'ಕೋಟಿಗೊಬ್ಬ' ಸುದೀಪ್ ನೋಡಿ ಅಭಿಮಾನಿಗಳು ಫುಲ್ ಖುಷ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅಭಿನಯ ಚಕ್ರವರ್ತಿ ಸಿನಿಮಾಗಳಲ್ಲೂ ನಿತರಾಗಿದ್ದಾರೆ. ವಿಕ್ರಾಂತ್ ರೋಣ ಮತ್ತು ಕೋಟಿಗೊಬ್ಬ-3 ಚಿತ್ರೀಕರಣ ಮುಗಿಸಿರುವ ಕಿಚ್ಚ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ.

ಸದ್ಯ ಕೋಟಿಗೊಬ್ಬ-3 ಸಿನಿಮಾದ ರಿಲೀಸ್ ಗೆ ತಯಾರಿ ನಡೆಯುತ್ತಿದ್ದು, ಪ್ರಮೋಷನ್ ಕೆಲಸಗಳು ಪ್ರಾರಂಭವಾಗಿದೆ. ಈಗಾಗಲೇ ಹಾಡು ಮತ್ತು ಟೀಸರ್ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದ್ದ ಕೋಟಿಗೊಬ್ಬ-3 ಈಗ ಮೇಕಿಂಗ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ.

ಇತ್ತೀಚಿಗಷ್ಟೆ ವಿಕ್ರಾಂತ್ ರೋಣನನ್ನು ನೋಡಿ ಸಂತೋಷ ಪಟ್ಟಿದ್ದ ಫ್ಯಾನ್ಸ್ ಇದೀಗ ಕೋಟಿಗೊಬ್ಬನ ದರ್ಶನ ಮಾಡಿ ಫುಲ್ ಖುಷ್ ಆಗಿದ್ದಾರೆ. ಅಭಿಮಾನಿಗಳ ಆಸೆ, ನಿರೀಕ್ಷೆಯಂತೆ ಇಂದು (ಮಾರ್ಚ್ 7) ಕೋಟಿಗೊಬ್ಬ-3 ಸಿನಿಮಾದ ಮೇಕಿಂಗ್ ವಿಡಿಯೋ ರಿಲೀಸ್ ಆಗಿದೆ.

Sudeep starrer Kotigobba-3 movie making video please

ಇಂದು (ಮಾರ್ಚ್ 7) ಗೆಳಗ್ಗೆ 11 ಗಂಟೆಗೆ ಚಿತ್ರದ ಮೇಕಿಂಗ್ ಬಿಡುಗಡೆಯಾಗಿದೆ. ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಈ ಹಾಡು ರಿಲೀಸ್ ಆಗಿದೆ. ಕಿಚ್ಚ ಸುದೀಪ್ ಮತ್ತು ಮಡೊನ್ನಾ ಸಬಸ್ಟಿಯನ್ ಜೊತೆಗೆ ತಂತ್ರಜ್ಞರ ಶ್ರಮ ಮೇಕಿಂಗ್ ವಿಡಿಯೋದ ಹೈಲೆಟ್ ಆಗಿದೆ.

ಒಂದು ಫ್ರೇಮ್ ನಲ್ಲಿ ನಟಿ ಅಭಿರಾಮಿ ಕಾಣಿಸಿಕೊಂಡಿದ್ದಾರೆ. ಶಿವ ಕಾರ್ತಿಕ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಕೋಟಿಗೊಬ್ಬ-3 ಸಿನಿಮಾಗೆ ಚಿತ್ರಕ್ಕೆ ಸೂರಪ್ಪ ಬಾಬು ಬಂಡವಾಳ ಹಾಕಿದ್ದಾರೆ. ಇನ್ನು ಉಳಿದಂತೆ ಚಿತ್ರದಲ್ಲಿ ರವಿಶಂಕರ್, ಶ್ರದ್ಧಾ ದಾಸ್, ಅಫ್ತಾಬ್ ಶಿವದಾಸಾನಿ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.

More from Filmibeat

English summary
Actor Sudeep starrer Kotigobba-3 movie making video please.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X