ಇದು ಸುದೀಪ್ ಅಭಿಮಾನಿಗಳು ಸಂತಸ ಪಡುವ ಸುದ್ದಿ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಸಿನಿಮಾ ರಿಲೀಸ್ ಗೆ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ. ಕೋಟಿಗೊಬ್ಬ-3 ಯಾವಾಗ ತೆರೆಗೆ ಬರುತ್ತೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೆ ರಿಲೀಸ್ ಆಗಿರುವ ಮೋಷನ್ ಪೋಸ್ಟರ್ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿತ್ತು.

ಕೋಟಿಗೊಬ್ಬ-3 ಚಿತ್ರತಂಡ ಅಭಿಮಾನಿಗಳಿಗೆ ಶಿವರಾತ್ರಿ ಗಿಫ್ಟ್ ನೀಡಲು ಸಿದ್ಧವಾಗಿದೆ.
ಹೌದು, ಶಿವರಾತ್ರಿಗೆ ಅಂದರೆ ಫೆಬ್ರವರಿ 21ಕ್ಕೆ ಬಹುನಿರೀಕ್ಷೆಯ ಕೋಟಿಗೊಬ್ಬ-3 ಚಿತ್ರದ ಟೀಸರ್ ರಿಲೀಸ್ ಆಗುತ್ತಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಬಹಿರಂಗ ಪಡಿಸಿದೆ. ಫೆಬ್ರವರಿ 21ರಂದು ಮಧ್ಯಾಹ್ನ 12:01ಕ್ಕೆ ಚಿತ್ರದ ಟೀಸರ್ ರಿಲೀಸ್ ಆಗುತ್ತಿದೆ.

ಶಿವಕಾರ್ತಿಕ್ ಆಕ್ಷನ್ ಕಟ್ ಹೇಳಿರುವ ಚಿತ್ರಕ್ಕೆ ನಿರ್ಮಾಪಕ ಸೂರಪ್ಪಬಾಬು ಬಂಡವಾಳ ಹೂಡಿದ್ದಾರೆ. ಕೋಟಿಗೊಬ್ಬ ಸರಣಿಯ 3ನೇ ಆವೃತ್ತಿ ಇದಾಗಿದ್ದು ಚಿತ್ರ ಸಾಕಷ್ಟು ಕುತೂಹಲ ಮೂಡಿಸಿದೆ. ಅಂದ್ಹಾಗೆ ಚಿತ್ರದಲ್ಲಿ ಸುದೀಪ್ ಗೆ ಜೋಡಿಯಾಗಿ ಮಲಯಾಳಂ ಬೆಡಗಿ ಮಡೋನಾ ಸೆಬಾಸ್ಟಿನ್ ಕಾಣಿಸಿಕೊಂಡಿದ್ದಾರೆ.

Sudeep Starrer Kotigobba-3 Teaser Released On February 21

ಮಡೋನಾ ಮೊದಲ ಬಾರಿಗೆ ಕನ್ನಡದಲ್ಲಿ ಬಣ್ಣಹಚ್ಚಿದ್ದು ಕನ್ನಡ ಅಭಿಮಾನಿಗಳ ಮುಂದೆ ಬರಲು ಉತ್ಸಕರಾಗಿದ್ದಾರೆ. ಇನ್ನು ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಸದ್ಯ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಕೋಟಿಗೊಬ್ಬ-3 ಟೀಸರ್ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿದೆ.

More from Filmibeat

English summary
Kannada Actor Sudeep starrer Kotigobba-3 teaser released on February 21 for Shivaratri special.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X