ವಿಶೇಷ ದಿನದಂದು ತೆರೆಗೆ ಬರ್ತಿದೆ 'ಕೋಟಿಗೊಬ್ಬ-3': ತಪ್ಪಿದ ಬಾಕ್ಸ್ ಆಫೀಸ್ ವಾರ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇವತ್ತಿನಿಂದ ಫ್ಯಾಂಟಮ್ ಸಿನಿಮಾದ ಚಿತ್ರೀಕರಣ ಪ್ರಾರಂಭಿಸಿದ್ದಾರೆ. ಈಗಾಗಲೆ ಕೋಟಿಗೊಬ್ಬ-3 ಚಿತ್ರೀಕರಣ ಮುಗಿಸಿದ್ದು ರಿಲೀಸ್ ಗೆ ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಟೀಸರ್ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿರುವ 'ಕೋಟಿಗೊಬ್ಬ-3' ರಿಲೀಸ್ ಡೇಟ್ ಬಹಿರಂಗವಾಗಿದೆ.

Recommended Video

ವಿಶೇಷ ದಿನದಂದು ತೆರೆಗೆ ಬರ್ತಿದೆ 'ಕೋಟಿಗೊಬ್ಬ-3' | Darshan | Sudeep | DBoss | Kotigobba 3 | Robert

ಈಗಾಗಲೆ ಕೇಳಿಬರುತ್ತಿರುವ ಸುದ್ದಿಯ ಪ್ರಕಾರ 'ಕೋಟಿಗೊಬ್ಬ-3' ಏಪ್ರಿಲ್ ನಲ್ಲಿ ತೆರೆಗೆ ಬರುವ ಸಾಧ್ಯತೆ ಇತ್ತು. ಆದರೀಗ ಚಿತ್ರದ ಹೊಸ ರಿಲೀಸ್ ಡೇಟ್ ಮೂಲಗಳಿಂದ ಲಭ್ಯವಾಗಿದೆ. ಅಂದುಕೊಂಡ ದಿನಾಂಕಕ್ಕಿಂತ ಸಿನಿಮಾ ರಿಲೀಸ್ ಮುಂದಕ್ಕೆ ಹೋಗಿದೆ. ಇದರಿಂದ ಸ್ಯಾಂಡಲ್ ವುಡ್ ನಲ್ಲಿ ಬಾಕ್ಸ್ ಆಫೀಸ್ ವಾರ್ ತಪ್ಪಿದೆ. ಹಾಗಾದರೆ ಕೋಟಿಗೊಬ್ಬನ ದರ್ಶನ ಯಾವಾಗ? ಮುಂದೆ ಓದಿ..

ಮೇ-1 ಬರ್ತಿದೆ ಕೋಟಿಗೊಬ್ಬ-3

ಮೇ-1 ಬರ್ತಿದೆ ಕೋಟಿಗೊಬ್ಬ-3

ಸದ್ಯ ಕೇಳಿ ಬರುತ್ತಿರುವ ಮಾಹಿತಿ ಪ್ರಕಾರ ಸಿನಿಮಾ ಮೇ 1ಕ್ಕೆ ಅಂದರೆ ಕಾರ್ಮಿಕ ದಿನಾಚರಣೆ ದಿನ ತೆರೆಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಪೋಸ್ಟ್ ಪ್ರೊಡಕ್ಷನ್ ಕೆಲಸ ಬಾಕಿ ಇರುವ ಕಾರಣ ಚಿತ್ರ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ ಎಂದು ಹೇಳಲಾಗುತ್ತಿದೆ.

ಮಾಣಿಕ್ಯ ಚಿತ್ರಕ್ಕು ಕೋಟಿಗೊಬ್ಬನಿಗೂ ಇದೆ ಲಿಂಕ್

ಮಾಣಿಕ್ಯ ಚಿತ್ರಕ್ಕು ಕೋಟಿಗೊಬ್ಬನಿಗೂ ಇದೆ ಲಿಂಕ್

'ಕೋಟಿಗೊಬ್ಬ-3'ಗೂ ಕಿಚ್ಚ ಅಭಿನಯದ ಮಾಣಿಕ್ಯ ಸಿನಿಮಾಗೂ ಒಂದು ಲಿಂಕ್ ಇದೆ. ಹೌದು, ಮಾಣಿಕ್ಯ ಸಿನಿಮಾ ಕೂಡ ಮೇ 1ಕ್ಕೆ ತೆರೆಗೆ ಬಂದಿತ್ತು. ಅಲ್ಲದೆ ಸೂಪರ್ ಹಿಟ್ ಆಗಿರುವುದಲ್ಲದೆ ಬಾಕ್ಸ್ ಆಫೀಸ್ ನಲ್ಲಿಯೂ ಉತ್ತಮ ಕಲೆಕ್ಷನ್ ಮಾಡಿತ್ತು. ಈಗ ಮತ್ತದೆ ದಿನ ಸುದೀಪ್ ಅಭಿನಯದ ಕೋಟಿಗೊಬ್ಬ-3 ಸಿನಿಮಾ ತೆರೆಗೆ ಬರುತ್ತಿದೆ ಎನ್ನುವ ಸುದ್ದಿ ಕೇಳಿ ಬರುತ್ತಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ.

ತಪ್ಪಿದ ಬಾಕ್ಸ್ ಆಫೀಸ್ ವಾರ್

ತಪ್ಪಿದ ಬಾಕ್ಸ್ ಆಫೀಸ್ ವಾರ್

ಈ ಮೊದಲು ಕೋಟಿಗೊಬ್ಬ-3 ಸಿನಿಮಾ ಏಪ್ರಿಲ್ ನಲ್ಲಿ ತೆರೆಗೆ ಬರಲಿದೆ ಎಂದು ಹೇಳಲಾಗಿತ್ತು. ಏಪ್ರಿಲ್ 10ಕ್ಕೆ ಕೋಟಿಗೊಬ್ಬ-3 ರಿಲೀಸ್ ಆಗಲಿದೆ ಎನ್ನುವ ಮಾತು ಕೇಳಿ ಬರುತ್ತಿತ್ತು. ವಿಶೇಷ ಅಂದರೆ ಅದೆ ದಿನ ಸ್ಯಾಂಡಲ್ ವುಡ್ ನ ಮತ್ತೊಂದು ಬಹುನಿರೀಕ್ಷೆಯ ರಾಬರ್ಟ್ ಸಿನಿಮಾ ಕೂಡ ತೆರೆಗೆ ಬರುತ್ತಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ವಾರ್ ಆಗುವ ಸಾಧ್ಯತೆ ಇತ್ತು. ಆದರೀಗ ಕೋಟಿಗೊಬ್ಬ-3 ಮುಂದಕ್ಕೆ ಹೋಗಿರುವುದರಿಂದ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ವಾರ್ ತಪ್ಪಿದೆ.

ಚಿತ್ರತಂಡ ಅಧಿಕೃತ ಮಾಹಿತಿ ಬಹಿರಂಗ ಪಡಿಸಿಲ್ಲ

ಚಿತ್ರತಂಡ ಅಧಿಕೃತ ಮಾಹಿತಿ ಬಹಿರಂಗ ಪಡಿಸಿಲ್ಲ

ಕೋಟಿಗೊಬ್ಬ-3 ಸಿನಿಮಾದ ರಿಲೀಸ್ ದಿನಾಂಕದ ಬಗ್ಗೆ ಚಿತ್ರತಂಡ ಯಾವುದೆ ಅಧಿಕೃತ ಮಾಹಿತಿ ಬಹಿರಂಗ ಪಡಿಸಿಲ್ಲ. ಸಧ್ಯದಲ್ಲೇ ರಿಲೀಸ್ ಡೇಟ್ ಬಹಿರಂಗ ಪಡಿಸುವ ಸಾಧ್ಯತೆ ಇದೆ. ಚಿತ್ರದಲ್ಲಿ ಸುದೀಪ್ ಗೆ ನಾಯಕಿಯಾಗಿ ಮಲಯಾಳಂ ಬೆಡಗಿ ಮಡೊನ್ನಾ ಸೆಬಾಸ್ಟಿಯನ್ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ಬಣ್ಣಹಚ್ಚಿರುವ ಮಡೊನ್ನಾ ಕನ್ನಡ ಚಿತ್ರಾಭಿಮಾನಿಗಳ ಮುಂದೆ ಬರಲು ಉತ್ಸುಕರಾಗಿದ್ದಾರೆ.

More from Filmibeat

English summary
Kannada Actor Sudeep starrer Kotigobba-3 may release on May 1 for Labour Day.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X