾ ಸಿನಿಮಾ. ಮೊದಲು ಮತ್ತು ಎರಡನೇ ಭಾಗದಂತೆ 3ನೇ ಭಾಗದಲ್ಲೂ ಕಿಚ್ಚ 2 ಶೇಡ್ ಗಳಲ್ಲಿ ಮಿಂಚಿದ್ದಾರೆ. ಕಿಚ್ಚನಿಗೆ ನಾಯಕಿಯಾಗಿ ಮಲಯಾಳಂ ಸುಂದರಿ ಮಡೊನ್ನಾ ಸೆಬಾಸ್ಟಿಯನ್ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ 'ಪ್ರೇಮಂ' ಸುಂದರಿ ಕನ್ನಡದಲ್ಲಿ ನಟಿಸಿದ್ದಾರೆ.

  English summary
  Kotigobba 3 movie Release Date: Kichcha Sudeep starrer Kotigobba-3 likely to release on Sudeep birthday on September 2nd.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X