ಲಾಕ್ ಡೌನ್ ನಡುವೆಯೂ ಸುದೀಪ್ 'ಕೋಟಿಗೊಬ್ಬ-3' ಸಿನಿಮಾದಿಂದ ಬಂತು ಭರ್ಜರಿ ಸುದ್ದಿ
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ 'ಫ್ಯಾಂಟಂ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಬಹುನಿರೀಕ್ಷೆಯ ಕೊಟಿಗೊಬ್ಬ-3 ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಎಲ್ಲವೂ ಅಂದುಕೊಂಡಂತ್ತೆ ಅಗಿದ್ದರೆ ಸಿನಿಮಾ ಮೇ 1 ಕಾರ್ಮಿಕರ ದಿನಾಚರಣೆಯ ದಿನ ತೆರೆಗೆ ಬರಬೇಕಿತ್ತು.
Recommended Video
ಆದರೀಗ ಕೊರೊನಾ ಲಾಕ್ ಡೌನ್ ಮೇ 3ರ ವರೆಗೂ ಮುಂದುವರೆದ ಪರಿಣಾಮ ಸಿನಿಮಾ ಮೇ 1 ತೆರೆಗೆ ಬರುತ್ತಿಲ್ಲ. ಪೈಲ್ವಾನ್ ಸಿನಿಮಾ ನಂತರ ಸುದೀಪ್ ಅಭಿಮಾನಿಗಳ ಮುಂದೆ ಬಂದಿಲ್ಲ. ಸದ್ಯ ರಿಲೀಸ್ ಗೆ ಸಿದ್ಧವಾಗಿರುವ ಕೋಟಿಗೊಬ್ಬ-3 ಸಿನಿಮಾ ಮೇಲೆ ನಿರೀಕ್ಷೆ ಸಹ ಹೆಚ್ಚಾಗಿದೆ. ಈ ನಡುವೆ ಸಿನಿಮಾದಿಂದ ಭರ್ಜರಿ ಸುದ್ದಿಯೊಂದು ಕೇಳಿ ಬರುತ್ತಿದೆ. ಮುಂದೆ ಓದಿ..

ಕೋಟಿಗೊಬ್ಬ-3 ಟಿವಿ ರೈಟ್ಸ್ ಮಾರಾಟ
ಬಹುನಿರೀಕ್ಷೆಯ ಕೋಟಿಗೊಬ್ಬ-3 ಸಿನಿಮಾದ ಟಿವಿ ರೈಟ್ಸ್ ಭರ್ಜರಿ ಮೊತ್ತಕ್ಕೆ ಸೇಲ್ ಆಗಿದೆ. ಈ ಬಗ್ಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣಲ್ಲಿ ಶೇರ್ ಮಾಡುತ್ತಿದ್ದಾರೆ. ಕೊರೊನಾ ಲಾಕ್ ಡೌನ್ ನಡುವೆಯೂ ಟಿವಿ ರೈಟ್ಸ್ ಸೇಲ್ ಆಗಿರುವ ಸುದ್ದಿ ವೈರಲ್ ಆಗಿದೆ.

9 ಕೋಟಿಗೆ ಕೊಟಿಗೊಬ್ಬ-3 ಟಿವಿ ರೈಟ್ಸ್ ಮಾರಾಟ
ಕೋಟಿಗೊಬ್ಬ-3 ಟಿವಿ ರೈಟ್ಸ್ ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ. ಕಲರ್ಸ್ ಕನ್ನಡ ವಾಹಿನಿಗೆ ಕೋಟಿಗೊಬ್ಬ-3 ರೈಟ್ಸ್ ಮಾರಾಟವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ 9 ಕೋಟಿಗೆ ಸೇಲ್ ಆಗಿದೆ. ಇನ್ನು ಕೆಲವು ಮೂಲಗಳ ಪ್ರಕಾರ 8.7 ಕೋಟಿಗೆ ಟಿವಿ ರೈಟ್ಸ್ ಮಾರಟವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡ ಎಲ್ಲಿಯೂ ಮಾಹಿತಿ ಬಹಿರಂಗ ಪಡಿಸಿಲ್ಲ.

ವಿವಾದಗಳಿಂದ ಸದ್ದು ಮಾಡಿದ ಕೋಟಿಗೊಬ್ಬ-3
ಕೊಟಿಗೊಬ್ಬ-3 ಸಿನಿಮಾ ವಿವಾದಗಳಿಂದನೆ ಸದ್ದು ಮಾಡುತ್ತಿದೆ. ಪೋಲೆಂಡ್ ಚಿತ್ರೀಕರಣ ವೇಳೆ ನಡೆದ ಹಣಕಾಸಿನ ವ್ಯವಹಾರ ಇನ್ನೂ ಬಗೆಹರಿದಿಲ್ಲ. ಮುಂಬೈ ಮೂಲದ ವ್ಯಕ್ತಿಗಳಾದ ಅಜಯ್ ಪಾಲ್ ಮತ್ತು ಸಂಜಯ್ ಪಾಲ್ ಎನ್ನುವರೂ ಚಿತ್ರತಂಡ ಭಾಕಿ ಹಣ ನೀಡಿಲ್ಲ, ಹಣ ಕೊಡುವವರೆಗೂ ಸಿನಿಮಾ ರಿಲೀಸ್ ಮಾಡಲು ಬಿಡುವುದಿಲ್ಲ ಎಂದು ಪಟ್ಟುಹಿಡಿದ್ದಾರೆ ಎಂದು ಹೇಳಲಾಗುತ್ತಿದೆ.

ಟೀಸರ್ ಡಿಲೀಟ್ ಆಗಿತ್ತು
ಕೊಟಿಗೊಬ್ಬ-3 ಸಿನಿಮಾತಂಡ ಬಾಕಿ ಹಣ ನೀಡಿಲ್ಲ ಎಂದು ಇತ್ತೀಚಿಗೆ ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದ್ದ ಟೀಸರ್ ಅನ್ನು ಡಿಲೀಟ್ ಮಾಡಿಸಿದ್ದರು. ಪೋಲೆಂಡ್ ನಲ್ಲಿ ಚಿತ್ರೀಕರಿಸಲಾದ ದೃಶ್ಯಗಳು ಅಜಯ್ ಪಾಲ್ ಮತ್ತು ಸಂಜಯ್ ಪಾಲ್ ಕಂಪೆನಿ ಹೆಸರಿನಲ್ಲಿದೆ. ಭಾಕಿ ಹಣ ನೀಡದೆ ಟೀಸರ್ ರಿಲೀಸ್ ಮಾಡಲಾಗಿದೆ ಎನ್ನುವ ಕಾರಣಕ್ಕೆ ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿದ್ದ ಟೀಸರ್ ಅನ್ನು ಡಿಲೀಟ್ ಮಾಡಿಸಲಾಗಿತ್ತು. ಆದರೆ ನಿರ್ಮಾಪಕ ಸೂರಪ್ಪ ಬಾಬು ಕಾನೂನು ಮೂಲಕ ಹೋರಾಟ ಮಾಡುತ್ತೇವೆ, ಸಿನಿಮಾ ಅಂದುಕೊಂಡ ದಿನಕ್ಕೆ ರಿಲೀಸ್ ಆಗೆ ಆಗುತ್ತೆ ಎಂದು ಹೇಳಿದ್ದರು. ಸದ್ಯ ಸಿನಿಮಾ ಯಾವಾಗ ತೆರೆಗೆ ಬರುತ್ತೆ ಎನ್ನುವುದು ಅಭಿಮಾನಿಗಳ ಕುತೂಹಲ.

ಸುದೀಪ್ ಗೆ ಮಡೋನಾ ನಾಯಕಿ
ಕೋಟಿಗೊಬ್ಬ ಪ್ರಾಂಚೈಸಿಯ ಮೂರನೆ ಸಿನಿಮಾ ಇದಾಗಿದ್ದು ಚಿತ್ರಕ್ಕೆ ಶಿವ ಕಾರ್ತಿಕ್ ಆಕ್ಷನ್ ಕಟ್ ಹೇಳಿದ್ದಾರೆ. ಸುದೀಪ್ ಗೆ ನಾಯಕಿಯಾಗಿ ಮಲಯಾಳಂ ಸುಂದರಿ ಮಡೋನಾ ಸೆಬಾಸ್ಟಿಯನ್ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಮಡೋನಾ ಕನ್ನಡ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಸದ್ಯ ಚಿತ್ರದ ಟಿವಿ ರೈಟ್ಸ್ ಮಾರಾಟ ಮಾಡಿರುವ ಸಿನಿಮಾತಂಡ ಲಾಕ್ ಡೌನ್ ಮುಗಿಯುತ್ತಿದ್ದಂತೆ ರಿಲೀಸ್ ಮಾಡುವ ಸಾಧ್ಯತೆ ಇದೆ.


Click it and Unblock the Notifications











